ರೋಣ ತಾಲೂಕಿನ ವಿವಿಧಡೆ ನರೇಗಾ ಕಾಮಗಾರಿ ಸ್ಥಳದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ
ರೋಣ : ತಾಲೂಕಿನ ವಿವಿಧ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಸಾಮೂಹಿಕ ಕಾಮಗಾರಿಗಳ ಸ್ಥಳದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಯನ್ನು ಸಡಗರದಿಂದ ಆಚರಿಸಲಾಯಿತು.
ತಾಲೂಕಿನ ಹೊಳೆಮಣ್ಣೂರ, ಅಸೂಟಿ, ಕರಮುಡಿ ಹಾಗೂ ಅಬ್ಬಿಗೇರಿ ಸೇರಿದಂತೆ ಹಲವು ಕಡೆ ಕಾರ್ಮಿಕರ ಜೊತಗೂಡಿ ಕೆಕ್ ಕತ್ತರಿಸಿ ಕಾರ್ಮಿಕರಿಗೆ ತಿನ್ನಿಸುವ ಮೂಲಕ ಆಚರಣೆ ಮಾಡಲಾಯಿತು. ಅಬ್ಬಿಗೇರಿ ಗ್ರಾಮದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಉದ್ದೇಶಿಸಿ ಮಾತಾನಾಡಿದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಲೋಹಿತ ಎಂ ನರೇಗಾ ಯೋಜನೆಯು ದೇಶದಲ್ಲಿ ಅತಿ ಹೆಚ್ಚು ಕೂಲಿ ಕಾರ್ಮಿಕರಿಗೆ ಕೆಲಸವನ್ನು ಒದಗಿಸುವ ಯೋಜನೆ ಆಗಿದೆ. ಈ ಯೋಜನೆಯು ಗ್ರಾಮೀಣ ಬಾಗದ ಜನರಿಗೆ ಆಶಾಕಿರಣವಾಗಿದ್ದು ಬೇಸಿಗೆಯಲ್ಲಿ ಬರಗಾಲದ ಸಮಯದಲ್ಲಿ ದುಡಿಯಲು ಕೆಲಸ ಇಲ್ಲದ ವೇಳೆ ನರೇಗಾ ಯೋಜನೆಯಡಿ ಯಲ್ಲಿ ಸಾಮೂಹಿಕ ಕಾಮಗಾರಿಯ ಕೆಲಸ ನೀಡುವ ಮೂಲಕ ಕೂಲಿಕಾರರಿಗೆ ಇದ್ದೂರಲ್ಲೆ ಕೆಲಸಗಳು ಸಿಗುತ್ತವೆ, ಇದರಿಂದ ವಲಸೆ ಹೋಗುವದನ್ನು ತಪ್ಪಿಸುತ್ತದೆ, ಜೊತೆಗೆ ಬಡ ಜನರ,ದಿನ ದಲಿತರನ್ನು ಅರ್ಥಿಕ ಸಂಕಷ್ಟದಿಂದ ಪಾರು ಮಾಡಲು 2005 ರಲ್ಲಿ ಈ ಯೋಜನೆ ಜಾರಿಗೆ ತರಲಾಯಿತು ಎಂದರು.
ಕೂಲಿಕಾರರಿಗೆ ಕುಡಿಯುವ ನೀರಿನ ವ್ಯವಸ್ಥೆ, ದಣಿವಾರಿಸಿಕೊಳ್ಳಲು ನೆರಳಿನ ವ್ಯವಸ್ಥೆ ಮಾಡುವುದು ನರೇಗಾ ಯೋಜನೆ ಒಳಗೊಂಡಿದೆ. ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸುವ ದಿನ ಇದಾಗಿದ್ದು. ಸಾಕಷ್ಟು ಕಾರ್ಮಿಕರ ಹೋರಾಟಗಾರರ ಶ್ರಮದ ಫಲದಿಂದ ಇಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳಲ್ಲಿ ಕಾರ್ಮಿಕರಿಗೆ ಅಧಿಕ ಸೌಲಭ್ಯಗಳು ಸಿಗುವಂತ್ತಾಗಿವೆ. ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಕೂಲಿಕಾರರು ಸಂಭ್ರಮಿಸಬೇಕೆಂದು ತಿಳಿಸಿದರು.
ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಮೇ 1 ರಿಂದ ದುಡಿಯೋಣ ಬಾ ಅಭಿಯಾನ ಪ್ರಾರಂಭಿಸಲಾಗುತ್ತಿದೆ. ಹಾಗೆಯೆ ಮಹಿಳೆಯರ ಅಭ್ಯುದ್ಯಯಕ್ಕಾಗಿ ಸ್ತ್ರಿ ಚೇತನ ಅಭಿಯಾನ ಕೈಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಕುಶಲ ಕಾರ್ಮಿಕರು ಇದರ ಸದುಪಯೋಗ ಪಡೆಯಬೇಕೆಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಅಕುಶಲ ಕೂಲಿಕಾರರು ಹಾಜರಿದ್ದು ಎಲ್ಲರಿಗೂ ಸಿಹಿ ಹಂಚಿ ಹಬ್ಬದಂತೆ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಪಿಡಿಒರವರು, ಸಮುದಾಯ ತಾಂತ್ರಿಕ ಸಹಾಯಕರು, ಗ್ರಾಮ ಕಾಯಕ ಮಿತ್ರರು,ಕಾಯಕ ಬಂಧುಗಳು, ಗಾಮ ಪಂಚಾಯತ ಸಿಬ್ಬಂದಿ ವರ್ಗ, ಹಾಗೂ ಅಕುಶಲ ಕೂಲಿಕಾರರು ಹಾಜರಿದ್ದರು.

