ಜಿಲ್ಲೆಯ 5 ಪೋಲಿಸರಿಗೆ ಮುಖ್ಯ ಮಂತ್ರಿಗಳ ಪೋಲಿಸ್ ಪದಕ

graochandan1@gmail.com
1 Min Read

ಗದಗ: ರಾಜ್ಯ ಸರ್ಕಾರ 2022,20223 ಮತ್ತು 2024ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಜಿಲ್ಲೆಯ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಮೂವರು ಸಿಬ್ಬಂದಿಯನ್ನು ಆಯ್ಕೆ ಮಾಡಿದೆ. ತಮ್ಮ ಶ್ರೇಯಸ್ಸು, ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವೆಗೆ ಈ ಪ್ರಶಸ್ತಿ ಲಭಿಸಿದೆ.

ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟ‌ರ್ ಮಂಜುನಾಥ್ ಕುಸಗಲ್- ದಕ್ಷ ನಿರ್ವಹಣೆ, ಅಪರಾಧ ನಿರೋಧನೆ ಮತ್ತು ಜನಸಾಮಾನ್ಯರ ಸೇವೆಯಲ್ಲಿ ತೋರಿದ ನಿಸ್ವಾರ್ಥ ಸೇವೆಗಾಗಿ ಈ ಪ್ರಶಸ್ತಿ ಲಭಿಸಿದೆ.

ಗದಗ ಗ್ರಾಮೀಣ ಠಾಣೆಯ ಸಬ್ ಇನ್ಸ್‌ಪೆಕ್ಟ‌ರ್ ಎಲ್‌.ಕೆ. ಜೂಲಕಟ್ಟಿ,- ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನೀಡಿದ ಅಮೂಲ್ಯ ಸೇವೆ ಮತ್ತು ಸಮುದಾಯ ಸ್ನೇಹಪೂರ್ಣ ಪೋಲೀಸಿಂಗ್ ನಿಟ್ಟಿನಲ್ಲಿ ಈ ಸಾಧನೆ ಗುರುತಿಸಲಾಗಿದೆ.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಎಚ್‌ಸಿ ಹನಮಂತಗೌಡ ಮರಿಗೌಡ – ತಮ್ಮ ಕರ್ತವ್ಯ ನಿಷ್ಠೆ ಮತ್ತು ತುರ್ತು ಸಂದರ್ಭಗಳಲ್ಲಿ ತೋರಿದ ತಾಳ್ಮೆ, ಸಮರ್ಥತೆಗಾಗಿ ಪ್ರಶಸ್ತಿ ಪಡೆದಿದ್ದಾರೆ.

- Advertisement -
Ad image

ಇಂಟಲಿಜೆನ್ಸ್ ಗದಗ ಜಿಲ್ಲಾ ಘಟಕದ ಹಿರಿಯ ಗುಪ್ತಚರ ಸಹಾಯಕ ಶಿದ್ದರಡ್ಡಿ ಎಸ್. ಕಪ್ಪತ್ತನವರ್ – ಗುಪ್ತಚರ ಮಾಹಿತಿ ಸಂಗ್ರಹ ಮತ್ತು ಅಪರಾಧ ನಿರೋಧನೆಯಲ್ಲಿ ಸಾಧಿಸಿದ ಗಣನೀಯ ಕೊಡುಗೆಗೆ ಪುರಸ್ಕೃತರಾಗಿದ್ದಾರೆ.

ಗದಗ ಶಹರ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರವೀಣ್‌ ಕಲ್ಲೂರ- ಶ್ರೇಯಸ್ಕರ ಸೇವೆ, ಶಿಸ್ತಿನಿಂದ ಸತತ ಸೇವೆ ಸಲ್ಲಿಸಿದ ಸೇವೆಯನು. ಪರಿಗಣಿಸಿ ಈ ಗೌರವ ನೀಡಿ ಗೌರವಿಸಲಾಗಿದೆ.

ಈ ಸಾಧನೆ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಸ್. ನೇಮಗೌಡ ಮತ್ತು ಹೆಚ್ಚುವರಿ ಎಸ್‌ಪಿ ಎಮ್.ಬಿ. ಸಂಕದ ಅವರು ಪುರಸ್ಕೃತ ಪೊಲೀಸ್‌ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಾರ್ವಜನಿಕರು ಮತ್ತು ಪೊಲೀಸ್‌ ಇಲಾಖೆಯ ಸಹೋದ್ಯೋಗಿಗಳು ಈ ಗೌರವಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

Share this Article