ಗದಗ: ತಾಲೂಕಿನ ಅಡವಿಸೋಮಾಪುರ ಪಂಚಾಯತ ವ್ಯಾಪ್ತಿಯ ಪಾಪನಾಶಿ ಗ್ರಾಮದಲ್ಲಿ ಪಾಪನಾಶಿ ಗ್ರಾಮದ ರಿಸ ನಂ:28/1 ಕ್ಷೇತ್ರ : 1 ಎಕರೆ 15 ಗುಂಟೆ,ರಿಸ ನಂ:28/2ಬ ಕ್ಷೇತ್ರ : 3 ಎಕರೆ 19 ಗುಂಟೆ,ರಿಸ ನಂ:31/2ಅ ಕ್ಷೇತ್ರ : 7 ಎಕರೆ 30 ಗುಂಟೆ,ರಿಸ ನಂ:31/2ಬ ಕ್ಷೇತ್ರ : 2 ಎಕರೆ 27 ಗುಂಟೆ,ರಿಸ ನಂ:31/3 ಕ್ಷೇತ್ರ : 3 ಎಕರೆ 21 ಗುಂಟೆ ಒಟ್ಟು :18 ಎಕರೆ 32 ಗುಂಟೆ ಜಮೀನಿಗೆ ಏಕ ನಿವೇಶನದ ವಾಣಿಜ್ಯ ಭೂಮಿಗೆ ಪಂಚಾಯದ ಅಭಿವೃದ್ಧಿ ಅಧಿಕಾರಿ ಪ್ರೇಮಾ ಹಟ್ಟಿ ಅವರು ಅನಧಿಕೃತವಾಗಿ ಸುಮಾರು 87 ಉತಾರ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭರತ್ ಎಸ್ ಜಿಲ್ಲಾ ಪಂಚಾಯತ ಸಹಾಯಕ ಕಾರ್ಯದರ್ಶಿ ಕಲ್ಮನಿ ಅವರಿಗೆ ಸ್ಥಳ ವೀಕ್ಷಣೆ ಮಾಡಿ ಈ ಕುರಿತು ವರದಿ ಸಲ್ಲಿಸಲು ಆದೇಶಿಸಿದ್ದಾರೆ.
ತಾಲೂಕು ಪಂಚಾಯಿಂದ ನೋಟಿಸ್ :
ಪ್ರಕರಣದ ಕುರಿತು ಅಡವಿಸೋಮಾಪುರ ಗ್ರಾಮ ಪಂಚಾಯತ ಅಧ್ಯಕ್ಷೆ ಏಕ ನಿವೇಶ ಬಡಾವಣೆ ವಿನ್ಯಾಸಕ್ಕೆ ಅನಧಿಕೃತ ಬಹು ನಿವೇಶನ ಮಾಡಿ ಇ ಸ್ವತ್ತು ಉತ್ತಾರ ಪೂರೈಸಿದ್ದ ಕುರಿತಾಗಿ ದಿನಾಂಕ 6-01-2025 ರಂದು ತಾಲೂಕು ಪಂಚಾಯತಗೆ ಮನವಿ ನೀಡಿ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದರು ಸದರಿ ಮನವಿ ಪತ್ರಕ್ಕೆ ಲಗತ್ತಿಸಿ ತಾಲೂಕು ಪಂಚಾಯತ ಕಾರ್ಯಾಲಯವು ಪಿಡಿಓ ಪ್ರೇಮಾ ಹಟ್ಟಿ, ಕಾರ್ಯದರ್ಶಿ ವಿ ಸಿ ಹಿರೇಮಠ, ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಸಿ ಬಿ ಜಾನೋಪಂತರ ಇವರಿಗೆ 16-01-2025 ರಂದು ನೋಟಿಸಿ ಜಾರಿ ಮಾಡಿದರು ಸದರಿ ಉತ್ತರ ಪಡೆದುಕೊಂಡು ಅಧಿಕಾರುಗಳು ಜಿಲ್ಲಾ ಪಂಚಾಯತ ಕಾರ್ಯಾಲಯಕ್ಕೆ ಕಳುಹಿಸಿದ್ದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ ಸಹಾಯಕ ಕಾರ್ಯದರ್ಶಿ ಸ್ಥಳ ಭೇಟಿ ನೀಡಿ ವರದಿ ಸಲ್ಲಿಸಲು ಆದೇಶಿಸಿದ್ದಾರೆ.
ಗ್ರಾಮ ಪಂಚಾಯತಿ ಪ್ರಸ್ತಾವನೆಯಲ್ಲಿ ಅಧಿಕಾರಿಗಳು ಎಡವಟ್ಟು:
ಹೌದು ದಿನಾಂಕ : 16/10/2020 ರಂದು ಅಡವಿಸೋಮಾಪುರ ಗ್ರಾಮ ಪಂಚಾಯತ ಆಗಿನ ಪಿಡಿಓ ಏಕ ನಿವೇಶನ ಅಂತಾ ಬೀನ್ ಶೇತ್ಕಿ ಆಗಿರುವ ಜಮೀನಿಗೆ, ಬಹುನಿವೇಶನ ವಾಣಿಜ್ಯ (ರೆಸಾರ್ಟ್) ಗೆ ವಿನ್ಯಾಸ ಅನುಮೋದನೆ ನೀಡಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಅಭಿವೃದ್ಧಿ ಕಾರ್ಯ ತಡೆ ಇಲ್ಲ :
ಇತ್ತ ಜಮೀನಿನ ಪ್ರಕರಣ ಗ್ರಾಮ ಪಂಚಾಯತ ಅಧಿಕಾರಿಗಳ ಕೊರಳಿಗೆ ಸುತ್ತಿಕೊಂಡು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಬಳಿ ತೆರಳಿದರು ಸ್ಥಳದಲ್ಲಿ ಅಭಿವೃದ್ಧಿ ಕಾರ್ಯಗಳು ಮಾತ್ರ ನಿಂತಿಲ್ಲ ಎಂದು ಬಲ್ಲ ಮೂಲಗಳು ಕೆಲ ಪೋಟೋ ಮೂಲಕ ಮಾಹಿತಿ ನೀಡಿದ್ದು ಇದಕ್ಕೆ ಪುಷ್ಠಿ ಅನ್ನುವಂತಿವೆ.
ಈ ಪ್ರಕರಣದ ಕುರಿತಾಗಿ ಬೆಂಗಳೂರಿಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಕಳುಹಿಸಲಾಗಿದ್ದು ಸದರಿ ಅವರಿಂದ ಆದೇಶ ಬಂದ ನಂತರ ಮುಂದಿನ ತನಿಖೆ ಆರಂಭ ಮಾಡಲಾಗುವುದು.
-ವಿಜಯ ಬಿರಾದಾರ
ಡಿವೈಎಸ್ಪಿ ಲೋಕಾಯುಕ್ತ ಗದಗ

