ಗದಗ : ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಟೊಮ್ಯಾಟೊ ದರ ಏಕಾಏಕಿ ಕುಸಿತಕ್ಕೆ ಅನ್ನದಾತರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಪಿಎಂಸಿ ಮಾರುಕಟ್ಟೆಯಲ್ಲಿ 25ಕೆಜಿ ಟ್ರೇಗೆ ಕೇವಲ 50 ರೂಪಾಯಿಗೆ ಮಾರಾಟವಾಗಿದ್ದು ಇದೇ ಟೊಮ್ಯಾಟೊ
ಚಿಲ್ಲರೆ ಮಾರುಕಟ್ಟೆಯಲ್ಲಿ 15 ರೂಪಾಯಿ ಕೆಜಿ ಟೊಮ್ಯಾಟೊ ಮಾಡುತ್ತಿದ್ದಾರೆ ರೈತರಿಗೆ ಮಾತ್ರ ಕೆಜಿ ಕೇವಲ 2 ರೂಪಾಯಿ ನೀಡುತ್ತಿದ್ದಾರೆ ಮಾರುಕಟ್ಟೆಯಲ್ಲಿ ಎಲ್ಲ ದರಗಳು ಏರಿಕಿಯಾಗಿದ್ದು ರೈತರು ಬೆಳೆದ ಬೆಳೆ ದರ ಯಾಕೇ ಏರುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ಕೆಜಿ ಗೆ 2 ರೂಪಾಯಿ :
ಟೆಮ್ಯಾಟೊ ಬೆಳೆಯಲು ಪ್ರತಿ ಎಕರೆಗೆ 30-50 ಸಾವಿರ ರೂ ಖರ್ಚು ಮಾಡುತ್ತೇವೆ ಉತ್ತಮ ಬೆಳೆ ಬಂದರೂ ದರ ಮಾತ್ರ ಇಲ್ಲ ಒಂದು ಟ್ರೇ ನಲ್ಲಿ ಸುಮಾರು 20-25 ಕೆಜಿ ಟೊಮ್ಯಾಟೊ ಇರುತ್ತದೆ ಒಂದು ಟ್ರೇಗೆ 50 ರೂ ಗೆ ಮಾರಾಟ ಮಾಡಿದರು 2 ರೂಪಾಯಿ ಗೆ ಕೆಜಿಯಂತೆ ಟೊಮ್ಯಾಟೊ ಮಾರಾಟ ಮಾಡಿದಂತಾಗಿದೆ ಎಂದು ರೈತರು ಎಪಿಎಂಸಿ ವರ್ತಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ವಿಂಟಾಲಗಟ್ಟಲೇ ಟೊಮ್ಯಾಟೊ ತಂದು ರೈತರ ಕೈ ಖಾಲಿ ಖಾಲಿ:
ಉತ್ತಮ ಬೆಳೆ ಬಂದಿದ್ದು ಅದನ್ನು ಮಾರಿ
ಖಾಲಿ ಕೈಯಲ್ಲಿ ಮನೆಗೆ ಹೋಗುವ ಸ್ಥಿತಿ ಬಂದಿದೆ ಟೊಮ್ಯಾಟೊ ಕಟಾವು ಮಾಡುವ ಒಬ್ಬ ಕಾರ್ಮಿಕರಿಗೆ 300 ರೂ ದಿನ ಕೂಲಿ ಕೊಡಬೇಕು,ವಾಹನ ಬಾಡಿಗೆ ಒಂದು ಟ್ರೇಗೆ 30 ರೂಪಾಯಿ ಇದೆ ಜೊತೆಗೆ ದಲ್ಲಾಳಿ 10 ರೂಪಾಯಿ ಕೊಡಬೇಕು ಕಷ್ಟ ಪಟ್ಟು ಬೆಳೆದ ಬೆಳೆಗೆ ರೈತರಿಗೆ ಒಂದು ಟ್ರೇ ಗೆ 10 ರೂ ಮಾತ್ರವೇ ಅದು ಚಹಾ ನಾಸ್ಟಾ ಮಾಡಿದರೆ ಖಾಲಿ ಕೈಯಲ್ಲಿ ಮನೆಗೆ ಹೋಗಬೇಕು ಹೀಗಾದರೆ ರೈತರು ಕುಟುಂಬ ನಿರ್ವಹಣೆಗೆ ಹೇಗೆ ಸಾಧ್ಯ ಎಂದು ತಮ್ಮ ನೋವನ್ನು ತೊಂಡಿಕೊಂಡರು.
ಹಗಲು ರಾತ್ರಿ ಎನ್ನದೆ ಕಷ್ಟ ಪಟ್ಟು ಟೊಮ್ಯಾಟೊ ಬೆಳೆದಿದ್ದೇವೆ
ಮಾರುಕಟ್ಟೆಗೆ ತಂದರೆ ಸೂಕ್ತ ದರ ಸಿಗುತ್ತಿಲ್ಲ ಸರ್ಕಾರ ಟೊಮ್ಯಾಟೊ ಬೆಳೆದ ರೈತರ ನೆರವಿಗೆ ಬರಬೇಕು
ಟೊಮ್ಯಾಟೊ ಬೆಳೆದ ರೈತರು ಸಂಕಷ್ಟದಲ್ಲಿದೇವೆ ಟೊಮ್ಯಾಟೊ ಬೆಳೆಗೆ ಸೂಕ್ತದ ದರ ನಿಗದಿ ಮಾಡಬೇಕೆಂದು ರೈತರು ಒತ್ತಾಯಮಾಡಿದ್ದಾರೆ.

