ಗದಗ: ಸರ್ಕಾರದಿಂದ ಬಡವರಿಗೆ ನೀಡುವ ಅನ್ನ ಭಾಗ್ಯ ಅಕ್ಕಿಯನ್ನು ಸಂಗ್ರಹಿಸಿ ಮಾರಾಟ ಮಾಡುವ ಉದ್ದೇಶದಿಂದ ಖಾಸಗಿ ಜಮೀನಿಲ್ಲಿ ಇರುವ ಶೆಡ್ಡ ನಲ್ಲಿ ಪ್ಲಾಸ್ಟಿಕ್ ಬ್ಯಾಗಳಲ್ಲಿ ಶೇಖರಣೆ ಮಾಡಿದ ಖಚಿತ ಮಾಹಿತಿ ಮೇರಿಗೆ ಗ್ರಾಮೀಣ ಆಹಾರ ನಿರೀಕ್ಷಕ ಹಿರೇಮಠ ನೇತೃತ್ವದಲ್ಲಿ ಮತ್ತು ಗ್ರಾಮೀಣ ಪೋಲಿಸರು ದಾಳಿ ನಡೆಸಿದ್ದು 89 ಕ್ವಿಂಟಲ್ 146 ಭಾಗ್ಯ ಅಕ್ಕಿ ದಾಳಿಯಲ್ಲಿ ಸಿಕ್ಕಿದೆ.
ಹುಲಕೋಟಿ ಗ್ರಾಮದ ಹದ್ದಿನಲ್ಲಿ ಬರುವ ಹೊಸಳ್ಳಿ ಗೆ ಹೋಗುವ ಮಾರ್ಗ ಮಧ್ಯೆ ಇರುವ ರಿ ಸಂ ನಂ : 42/2ಅ ಜಮೀನಿನಲ್ಲಿರುವ ಶೆಡ್ಡ ದಲ್ಲಿ ಸೂಮಾರು 2,00,000 ಲಕ್ಷ ಮೌಲ್ಯದ ಅನ್ನ ಭಾಗ್ಯ ಅಕ್ಕಿ ಸಂಗ್ರಹಿಸಿ ಕಾಳ ಸಂತೆಯಲ್ಲಿ ಮಾರಾಟ ಸಂಗ್ರಹಿಸಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ ಈ ಕುರಿತು ಜಮೀನಿನ ಮಾಲೀಕರಾದ ಗದಗ ನಗರದ ನಿವಾಸಿ ಸಾವಿತ್ರಿಬಾಯಿ ಖೋಡೆ ಇವರ ವಿರುದ್ಧ ಪ್ರಕರಣ ದಾಖಲಾಗಿದೆ ಆದರೆ ಇವರು ಈ ಶೆಡ್ಡ ನ್ನು ನಗರದ ಖಾಸಗಿ ವ್ಯಕ್ತಿಗೆ ಬಾಡಿಗೆ ನೀಡಿದ್ದರು ಎಂದು ಹೇಳಲಾಗುತ್ತಿದ್ದರು ಬಾಡಿಗೆದಾರ ವಿರುದ್ಧ ಪ್ರಕರಣ ದಾಖಲಿಸದೆ ಕೇವಲ ಜಮೀನಿನ ಮಾಲೀಕರ ವಿರುದ್ಧ ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಲವು ಅನುಮಾನಳನ್ನು ಹುಟ್ಟುಹಾಕಿಸಿದೆ.
ದಾಳಿಯಲ್ಲಿ ಗ್ರಾಮೀಣ ಆಹಾರ ನಿರೀಕ್ಷಕ ಎಂ ಎಸ್ ಹಿರೇಮಠ ಸೇರಿದಂತೆ ಪೋಲಿಸ ಅಧಿಕಾರಿಗಳು,ಗ್ರಾಮ ಪಂಚಾಯತ ಸಿಬ್ಬಂದಿ,ತಲಾಟಿ ಸೇರಿದಂತೆ ಇತರರು ಹಾಜರಿದ್ದರು ಈ ಕುರಿತು ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
