ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಪೋಲಿಸರು ಅಕ್ರಮ ಬಡ್ಡಿದಂದೆಕೋರರ ಮೇಲೆ ದಾಳಿ ಮುಂದುವರೆಸಿದ್ದು ಮಂಗಳವಾರ ಬೆಟಗೇರಿ ಠಾಣಾ ವ್ಯಾಪ್ತಿಯಲ್ಲಿ ಯಲ್ಲಪ್ಪ ಮಿಸ್ಕಿನ ಗೆ ಸೇರಿದಂದೆ ಅವರಗೆ ಸಂಬಂಧಿಸಿದ 12 ಕ್ಕೂ ಹೆಚ್ಚಿನ ಕಡೆಯಲ್ಲಿ ಪೋಲಿಸರು ಭರ್ಜರಿ ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಅಕ್ರಮ ಬಡ್ಡಿ ದಂದೆಕೋರರ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದ್ದು ಸುಮಾರು 1 ಕೋಟಿ 50 ಲಕ್ಷ ಹಣ,ಚಿನ್ನ,ಖಾಲಿ ಬಾಂಡ್,ಚೆಕ್ ಗಳು ಪತ್ತೆಯಾಗಿದೆ ಗದಗ ಎಸ್ಪಿ ಬಿ ಎಸ್ ನೇಮಗೌಡ ನೇತೃತ್ವದಲ್ಲಿ 12 ತಂಡಗಳನ್ನು ರಚನೆ ಮಾಡಿ ಪೊಲೀಸರ ಕಾರ್ಯಾಚರಣೆ ನಡೆಸಿದ್ದು ಈ ಕಾರ್ಯಾಚರಣೆಯಲ್ಲಿ
ಗೋಣಿ ಚೀಲದಲ್ಲಿ, ಹಿಟ್ಟಿನ ಡಬ್ಬಿಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ ಜೊತೆಗೆ ಖಾಲಿ ಚೆಕ್ ಮತ್ತು ಬಾಂಡ್ ಗಳು ವಶಕ್ಕೆ ಪಡೆದಿದ್ದಾರೆ.
ಯಲ್ಲಪ್ಪ ಮಿಸ್ಕಿನ್ ಸೇರಿದಂತೆ ಹಲವರ ಮೇಲೆ ಎಫ್ ಐಆರ್ :
ಮಂಗಳವಾರ ಬಂಡಿದಂಧೆಕೋರರ ಮನೆ ಮೇಲೆ ದಾಳಿ ನಡೆಸಿ ಮಾಹಿತಿ ನೀಡಿ ಮಾತನಾಡಿದ ಎಸ್ಪಿ ಬಿ.ಎಸ್. ನೇಮಗೌಡ ಅವರು, ಅಶೋಕ ಗಣಾಚಾರಿ ಎಂಬುವದು ದೂರು ನೀಡಿದ್ದು 2016 ರಲ್ಲಿ ಆರೋಪಿತ ಯಲ್ಲಪ್ಪ ತೃಜುಸಾ ಮಿಸ್ಕಿನ್ ಅವರಿಂದ 1 ಕೋಟಿ 93 ಲಕ್ಷ ಹಣ ಕೈಗಡ ಸಾಲ ಪಡೆದಿದ್ದರು ಅಂದಿನಿಂದ ಈ ವರೆಗೂ 1.40 ಕೋಟಿ ಹಣ ಮರುಪಾವತಿ ಮಾಡಿದ್ದೇನೆ ಜೊತೆಗೆ ಬೆಟಗೇರಿಯ ಸರಸ್ವತಿ ಕಲ್ಯಾಣ ಮಂಟಪ ಸೇರಿದಂತೆ ಅನೇಕ ಆಸ್ತಿಗಳನ್ನು ಯಲ್ಲಪ್ಪ ಮಿಸ್ಕಿನ ಬಳಿ ಹೆಸರಿಗೆ ಬರೆದುಕೊಂಡಿದ್ದ
ಆದರೂ ಯಲ್ಲಪ್ಪ ಮಿಸ್ಕಿನ್ ಅವರು ನನಗೆ ಇನ್ನೂ ಹಣಕ್ಕಾಗಿ ಪೀಡಿಸುತ್ತಿದ್ದಾಗಿ ಅಶೋಕ ಗಣಾಚಾರಿ ದೂರು ನೀಡಿದ್ದರು.
ದೂರು ಆದರಿಸಿ ಮಂಗಳವಾರ ಯಲ್ಲಪ್ಪ ಮಿಸ್ಕಿನ್ ಅವರಿಗೆ ಸಂಬಂಧಿಸಿದ ಹಲವಡೆ ದಾಳಿ ನಡೆಸಿದ್ದು ಇತ್ತೀಚೆಗೆ ಪೋಲಿಸರು ದಾಳಿ ನಡೆಸುತ್ತಿದ್ದನ್ನು ಗಮನಿಸಿ ಮಿಸ್ಕಿನ್ ಯಲ್ಲಪ್ಪ ಅವರು ಸಂಬಂಧಿತರ ಮನೆಗೆ ಹಣ ಸಾಗಿಸಿದ್ದು ಪೋಲಿಸರ ದಾಳಿ ವೇಳೆ ಕಂಡು ಬಂದಿದೆ ದಾಳೆ ವೇಳೆ ಖಾಲಿ ಬಾಂಡ್, ಬರೆದ ಬಾಂಡ್ ಗಳು ಚೆಕ್, ನಗದು ಹಣ, ಚಿನ್ನಾಭರಣ ಸಿಕ್ಕಿದ್ದು ಒಂದು ಸೂಟಕೇಸ್ ಬಾಂಡ್ ಗಳು ಸಿಕ್ಕಿವೆ ,ಬಂಗಾರದ ಒಡವೆಗಳು ಸಿಕ್ಕಿವೆ ಈ ದಾಳಿಯಲ್ಲಿ 12 ತಂಡಗಳು, 50 ಜನ ಪೊಲೀಸ್ ಸಿಬ್ಬಂದಿ ಈ ಭಾಗಿ ಆಗಿದ್ದರು. ಸಿಪಿಐ ದೀರಜ್ ಶಿಂದೆ, ಸಂಗಮೇಶ ಶಿವಯೋಗಿ, ಡಿವೈಎಸ್ ಪಿ ಇನಾಮದಾರ ಇತರರು ನೇತೃತ್ವ ವಹಿಸಿದ್ದರು.
ಯಲ್ಲಪ್ಪ ತೇಜುನಾ ಮಿಸ್ಕಿನ್, ವಿಕಾಸ ಮಿಸ್ಕಿನ್, ಮಂಜು ಶ್ಯಾವಿ, ಈರಣ್ಣ, ಮೋಹನ ಎಂಬುವರ ಮೇಲೆ ಎಪ್ ಐ ಆರ್ ದಾಖಲಿಸಲಾಗಿದೆ ಎಂದು ಬಿ.ಎಸ್. ನೇಮಗೌಡ ತಿಳಿಸಿದ್ದಾರೆ.

