ವಾರ್ಡ ನಂ 28 ಅನುದಾನಿತ ಶೌಚಾಲಯದಲ್ಲಿ , ನಮ್ಮ ಮೂತ್ರ ನಮ್ಮ ಕಾಲಿಗೆ : ಗದಗ-ಬೆಟಗೇರಿ ನಗರ ಸಭೆ ನಿರ್ಮಾಣದ ಶೌಚಾಲಯದ ಭಾಗ್ಯ 

graochandan1@gmail.com
3 Min Read

ಗದಗ: ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯಲ್ಲಿ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು ಅದರ ಪೈಕಿ ಶೌಚಾಲಯಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಇದಕ್ಕೆ ನಗರ ಸಭೆ ಸದಸ್ಯರು ಪೋಟೊಗೆ ಪೋಸು ಕೊಟ್ಟು ನೂತನ ಶೌಚಾಲಯ ಉದ್ಘಾಟನೆ ಮಾಡಿ ಹೋದರು ಆದರೆ ಅಲ್ಲಿನ ಶೌಚಾಲಯದ ಕೆಲಗಳೇ ಅದ್ವಾನ ಸ್ವರೂಪ ಪಡೆದಿದೆ ಮೂತ್ರ ಮಾಡಿದರೆ ಡ್ರೈನೇಜ್ ಹೋಗಿ ಸೇರಬೇಕಾದ ಮೂತ್ರ ತಿರುಗಿ ತಿರುಗೆ ಮೂತ್ರಮಾಡಿದವರ ಕಾಲಿಗೆ ಬರುತ್ತಿದ್ದು ಗಬ್ಬೆದ್ದು ನಾರುತ್ತಿದ್ದೆ ಕಳೆದ ಒಂದು ವರ್ಷದಿಂದ ನಿರ್ಮಾಣ ಮಾಡಿದ ಶೌಚಾಲಯ ಸಾರ್ವಜನಿಕರು ಬಳಸುವಲ್ಲಿ ಹಿಂದೆ ಮುಂದು ನೋಡುತ್ತಿದ್ದಾರೆ.

ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಷನ 2.0 ಯೋಜನೆ ಅಡಿಯಲ್ಲಿ ನಗರದ ಹಾತಲಗೇರಿ ನಾಕಾದಲ್ಲಿ ವಾರ್ಡ ನಂ 28 ಸದಸ್ಯರಾದ ಅನಿಲ ಅಬ್ಬಿಗೇರಿ ಅವರ ಅನುದಾನದಲ್ಲಿ ಹಳೇ ಶೌಚಾಲಯ ನೆಲಸಮಗೊಳಿಸಿ ಹೊಸದಾಗಿ 5 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣ ಕಾರ್ಯ ಕೈಗೊಂಡು ಕೆಲವೇ ತಿಂಗಳಲ್ಲಿ ನೂತನ ಶೌಚಾಲಯ ಉದ್ಘಾಟನೆ ಮಾಡಿದರು ಆದರೆ ಈ ಶೌಚಾಲಯ ಸಾರ್ವಜನಿಕರಿಗೆ ಉಪಯೋಗ ಆಗದೆ 5 ಲಕ್ಷ ರೂಪಾಯಿಗಳಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಬಹುದಾಗಿತ್ತು ಆದರೆ ಇಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿ ಅದರಲ್ಲಿಯೂ ಸಾರ್ವಜನಿಕರು ಮಾಡಿದ ಮೂತ್ರ ಮತ್ತೆ ಅವರ ಕಾಲಡಿ ಬಂದು ಬಂದು ಮೆಟ್ಟಿಲ್ಲುಗಳ ಮೂಲಕ ಹೊರಗೆ ಸೇರುತ್ತದೆ ಮೂಲ ಸೌಕರ್ಯದ ಸಂಪರ್ಕ ಸಿಗದೆ ಸಾರ್ವಜನಿಕರು ಕಾಮಗಾರಿ ಮಾಡಿದ ನಗರ ಸಭೆಗೆ ಚಿ ತೂ ಎಂದು ಉಗಿಯುತ್ತಿದ್ದಾರೆ.

ಶೌಚಾಲಯಕ್ಕೆ ಹೋಗಲು ದಾರಿ ಇಲ್ಲ:

- Advertisement -
Ad image

ಕನಿಷ್ಠ ಪಕ್ಷ ಶೌಚಾಲಯಕ್ಕೆ ಹೋಗಲು ರಸ್ತೆಯಾದರು ಮಾಡಬೇಕಿತ್ತು ಆದರೆ ಇಂದಿಗೂ ನಟ್ಟು ನಡುವೇ ಇರುವ ಹೊಲಸು ತುಂಬಿದ ಗಟಾರು ದಾಟಿನೆ ಜಿಗಿದು ಹೋಗುವಂತ ಸ್ಥಿತಿಗೆ ಇದೆ ಶೌಚಾಲಯ ಒಳಗಡೆಯೇ ಗಬ್ಬು ನಾಥ ನೆಪಮಾತ್ರಕ್ಕೆ ನಗರ ಸಭೆ ಸಿಬ್ಬಂದಿ ಶೌಚಾಲಯ ಸ್ವಚ್ಚತಾ ಗೊಳಿಸುತ್ತಾರೆ ಅವರು ನಿರ್ಮಾಣ ಮಾಡಿದ ಗುತ್ತಿಗೆದಾರನಿಗೆ ನಗರ ಸಭೆಗೆ ಬೈದು ಹೋಗುತ್ತಾರೆ ಎಂದು ಸ್ಥಳೀಯ ವ್ಯಾಪಾರಸ್ಥರು ಹೇಳಿದ್ದಾರೆ.

ಬೀಗ ಹಾಕಿದ ಮಹಿಳಾ ಶೌಚಾಲಯ:

ದೊಡ್ಡದಾಗಿ ಶೌಚಾಲಯ ನಿರ್ಮಾಣ ಮಾಡಿದ್ದೇ ಒಂದು ಸಾಧನೆ ಎಂದು ಕೈ ಬಾಯಿ ಕೊಳೆದುಕೊಂಡು ಕೆಲವರು ಇದನ್ನು ಗಮನಿಸಿಲ್ಲ ಹಾತಲಗೇರಿ ನಾಕಾ ಸುತ್ತ ಮುತ್ತಲಿನ ಪರಿಸರದಲ್ಲಿ ಸಾರ್ವಜನಿಕಗೆ ಅನುಕೂಲವಾಗಲೂ ನಿರ್ಮಿಸಿದ ಈ ಶೌಚಾಲಯದಲ್ಲಿ ಮಹಿಳಾ ಶೌಚಾಲಯ ಪ್ರತ್ಯೇಕವಾಗಿ ನಿರ್ಮಾಣವಾಗಿದೆ ಆಗಿದೆ ಅದು ಇಂದಿಗೂ ಬೀಗ ಹಾಕಿದೆ ಮಹಿಳಾ ಶೌಚಾಲಯ ಯಾರು ಬೀಗ ಹಾಕಿಸಿದ್ದರು..? ಯಾಕೆ ಬೀಗ ಹಾಕಿಸಿದಾದರೆ..? ಬೀಗ ಹಾಕುವುದಾದರೆ ಮಹಿಶಾ ಶೌಚಾಲಯ ನಿರ್ಮಾಣ ಯಾಕೆ ಬೇಕು..? ಈ ಬಗ್ಗೆ ನಗರ ಸಭೆ ಅಧಿಕಾರಿಗಳು ಉತ್ತರ ನೀಡಬೇಕಿದೆ.

ಬೇಜ್ವಾಬ್ದಾರಿ ಉತ್ತರ ನೀಡಿದ ಸದಸ್ಯ ಅನೀಲ ಅಬ್ಬಿಗೇರಿ :

ಶೌಚಾಲಯ ಅವ್ಯವಸ್ಥಿತೆ ಕುರಿತು ನಗರ ಸಭೆ ಸದಸ್ಯ ಅನಿಲ ಅಬ್ಬಿಗೇರಿ ಅರಿಗೆ ಈ ಕುರಿತು “ಸಮಗ್ರ ಪ್ರಭ” ದಿನ ಪತ್ರಿಕೆ ಕರೆ ಮಾಡಿದರೆ ಸಾರ್ವಜನಿಕ ಅದನ್ನು ಸರಿಯಾಗಿ ಉಪಯೋಗ ತೆಗೆದುಕೊಳ್ಳುತ್ತಿಲ್ಲ ಹೊರಗಿಡೆ ನಿಂತು ಮೂತ್ರ ಮಾಡುತ್ತಾರೆ ಇದಕ್ಕೆ ನಾವೆನೂ ಮಾಡಬೇಕು ಅದು ಹರುದು ಮೆಟ್ಟುಲು ಬರೆಗೆ ಬಂದರೆ ನಾನೆನು ಮಾಡಲಿ ಅದು ಅವರ ಜವಾಬ್ದಾರಿ ಅರು ಸರಿಯಾಗಿ ಅದನ್ನು ಬಳಸಿಕೊಳ್ಳಬೇಕು ಎಂದು ಸಬೂಬು ನೀಡಿ ಅವರಿಗೆ ಉಪಯೋಗ ಮಾಡಲು ಬರೋಲ ಅಂದರೆ ಹೇಳಿ ಅದನ್ನು ಏನು ಅದನ್ನು ಬಂದ ಮಾಡಬೇಕಾ ಎಂಬಾ ಉಡಾಪೆ ಉತ್ತರ ನಗರ ಸಭೆ ಸದಸ್ಯ ಅನಿಲ ಅಬ್ಬಿಗೇರಿ ನೀಡಿದ್ದಾರೆ.

ಸ್ವಾಮಿ ಅಲ್ಲಿ ಮೂತ್ರ ಹೋಗುವುದಕ್ಕೆ ದಾರಿನೇ ಇಲ್ಲ ಹೊಲಸು ಗಟಾರು ಇಳಿದೆ ಹೋಗಬೇಕು ಇನ್ನೂ ಮೂತ್ರ ಮಾಡಿದರೆ ಸಿದಾ ಮೂತ್ರ ಮಾಡಿದವರ ಕಾಲಡಿ ಬರುತ ಕಾಮಗಾರಿಯಲ್ಲಿ ಲೋಪ ಇದೆ 5 ಲಕ್ಷ ಖರ್ಚು ಮಾಡಿದರಲ್ಲಾ ಸಾರ್ವಜನಿಕರಿಗೆ ಸ್ಥಳೀಯ ವ್ಯಾಪಾರಸ್ಥರಿಗೆ,ಕಾಲೇಜು ವಿದ್ಯಾರ್ಥಿಗಳೂ ಇದನ್ನು ಸಂಪೂರ್ಣ ಬಳಸಿಕೊಳ್ಳುವಂತೆ ಮಾಡಿ ಎಂಬುದಿಷ್ಟೇ ನಮ್ಮ ಸಾಮಾಜಿಕ ಕಳಕಳಿ.

Share this Article