ಪಿಯು ಫಲಿತಾಂಶ : ಸನ್ಮಾರ್ಗ ಕಾಲೇಜಿನ ಸಾಧಕ ಸೌರಭ

graochandan1@gmail.com
2 Min Read

ಗದಗ : ಗದಗ ಬೆಟಗೇರಿ ಶೈಕ್ಷಣಿಕ ವಲಯದಲ್ಲಿ ತನ್ನ ಪ್ರಾರಂಭದಿಂದಲೂ ವರ್ಷದಿಂದ ವರ್ಷಕ್ಕೆ ದ್ವಿತೀಯ ಪಿ.ಯು ಫಲಿತಾಂಶದಲ್ಲಿ ಗಮನಾರ್ಹ ಸಾಧನೆಮಾಡುತ್ತ ಬಂದಿರುವ ಸ್ಟುಡೆಂಟ್ಸ್ ಎಜುಕೇಶನ್ ಸಂಸ್ಥೆಯ ಸನ್ಮಾರ್ಗ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ೨೦೨೪-೨೫ನೇ ಶೈಕ್ಷಣಿಕ ಸಾಲಿನಲ್ಲಿ ಅಭಿನಂದನಾರ್ಹ ಸಾಧನೆಯನ್ನು ಸಾಧಿಸಿ ಶೈಕ್ಷಣಿಕ ವಲಯದ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದಲ್ಲಿ ಕುಮಾರಿ ನೇಹಾ ಸೊರಟೂರ ಪ್ರತಿಶತ ೯೬.೫% ರಷ್ಟು ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾಳೆ. ಕುಮಾರಿ ನೇಹಾ ಲೆಕ್ಕಶಾಸ್ತ್ರ ಹಾಗೂ ಅರ್ಥಶಾಸ್ತ್ರದಲ್ಲಿ ೯೮ ಅಂಕ, ವ್ಯವಹಾರ ಅಧ್ಯಯನದಲ್ಲಿ ೯೭ ಅಂಕ, ಹಾಗೂ ಸಂಖ್ಯಾಶಾಸ್ತ್ರದಲ್ಲಿ ೯೬ ಅಂಕಗಳನ್ನು ಪಡೆದಿದ್ದಾಳೆ ಕುಮಾರಿ ಸನಾ ನರೇಗಲ್ ಪ್ರತಿಶತ ೯೫.೮೪ ರಷ್ಟು ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದಾಳೆ ಕುಮಾರಿ ಸನಾ ಸಂಖ್ಯಾಶಾಸ್ತ್ರದಲ್ಲಿ ೧೦೦ ಅಂಕ ವ್ಯವಹಾರ ಅಧ್ಯಯನ ಹಾಗೂ ಹಿಂದಿಯಲ್ಲಿ ೯೯ ಅಂಕ ಹಾಗೂ ಅರ್ಥಶಾಸ್ತ್ರ ಹಾಗೂ ಲೆಕ್ಕಶಾಸ್ತ್ರದಲ್ಲಿ ೯೮ ಅಂಕ ಗಳಿಸಿದ್ದಾಳೆ. ಕುಮಾರಿ ಸಂಜನಾ ಪೂಜಾರ ಶೇ.೯೪.೮೪% ಪಡೆದು ಕಾಲೇಜಿಗೆ ತೃತೀಯಳಾಗಿದ್ದಾಳೆ. ಕುಮಾರಿ ಸಂಜನಾ ವ್ಯವಹಾರ ಅಧ್ಯಯನದಲ್ಲಿ ೯೮ ಅಂಕ, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ಹಿಂದಿಯಲ್ಲಿ ೯೭ ಅಂಕ ಹಾಗೂ ಅರ್ಥಶಾಸ್ತ್ರದಲ್ಲಿ ೯೬ ಅಂಕಗಳನ್ನು ಪಡೆದಿದ್ದು ವಾಣಿಜ್ಯ ವಿಭಾಗದಿಂದ ೧೫ ವಿದ್ಯಾರ್ಥಿಗಳು ಡಿಸ್ಟಿಂಕ್ಸನ್‌ನಲ್ಲಿ, ಹಾಗೂ ೩೧ ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಉತ್ತಿರ್ಣರಾಗಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಕುಮಾರ ಪ್ರಜ್ಚಲ ಅಂಗಡಿ ಪ್ರತಿಶತ ೯೪.೭% ರಷ್ಟು ಅಂಕ ಗಳಿಸಿ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ. ಗಣಿತದಲ್ಲಿ ೧೦೦ ಅಂಕ, ಸಂಖ್ಯಾಶಾಸ್ತçದಲ್ಲಿ ೯೮ ಅಂಕಗಳನ್ನು ಪ್ರಜ್ವಲ ಪಡೆದಿದ್ದಾನೆ. ಕುಮಾರಿ ನಿತ್ಯಾ ನೀಲಕಂಠಮಠ ಶೇ.೯೩.೨% ಅಂಕ ಗಳಿಸಿ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾಳೆ ಇವಳು ಗಣಿತದಲ್ಲಿ ೯೯ ಅಂಕ, ಕನ್ನಡದಲ್ಲಿ ೯೮ ಅಂಕ ಪಡೆದಿದ್ದಾಳೆ. ಕುಮಾರಿ ಶ್ರೀನಿಧಿ ಪತ್ತಾರ ಶೇ.೯೧.೮೪ ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ. ಕುಮಾರಿ ಶ್ರೀನಿಧಿ ಸಂಖ್ಯಾಶಾಸ್ತçದಲ್ಲಿ ೯೯ ಅಂಕಗಳನ್ನು ಪಡೆದಿದ್ದು, ವಿಜ್ಞಾನ ವಿಭಾಗದಿಂದ ೨೪ ವಿದ್ಯಾರ್ಥಿಗಳು ಡಿಸ್ಟಿಂಕ್ಸನ್‌ನಲ್ಲಿ, ಹಾಗೂ ೮೮ ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಉತ್ತಿರ್ಣರಾಗಿರುತ್ತಾರೆ.

ಹಾಗೆಯೇ ವಿದ್ಯಾಲಯದ ಒಟ್ಟು ಫಲಿತಾಂಶ ಶೇ.೯೦% ಆಗಿದ್ದು ಸಂಸ್ಥೆಯ ಅಧ್ಯಕ್ಷರಾದ ಪ್ರೊ.ರಾಜೇಶ ಕುಲಕರ್ಣಿ, ನಿರ್ದೇಶಕರಾದ ಪ್ರೊ. ರೋಹಿತ್ ಹಾಗೂ ಪ್ರೊ. ರಾಹುಲ್ ಒಡೆಯರ್, ಪ್ರೊ. ಪುನಿತ್ ದೇಶಪಾಂಡೆ. ಪ್ರೊ. ಸಯ್ಯದ್ ಮತೀನ್ ಮುಲ್ಲಾ, ಪ್ರಾಚರ‍್ಯರಾದ ಪ್ರೊ. ಪ್ರೇಮಾನಂದ ರೋಣದ, ಆಡಳಿತಾಧಿಕಾರಿಗಳಾದ ಎಂ ಸಿ ಹಿರೇಮಠ ಹಾಗೂ ಸಮಸ್ತ ಬೋಧಕ ಬೋಧಕೇತರ ವರ್ಗ ಸಾಧಕರಿಗೆ ಹಾಗೂ ಉತ್ತೀರ್ಣ ವಿದ್ಯಾರ್ಥಿಗಳಿಗೆ ಶುಭಾಷಯ ತಿಳಿಸಿ ಅವರೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.

Share this Article