ಕೆ ವಿ ಜಿ ಬ್ಯಾಂಕ್ ವತಿಯಿಂದ 50 ವಿದ್ಯಾರ್ಥಿಗಳಿಗೆ ಪ್ರತಿಭ ಪುರಸ್ಕಾರ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆ: ಪ್ರಕಾಶ ಎ

graochandan1@gmail.com
1 Min Read

ಗದಗ : ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಪ್ರಮುಖ ಘಟ್ಟವಾಗಿದೆ ವಿದ್ಯಾರ್ಥಿಗಳು ಓದುವ ಆಸಕ್ತಿ ಬೆಳೆಸಿಕೊಂಡು ಉತ್ತಮ ಅಂಕ ಪಡೆದು ಶಾಲೆಯ ಹಾಗೂ ಜಗತ್ತಿನ ಕೀರ್ತಿ ಹೆಚ್ಚಿಸಬೇಕು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ವತಿಯಿಂದ ನೀಡಲಾಗುವ ಪ್ರತಿಭಾ ಪುರಸ್ಕಾರದಿಂದ ವಿದ್ಯಾರ್ಥಿಗಳಿಗೆ ಓದಿಗೆ ಶಿಕ್ಷಣಕ್ಕೆ ಅನುಕೂಲಕವಾಗಲಿ ಎಂದು ಕೆವಿಜಿ ಬ್ಯಾಂಕನ ಸಹಾಯಕ ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರಕಾಶ ಎ ಅವರು ಹೇಳಿದರು.

ಅವರು ನಗರದ ತೋಂಟದಾರ್ಯ ಮಠದ ಹತ್ತಿರ ಇರುವ ಕೆವಿಜಿ ಬ್ಯಾಂಕ ಪ್ರಧಾನ ಶಾಖೆ ಕಚೇರಿಯಲ್ಲಿ ಪರಿಶಿಷ್ಟ ಜಾತಿ ಪಂಗಡಗಳ 8,9,ಹಾಗೂ 10 ತರಗತಿಯಲ್ಲಿ ಉತ್ತಮ ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿಯರಿಗೆ ತಲಾ 5000 ಸಾವಿರ ರೂಪಾಯಿಗಳ ಪ್ರತಿಭಾ ಪುರಸ್ಕಾರ ನೀಡಿ ನೀಡಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಅವರ ಶಿಕ್ಷಣಕ್ಕೆ ಅನುಕೂಲವಾಗುವ ಕಾರಣಕ್ಕೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂದು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ವತಿಯಿಂದ ಗದಗ ತಾಲೂಕಿನ ಹೊಂಬಳ,ಅಸುಂಡಿ,ಬಿಂಕದಕಟ್ಟಿ,ಹುಲಕೋಟಿ,ಕುರ್ತಕೋಟಿ,ಹರ್ತಿ,ಸೊರಟೂರ,ಡಂಬಳ ಮುಂಡರಗಿ ಸುತ್ತಮುತ್ತಲಿನ ಗ್ರಾಮದಲ್ಲಿ ಸುಮಾರ 60 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿಲಾಯಿತು.

ಗ್ರಾಮೀಣ ಪ್ರದೇಶ ಜನರಿಗೆ ಉತ್ತಮ ಸೇವೆ ನೀಡುತ್ತಿರುವ ಕರ್ನಾಟಕದ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಸಾರ್ವಜನಿಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಉಳಿತಾಯ ಯೋಜನೆ ,ಎಫ್ ಡಿ,ವಿಮಾ ಸೌಲಭ್ಯ ಒದಗಿಸುತ್ತಿದೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಾದೇಶಿಕ ಕಛೇರಿ ಅಧಿಕಾರಿ ಶ್ರೀಪಾದರಾಜ ಹೊಂಬಳ ಅವರು ತಿಳಿಸಿದರು.

- Advertisement -
Ad image

ಈ ಸಂದರ್ಭದಲ್ಲಿ ಅತಿಥಿಗಳಾಗಿ ವೈಭವ ಅಗರವಾಲ್ ಹಿರಿಯ ವ್ಯವಸ್ಥಾಪಕರು ಪ್ರಾದೇಶಿಕ ಕಛೇರಿ ಗದಗ, ಎಂ ಆರ್ ನಾಯ್ಕ ಮುಖ್ಯೋಪಾಧ್ಯಾಯರು ಸಿ ಎಸ್ ಪಾಟೀಲ ಪ್ರೌಢ ಶಾಲೆ ಗದಗ,ಎಸ್ ಜಿ ಕುಲುಮಿ ಮುಖ್ಯೋಪಾಧ್ಯಾಯರು ಬಾಲಕಿಯರ ಪ್ರೌಢ ಶಾಲೆ ಗದಗ ಸೇರಿದಂತೆ ಗದಗ ತಾಲೂಕಿನ ಕೆವಿಜಿ ಬ್ಯಾಂಕನ ವಿವಿಧ ಶಾಖೆಯ ವ್ಯವಸ್ಥಾಪಕರು,ಪಾಲಕರು,ಸಾರ್ವಜನಿಕರು ಹಾಗೂ ಬ್ಯಾಂಕನ ಸಿಬ್ಬಂದಿ ಹಾಜರಿದ್ದರು.

Share this Article