ಗದಗ: ನಗರದ ಗದಗ-ಬೆಟಗೇರಿ ನೌಜವಾನ ಯಂಗ್ ಕಮೀಟಿ ಹಾಗೂ ಹಿಂದ್ ಏಜ್ಯುಕೇಶನ್ ಅಸಿಸ್ಟೆನ್ಸ ಟ್ರಸ್ಟ್ ಇವರುಗಳ ಸಹಯೋಗದಲ್ಲಿ ಗದಗ ನಗರದಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ ಮಕ್ಕಳಿಗೆ ಉಚಿತವಾಗಿ ಸುನ್ನತೆ ಇಬ್ರಾಹಿಂ (ಖತ್ನಾ) ಕಾರ್ಯಕ್ರಮವನ್ನು ನಗರದ ಕರ್ನಾಟಕ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು.
156 ಮಕ್ಕಳಿಗೆ ಸುನ್ನತೆ ಇಬ್ರಾಹಿಂ (ಖತ್ನಾ) ಯಶಸ್ವಿಯಾಗಿ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಖಾಸಗಿ ಆಸ್ಪತ್ರೆಗೆಯಲ್ಲಿ ಈ ಸುನ್ನತೆ (ಖತ್ನಾ) ಮಾಡಲು ಒಬ್ಬರಿಗೆ ಬರೋಬ್ಬರಿ 5-8 ಸಾವಿರ ರೂಪಾಯಿ ಖರ್ಚಾಗುತ್ತದೆ ಆದರೆ ನಗರದ ಗದಗ-ಬೆಟಗೇರಿ ನೌಜವಾನ ಯಂಗ್ ಕಮೀಟಿ ಹಾಗೂ ಹಿಂದ್ ಏಜ್ಯುಕೇಶನ್ ಅಸಿಸ್ಟೆನ್ಸ ಟ್ರಸ್ಟ್ ಸದಸ್ಯರ 156 ಮಕ್ಕಳಿಗೆ ಸುನ್ನತೆಯನ್ನು ಉಚಿತವಾಗಿ ಮಾಡಿದ್ದಾರೆ.

ಡಾ ಎಂ ಡಿ ಸಾಮುದ್ರಿ ನೇತೃತ್ವದಲ್ಲಿ ಡಾ.ಯೂನಸ್ ಸೋಲಂಕಿ ಹಿರಿಯ ಶಸ್ತ್ರಚಿಕಿತ್ಸಕರು ಮುಂಬೈ,ಡಾ ಶಿವಪುತ್ರ ಬಾಲರೆಡ್ಡಿ ಶಸ್ತ್ರಚಿಕಿತ್ಸಕರು ಬಾಗಲಕೋಟ,ಡಾ ವಿಜಯಕುಮಾರ ಹಳ್ಳಿ ಶಸ್ತ್ರಚಿಕಿತ್ಸಕರು ಇಲಕಲ್ಲ,ಡಾ ವಿನೋದ ಮೋರಾಳೇ ಶಸ್ತ್ರಚಿಕಿತ್ಸಕರು ಬೀದರ್,ಡಾ ವಿಕ್ರಮ ಪಾಟೀಲ ಶಸ್ತ್ರಚಿಕಿತ್ಸಕರು ಲಿಂಗಸೂರು,ಡಾ ವಿಕ್ರಾಂತ ಶರ್ಮಾ ಶಸ್ತ್ರಚಿಕಿತ್ಸಕರು ಜಯಪೂರ,ಡಾ ರಾಜುಕುಮಾರ ವಾಲಿ ಶಸ್ತ್ರಚಿಕಿತ್ಸಕರು ವಿಜಯಪುರ,ಡಾ ನಟರಾಜ ಶಸ್ತ್ರಚಿಕಿತ್ಸಕರು ದಾವಣಗೇರಿ,ಸೇರಿದಂತೆ ನೂರಿತ ತಜ್ಞ ವೈದ್ಯರು,ಹೊರ ರಾಜ್ಯದ ವೈದ್ಯರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಯುವ ನಾಯಕ ಕೃಷ್ಟಗೌಡ ಪಾಟೀಲ,ಮದರ್ ಖಾಜಿ,ದಾದಾಪೀರ,ಎಂ ಸಿ ಶೇಖ,ಬಾಷಾಸಾಬ್ ಮಲಸಮುದ್ರ,ಇಕಬಾಲ್ ಹಣಗಿ ಹಾಗೂ ಇತರರು ಹಾಜರಿದ್ದರು.

