ಗದಗ: ಪೊಲೀಸ್ ಠಾಣೆಯಲ್ಲಿ ಅದರಲ್ಲಿಯೂ ಮಹಿಳಾ ಪೊಲೀಸರ ಮುಂದೆಯೇ ಪೊಲೀಸರ ಮೊಬೈಲ್ ಕಳ್ಳತನ ಮಾಡಿದ ಘಟನೆ ಗದಗ ಶಹರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು ಬೆಟಗೇರಿ ಮೂಲದ ಮುಲ್ಲಾ ಎಂಬ ಯುವಕ ಶಹರ ಪೊಲೀಸ್ ಠಾಣೆಗೆ ಬಂದಿದ್ದ ಹೊಟೆಲ್ ಒಂದರಲ್ಲಿ ಗಲಾಟೆ ವಿಚಾರವಾಗಿ ಅದರ ಪರವಾಗಿ ಸಾಕ್ಷಿ ಹೇಳಲು ಬಂದಿದ್ದ ಈ ಮುಲ್ಲಾ ಮಹಿಳ ಪೋಲಿಸ್ ಸಿಬ್ಬಂದಿ ಜೊತೆಗೆ ಮಾತನಾಡುತ್ತಲೇ ಮೊಬೈಲ್ ಅನ್ನು ಜೇಬಿಗೆ ಹಾಕಿಕೊಂಡಿದ್ದಾರೆ ಕತರ್ನಾಕ ಮುಲ್ಲಾ.
ಈ ಖದೀಮನ ಕೈಚಳಕದ ದೃಶ್ಯ ಸ್ಟೇಷನ್ ಗೆ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾದ್ದು ಮಹಿಳಾ ಸಿಬ್ಬಂದಿ ಜೊತೆ ಮಾತನಾಡುತ್ತಾ ಅವರ ಗಮನ ಬೇರೆಡೆ ಸೆಳೆದು ಮೊಬೈಲ್ ಕಿಸೆಗೆ ಇಳಿಸಿ ನಂತರ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಖದೀಮ ಮುಲ್ಲಾನಿಗಾಗಿ ಪೊಲೀಸರು ಹುಟುಕಾಟ ನಡೆಸಿದ್ದಾರೆ.

