ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕನ್ನಡಿಗರ ಮೇಲೆ ದೌರ್ಜನ್ಯ ನಡೀತಾ ಇದೆ ಕನ್ನಡ ಮಾತಾಡಿ ಅಂದರೆ ಕೆಲವರು ಹೊಡಿ ಬಡಿ ಕಡಿ ಅಂತಾ ಜಗಳ ತೆಗೆದ ಘಟನೆ ನಡೆಯುತ್ತಿದ್ದು ಕರ್ನಾಟಕ ರಾಜ್ಯದಲ್ಲಿ ಮಾತೃ ಭಾಷೆ ಕನ್ನಡಕ್ಕೆ ಬೆಲೆ ಕೊಡಲಿಲ್ಲ ಅಂದರೆ ಹೇಗೆ..? ಕರ್ನಾಟಕ ಅನ್ನ ನೀರು ದುಡಿಮೆ ಬೇಕು ಭಾಷೆ ಮಾತ್ರ ಬೇಡ ಅಂದರೆ ಹೇಗೆ..? ರಾಜ್ಯದಲ್ಲಿ ಇತ್ತೀಚಿ ಕೆಲ ದಿನಗಳಲ್ಲಿ ಕನ್ನಡ ಮಾತಾಡು ಅಂದಿದಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ಮಾಡಲಾಗಿತ್ತು ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತ ಈ ಘಟನೆ ಮಾಸೋ ಮುನ್ನವೇ ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಲ್ಲಿ ವಿಂಗ್ ಕಮಾಂಡರ್ ಕನ್ನಡಿನ ಮೇಲೆ ಹಲ್ಲೆ ಮಾಡಿದ್ದರು. ಅದೇ ತರಹ ಮತ್ತೊಂದು ಘಟನೆ ಬೆಂಗಳೂರಿನಿಂದ ಕೊಪ್ಪಳಕ್ಕೆ ಪ್ರಯಾಣ ಬೆಳಸುತ್ತಿದ್ದ ಪ್ರಯಾಣಿಕನೊಬ್ಬನ ಮೇಲೆ ಟಿಕೆಟ್ ಕಲೆಕ್ಟರ್ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ ಕನ್ನಡ ನೆಲದಲ್ಲಿದ್ದು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡ್ತಿರೋದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಪ್ಪಳದ ಪ್ರಯಾಣಿಕ ಕನ್ನಡ ಮಾತಾಡು ಎಂದಿದ್ದಕ್ಕೆ ಟಿಕೆಟ್ ಕಲೆಕ್ಟರ್ ಹಲ್ಲೆ ಮಾಡಿದ್ದಾನೆ ಹಂಪಿ ಎಕ್ಸಪ್ರೆಸ್ ಟ್ರೇನಿನಲ್ಲಿ ಕಳೆದ 24 ರಂದು ಮೈಸೂರಿನಿಂದ ಕೊಪ್ಪಳಕ್ಕೆ ಬರ್ತಿದ್ದ.ಈ ವೇಳೆ ರೈಲು ಯಲಹಂಕ ಸಮೀಪ ಬಂದಿತ್ತು.ಟಿಕೆಟ್ ತಪಾಸಣೆಗೆ ಬಂದ ಕಲೆಕ್ಟರ್ ಎಲ್ಲರ ಟಿಕೆಟ್ ತಪಾಸಣೆ ಮಾಡತಿದ್ದ.ಈ ವೇಳೆ ಟ್ರೇನ್ ನಲ್ಲಿದ್ದ ಕೊಪ್ಪಳ ಮೂಲದ ಪ್ರಯಾಣಿಕ ಮೊಹಮದ್ ಭಾಷಾ ಟಿಕೆಟ್ ಕಲೆಕ್ಟರ್ ಗೆ ಕನ್ನಡ ಮಾತಾಡು ಎಂದಿದ್ದಾನೆ ಇದಕ್ಕೆ ರೊಚ್ಚಿಗೆದ್ದ ಟಿಕೆಟ್ ಕಲೆಕ್ಟರ್ ಕೂಡಲೇ ಮಹಮ್ಮದ್ ಭಾಷಾ ಅವರ ಮೊಬೈಲ್ ಕಿತ್ತುಕೊಂಡಿದ್ದಾನೆ ಮಹಮದ್ ಭಾಷಾ ಕನ್ನಡ ಮಾತಾಡು ಎಂದರೆ ಕಲೆಕ್ಟರ್, ಕನ್ನಡ ಬರಲ್ಲ ಎಂದಿದ್ದಾನೆ.ಈ ವೇಳೆ ಮೊಬೈಲ್ ನಲ್ಲಿ ಭಾಷಾ ಶೂಟ್ ಮಾಡ್ತಿರೋದನ್ನ ಗಮಿನಿಸಿ ಟಿಕೆಟ್ ಕಲೆಕ್ಟರ್ ಹಲ್ಲೆ ಮಾಡಿದ್ದಾನೆ.ನಾನು ಕಲೆಕ್ಟರ್ ಗೆ ಕನ್ನಡ ಮಾತಾಡು ಅಂದೆ,ಅವರು ಬರಲ್ಲ,ಅಂದ್ರೆ,ಅಷ್ಟಕ್ಕೆ ನನ್ನ ಮೇಲೆ ಹಲ್ಲೆ ದೌರ್ಜನ್ಯ ಮಾಡಿ ,ಹೊಡೆದಿದ್ದಾರೆ,ಅವರ ಮೇಲೆ ಕ್ರಮ ಆಗಬೇಕು ಅಂತಾರೆ ಪ್ರಯಾಣಿಕ
ಮಹಮ್ಮದ್ ಭಾಷಾ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಪದೇ ಪದೇ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೀತಿದೆ ಕನ್ನಡಿಗರೇ ಭಯದ ವಾತಾವರಣದಲ್ಲಿದ್ದಾರೆ ಒಟ್ಟಾರೆ ಕನ್ನಡ ನೆಲದಲ್ಲಿ ಅನ್ಯ ರಾಜ್ಯದವರ ದಬ್ಬಾಳಿಕೆ ಹೆಚ್ಚಿಗಿದ್ದು ಅಮಾಯಕ ಕನ್ನಡಿಗರ ಮೇಲೆ ಹಲ್ಲೆ ಮಾಡತಿರೋದು ನಿಜಕ್ಕೂ ಖಂಡನೀಯಪದೇ ಪದೇ ಇಂತಹ ಘಟನೆ ನಡಿತಿರೋದು ಕನ್ನಡಿಗರ ಸ್ವಾಭಿಮಾನ ಕೆರಳಿಸಿದೆ ಸರ್ಕಾರ ಈ ಕೂಡಲೇ ಇತ್ತ ಗಮನ ನೀಡಬೇಕು ಕನ್ನಡ ಭಾಷೆಯ ಉಳಿವಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು.
-ಮಂಜುನಾಥ ಅಚ್ಚಳ್ಳಿ

