ಗದಗ: ಶುಕ್ರವಾರ ರಾಜ್ಯದ 2025-26 ನೇ ಸಾಲಿನ ಬಜೆಟ್ ಅಹಿಂದ ನಾಯಕ ನೂರಾರು ಭಾಗ್ಯಗಳ ಜೊತೆಗೆ ಇಡೀ ಕರ್ನಾಟಕ ರಾಜ್ಯದಲ್ಲಿ ಮಾದರಿಯಾಗಿ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಸಿ ಎಂ ಸಿದ್ದರಾಮಯ್ಯನವರ ಬಜೆಟ್
ರಾಜ್ಯದ ಅಭಿವೃದ್ಧಿ ಪೂರಕವಾಗಿದೆ ಎಂದು ಯುವ ನಾಯಕ ಆನಂದ ಕೋರ್ಲಹಳ್ಳಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಪ್ರಸಕ್ತ ಸಾಲಿನ ಬಜೆಟ್ ಸಮಸ್ತ ನಾಡಿನ ನಾಗರಿಕರಿಗೆ ಅದರಲ್ಲೂ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮವನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆ ಜೊತೆಗೆ ಯಲ್ಲಮ್ಮ ಗುಡ್ಡ ಅಭಿವೃದ್ಧಿ,ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಸಮುದಾಯದ ಶಾಲೆ ಕಾಲೇಜು ಸೇರಿದಂತೆ ಹೊಸ ಹೊಸ ಹಾಸ್ಟೆಲ್ ಐಟಿಐ ಕಾಲೇಜು ನಿರ್ಮಾಣ ಇಂಜಿನಿಯರಿಂಗ್ ಕಾಲೇಜ್ ವೈದ್ಯಕೀಯ ಕ್ಷೇತ್ರ ಬದಲಾವಣೆ ಸೇರಿದಂತೆ ಪತ್ರಕರ್ತರರಿಗೆ ಮಾಸಾಶಣ ಹೆಚ್ಚಳ, ಗ್ರಾಮೀಣ ರಸ್ತೆ ಅಭಿವೃದ್ಧಿ, ಪ್ರತಿ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಸ್ವಸಹಾಯ ಗುಂಪು ನೆರವಿನೊಂದಿಗೆ ಅಕ್ಕ ಕ್ಯಾಂಟಿನ, ಅತಿಥಿ ಉಪನ್ಯಾಸಕರಿಗೆ 2000 ಹೆಚ್ಚುವರಿ ಪ್ರೋತ್ಸಾಹಧನ, ಜಿಲ್ಲೆಯ ಡಂಬಳ ವ್ಯಾಪ್ತಿಯಲ್ಲಿ ತೋಟಗಾರಿಕೆ ಮಹಾವಿದ್ಯಾಲಯ,ಶಿರಹಟ್ಟಿ ನೀರಾವರಿ ಯೋಜನೆ, ಮುಂಡರಗಿ-ಗೀಣಿಗೇರಿ ರಸ್ತೆ ಕೆಶಿಪ್ ಮೂಲಕ ಅಭಿವೃದ್ಧಿ ಮಾಡುವ ಮೂಲಕ ಗದಗ ಜಿಲ್ಲೆಗೆ ವಿಶೇಷ ಸ್ಥಾನಮಾನ ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಪೂರಕ ಬಜೆಟ್ ಇದಾಗಿದೆ.
