ಗದಗ: ಮದುವೆ ಎಂಟೇದಿನ ಬಾಕಿ ಇರುವಾಗಲೇ ಮನೆಯಲ್ಲಿ ನೇಣಿಗೆ ಶರಣಾದ ಘಟನೆ ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ ಸೈರಾಬಾನು ನದಾಫ್ (29) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿಯಾಗಿದ್ದು.
ಮದುವೆ ಸಾಮಗ್ರಿಗಳನ್ನು ತರಲು ಪೋಷಕರು ಹೊರಗಡೆ ಹೋಗಿದ್ದ ಸಮಯ ನೋಡಿಕೊಂಡು ಪೋಷಕರು ಮರಳಿ ಮನೆಗೆ ಬರುವಷ್ಟರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಸೈರಾಬಾನು ನದಾಫ್.
ಪ್ರೀಯಕರನಿಂದ ಬ್ಯಾಕ ಮೇಲ್ ಆರೋಪ :
ಆತ್ಮಹತ್ಯೆ ಮಾಡಿಕೊಂಡ ಸೈರಾಬಾನು ನದಾಫ್
ಕಳೆದ ಐದು ವರ್ಷಗಳಿಂದ ಮೈಲೇರಿ ಎಂಬಾತನನ್ನ ಪ್ರೀತಿ ಮಾಡುತ್ತಿದ್ದಳು ಆದರೆ ಕೆಲ ದಿನಗಳ ಹಿಂದೆ ಲವ್ ಬ್ರೇಕ್ ಆಪ್ ಆಗಿದ್ದು ಲವ್ ಬ್ರೇಕಪ್ ಬಳಿಕ ಮದುವೆಗೆ ಒಪ್ಪಿಕೊಂಡಿದ್ದ ಶಿಕ್ಷಕಿ
ಆದರೆ ಶಿಕ್ಷಕಿಯ ಮದುವೆ ತಯಾರಿ ನೋಡಿ ಲವರ್ ಟಾರ್ಚರ್ ನೀಡುತ್ತಿದ್ದನು ಇಬ್ಬರ ಪೋಟೋ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ ಲವರ್ ಮೈಲೇರಿ.
ಮನೆಯ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ನಿರ್ಧಾರ ಮಾಡಿರೋ ಶಿಕ್ಷಕಿ ಕೊನೆ ಮಗಳು ಅಂತ ಭರ್ಜರಿ ಮದುವೆ ಮಾಡಿಕೊಡಲು ಸಿದ್ಧತೆ ಮಾಡಿಕೊಂಡಿದ್ದ ಪೋಷಕರು ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಸೇವೆ ಮಾಡ್ತಿದ್ದ ಸೈರಾಬಾನು,ನ್ಯಾಷನಲ್ ಲೇವಲ್ ಕುಸ್ತಿಪಟು ಆಗಿ ಹೆಸರು ಮಾಡಿದ್ದ ಶಿಕ್ಷಕಿ,ಹತ್ತಾರು ಮೆಡಲ್, ಕಪ್ ಗೆದ್ದು ಸಾಕಷ್ಟು ಹೆಸರು ಮಾಡಿದ್ದ ಯುವತಿ ಇಡೀ ಮನೆ ಜವಾಬ್ದಾರಿ ಸೈರಾಬಾನು ಹೊತ್ತಿದ್ದಳು.
ಈಗ ಲವರ್ ಟಾರ್ಚರ್ ಗೆ ಬೇಸತ್ತು ಬದುಕು ಅಂತ್ಯಗೊಳಿಸಿದ ಶಿಕ್ಷಕಿ ಮದುವೆ ಮನೆಯಲ್ಲಿ ಸಂಭ್ರಮ ಪಡುವ ಬದಲು ಕಣ್ಣೀರು ಹಾಕ್ತಿರೋ ಕುಟುಂಬಸ್ಥರು ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ
ಟಾರ್ಚರ್ ನೀಡಿರೋ ಯುವಕನಿಗೆ ತಕ್ಕ ಶಿಕ್ಷೆಯಾಗಬೇಕೆಂದು ಶಿಕ್ಷಕಿ ತಾಯಿ ಒತ್ತಾಯ ಮಾಡಿದ್ದಾರೆ.
ಗದಗ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

