ಗದಗ: ನಗರದಲ್ಲಿ ಮೀಟರ್ ಬಡ್ಡಿ ದಂಧೆಕೋರರಿಗೆ ಬೆಳ್ಳಂಬೆಳಗ್ಗೆ ಪೊಲೀಸರು ಬಿಗ್ ಶಾಕ್ ನೀಡಿದ್ದು ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ ನಿದ್ದೆಯ ಮಂಪರಿನಲ್ಲಿ ಬಡ್ಡಿ ದಂಧೆಕೋರರು ಖಾಕಿ ರೈಡ್ ಗೆ ಕಂಗಾಲಾಗಿದ್ದು ಬಡ್ಡಿ ದಂಧೆಕೋರರ ಮನೆಗಳಲ್ಲಿ ಲಕ್ಷಾಂತರ ರೂಪಾಯಿ ಹಣದ ಕಂತೆ, ಬಾಂಡ್, ಖಾಲಿ ಚೆಕ್ ಗಳು, ದಾಖಲೆಗಳನ್ನು ವಶಕ್ಕೆ ಪಡಿದಿದ್ದಾರೆ.
ಗದಗ ಶಹರ, ಬೆಟಗೇರಿ, ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಗಮೇಶ ದೊಡ್ಡಣ್ಣವರ ಮನೆಯಲ್ಲಿ 26 ಲಕ್ಷ 57 ಸಾವಿರ ಲಕ್ಷ ನಗದು,ಖಾಲಿ ಬಾಂಡ್, ಚೆಕ್ ಗಳು ಪತ್ತೆಯಾಗಿದ್ದು ರವಿ ಕೌಜಗೇರಿ ಮನೆಯಲ್ಲಿ ಚೆಕ್ ಗಳು, ಬಾಂಡ್, ಪೇಪರ್ಸ್, ಹಣ ಎಣಿಸುವ ಮಷಿನ್ ಪತ್ತೆಯಾಗಿವೆ ದರ್ಶನ್, ಉಮೇಶ್ ಸುಂಕದ, ಉದಯ ಸುಂಕದ ಮಾರುತಿ ಮುತಗಾರ, ಶಿವರಾಜ್ ಹಂಸನೂರ, ವಿಜಯ ಸೋಳಂಕಿ, ಶ್ಯಾಮ್ ಕುರಗೋಡ ರೌಡಿ ಶೀಟರ್ ಗಳು ಬಡ್ಡಿ ವ್ಯವಹಾರದಲ್ಲಿ ನಿರತರಾಗಿದ್ದು ಎಂಬ ಆರೋಪವಿದ್ದು ಅವರನ್ನು ಪೊಲೀಸರು ಪಡೆದಿದ್ದಾರೆ.
ಅವಳಿ ನಗರದಲ್ಲಿ ಒಟ್ಟು 12 ಕಡೆಗಳಲ್ಲಿ ಪೋಲಿಸರ್ ದಾಳಿ ನಡೆಸಿದ್ದು ಕೆಲ ಬಡ್ಡಿ ದಂದೆಕೋರರು ರೆಜಿಸ್ಟರ್ ಮಾಡಿ ವ್ಯವಹಾರ ನಡೆಸಿದ್ದು ಇನ್ನೂ ಕೆಲವರು ಅನಧಿಕೃತವಾಗಿ ಬಡ್ಡಿ ದಂಧೆ ನಡೆಸುತ್ತಿದ್ದಾರೆ ಬಡ್ಡಿ ಕಿರುಕುಳ ನೀಡಿತ್ತಿದ್ದು ಧಮ್ಕಿ, ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆಸಿ 9 ಜನರನ್ನು ವಶಕ್ಕೆ ಪಡೆದಿದ್ದಾರೆ.
ಬಿಎನ್ಎಸ್ ಹಾಗೂ ಸೆಕ್ಯೂರಿಟಿ ಪ್ರೋಸಿಡಿಂಗ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ತನಿಖೆ ಮುಂದುವರೆದಿದೆ ಎಂದು ಎಸ್ಪಿ, ಬಿ.ಎಸ್ ನೇಮಗೌಡ ಹೇಳಿದ್ದಾರೆ.
ಎಸ್ಪಿ ಬಿ ಎಸ್ ನೇಮಗೌಡ, ಹೆಚ್ಚುವರಿ ಎಸ್ಪಿ ಎಂ ಬಿ ಸಂಕದ ನೇತೃತ್ವದಲ್ಲಿ ಸಿಪಿಐಗಳಾದ ಧೀರಜ್ ಸಿಂಧೆ, ಬಿ ಡಿ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆದಿದೆ.

