ಪಿಯು ಫಲಿತಾಂಶ : ಗದಗ ನಗರದ ಅಂಜುಮನ್ ಸಂಸ್ಥೆ ಯ ಕರ್ನಾಟಕ ಪದವಿ ಪೂರ್ವ ಕಾಲೇಜ್ ಉತ್ತಮ ಸಾಧನೆ

graochandan1@gmail.com
1 Min Read

ಗದಗ: ನಗರದ ಅಂಜುಮನ್‌ ಇಸ್ಲಾಂ ಶಿಕ್ಷಣ ಸಂಸ್ಥೆಯ ಕರ್ನಾಟಕ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜ್ ವಿದ್ಯಾರ್ಥಿಗಳು 2024-25 ನೇ ಸಾಲಿನಲ್ಲಿ ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ 73% ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 81.66 % ಮತ್ತು ವಾಣಿಜ್ಯ ವಿಭಾಗದಲ್ಲಿ 96 % ರಷ್ಟಾಗಿದ್ದು ಕಾಲೇಜಿನ ಒಟ್ಟು ಫಲಿತಾಂಶ 73% ಬಂದಿದೆ.

ವಿಜ್ಞಾನ ವಿಭಾಗದಲ್ಲಿ ಸ್ಪೂರ್ತಿ ಮಡಿವಾಳರ 81.66% ದ್ವಿತೀಯ ಸ್ಥಾನ,ಸಾಗರ ಗೋಲಪ್ಪನವರ 78.16 % ಮತ್ತು ತೃತೀಯ ಸ್ಥಾನ ಮುಬಿನ್ ತಾಜ‌ ಚೀಕ್ಕೆನಕೊಪ್ಪ 68.16% ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಸಂಬ್ರೀನ್ ಕಡಕೋಲ್ 96%, ದ್ವಿತೀಯ ಸ್ಥಾನ ಸನಾ ಮುಲ್ಲಾ 72.83% ಮತ್ತು ತೃತೀಯ ಸ್ಥಾನ ಬಿಬಿಅಮೀನಾ ಮುಲ್ಲಾ 68.16% ಪಡೆದಿದ್ದಾರೆ.

- Advertisement -
Ad image

ಈ ಫಲಿತಾಂಶಕ್ಕಾಗಿ ಅಂಜುಮನ್‌ ಇಸ್ಲಾಂ ಶಿಕ್ಷಣ ಸಂಸ್ಥೆಯ
ಅಧ್ಯಕ್ಷರಾದ ಜಾಕೀರ ಎ ಮುಜಾವರ ಕಾರ್ಯದರ್ಶಿಯಾದ ಖಲಿಕ ಎಂ ಮುಲ್ಲಾ ಹಾಗೂ ಆಡಳಿತ ಮಂಡಳಿ ಸದಸ್ಯರು ವಿದ್ಯಾರ್ಥಿಯ ಪಾಲಕರು, ಪ್ರಾಚಾರ್ಯರರು, ಎಲ್ಲಾ ಉಪನ್ಯಾಸಕರು ಮತ್ತು ಭೋದಕೇತರ ಸಿಬ್ಬಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Share this Article