ಗದಗ: ಅತ್ಯಾಚಾರ ಮಾಡಿದ ಆರೋಪಿಗೆ ೧೦ ವರ್ಷ ಶಿಕ್ಷೆ, 13 ಸಾವಿರ ರೂಪಾಯಿ ದಂಡವಿಧಿಸಿ ಗದಗನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸೋಮವಾರ ಆದೇಶಿಸಿದೆ.
ಗದಗ ಜಿಲ್ಲೆ ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯ ಗಜೇಂದ್ರಗಡ ಶಹರದ ಲಂಬಾಣಿ ತಾಂಡಾದಲ್ಲಿ ದಿನಾಂಕ 16/05/2017 ರಲ್ಲಿ
ಮನೆಯಲ್ಲಿ ಯಾರು ಇಲ್ಲದ ವೇಳೆ ಸಂತ್ರಸ್ಥೆ ಮನೆಗೆ ಹೋಗಿ ದೈಹಿಕ ಸಂಪರ್ಕ ಮಾಡಿದ್ದನು ಆ ವೇಳೆ ಸಂತ್ರಸ್ಥೆ ತಂದೆ-ತಾಯಿ ಮನೆಗೆ ಬಂದದ್ದು ಕಂಡು ಅವರಿಗೆ ಈ ಸಂಗತಿಯನ್ನು ಯಾರಿಗೂ ಹೇಳಬೇಡ, ಹೇಳಿದರೆ ನಿನಗೆ ಮತ್ತು ನಿನ್ನ ತಂದೆ ತಾಯಿಗೆ ಜೀವಂತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದನ್ನು ನಂತರ 3 ವರ್ಷಗಳಿಂದ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನಂಬಿಸಿ ನಂತರ ಮದುವೆ ಮಾಡಿಕೊಳ್ಳದೇ ಮೋಸ ಮಾಡಿದ್ದ ಈ ಕುರಿತು ಐಪಿಸಿ ಕಲಂ 420, 376, 506 ಅಡಿಯಲ್ಲಿ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ: 227/2017 ಕಲಂ: 376(2)(ಎನ್), 417, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಸೋಮವಾರ ಆರೋಪ ರುಜುವಾತು ಹಿನ್ನೆಲೆ ಆರೋಪಿ ಗುರುರಾಜ ಚವ್ಹಾಣ ಗೆ 10/02/02025 ರಂದು ಐಪಿಸಿ 376(2)(ಎನ್), 417, 506 ರಡಿ ೧೦ ವರ್ಷ ಶಿಕ್ಷೆ ಹಾಗೂ 13 ಸಾವಿರ ರೂಪಾಯಿ ದಂಡ ವಿಧಿಸಿಲಾಗಿದೆ.
