ಗದಗ : ಸರಿ ಸುಮಾರು ಎರಡು ಲಕ್ಷ ರೂಪಾಯಿ ಬೆಲೆ ಬಾಳುವ ಒಡವೆ ಇದ್ದ ಬ್ಯಾಗ ಅನ್ನು ಪ್ರಯಾಣಿಕರೊಬ್ಬರು ತಮ್ಮ ಅಜಾಗರೂಕತೆಯಿಂದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಬಿಟ್ಟು ಹೋಗಿದ್ದರು ಈ ಕುರಿತು ಗದಗ ಶಹರ ಠಾಣೆಗೆ ಮಾಹಿತಿ ನೀಡಿದ್ದರು ಕಾರ್ಯಾಚರಣೆ ನಡೆಸಿದ ಪೋಲಿಸಿರು ಇಂದು (ಶುಕ್ರವಾರ) 2,00,000 ಬೆಲೆ ಬಾಳುವ ಬೆಳ್ಳಿ,ಬಂಗಾರದ ಆಭರಣಗಳನ್ನು ಕಳೆದುಕೊಂಡವರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ.
ಘಟನೆ ಹಿನ್ನೆಲೆ:
ನಿನ್ನೆ ದಿನಾಂಕ 06.02.2025 ರಂದು ಮಧ್ಯಾಹ್ನ 1.30 ಗಂಟೆಗೆ ನಗರದ ಹಳೇ ಬಸ್ ನಿಲ್ದಾಣದಲ್ಲಿ ಮುಂಡರಗಿ ಗ್ರಾಮದ ಹಿರೆವಡ್ಡಟ್ಟಿ ನಿವಾಸಿಯಾದ ಮಂಜುಳಾ ಉಪ್ಪಾರ ಕೆ ಎಸ್ ಆರ್ ಟಿಸಿ ಬಸ್ ಮೂಲಕ ಮುಂಡರಗಿ ಗೆ ತೆರಳುತ್ತಿದ್ದರು ಬಸ್ ಹತ್ತಿ ಸಿಟು ಹಿಡಿದ ಮಂಜುಳಾ ತಮ್ಮ ಅಜಾಗರೂಕತೆಯಿಂದ ತನ್ನಲ್ಲಿ ಇದ್ದ ಬ್ಯಾಗನ್ನು ಬಿಟ್ಟು ಹೂ ಹಣ್ಣು ತರಲು ಹೋಗಿದ್ದಳು ಅಷ್ಟರಲ್ಲಿ ಬಸ್ ಹಳೆ ಬಸ್ ನಿಲ್ದಾಣದಿಂದ ಮುಂಡರಗಿ ಕಡೆಗೆ ಹೋಗಿತ್ತು ಕೂಡಲೇ ಮಂಜುಳಾ ಸಮೀಪದ ಶಹರ ಪೋಲಿಸ್ ಠಾಣೆಗೆ ಮಾಹಿತಿ ನೀಡಿದರು ಕಾರ್ಯಪ್ರವೃತ್ತರಾದ ಪೋಲಿಸರು ಮಾಹಿತಿ ಪಡೆದು ಮುಂಡರಗಿ ಪೋಲಿಸ್ ಹಾಗೂ ಡಿಪೋ ಮ್ಯಾನೆಜರ್ ಗಳ ಸಹಾಯದಿಂದ ಇಂದು ಬ್ಯಾಗ ಕಳೆದುಕೊಂಡ ಮಹಿಳೆಗೆ ಬ್ಯಾಗ ಹಿಂತಿರುಗಿಸಿದ್ದಾರೆ ಬ್ಯಾಗನಲ್ಲಿ
ಮಹಿಳೆಯ ನೆಕ್ಲೆಸ್ ಹಾಗೂ ಹ್ಯಾಂಗಿಂಗ್ಸ್ ಬೆಳ್ಳಿ ಕಾಲು ಚೈನ್ ಸೇರಿದಂತೆ ಸುಮಾರು 2,00,000 ಬೆಲೆ ಬಾಳುವ ಬಂಗಾರ ಹಾಗೂ ಬೆಳ್ಳಿ ಸಾಮಾನುಗಳನ್ನು ಹಿಂತಿರುಗಿಸಿ ಮಾನವೀಯತೆಯ ಮೆರೆದಿದ್ದಾರೆ.
ಈ ಸಂಧರ್ಭದಲ್ಲಿ ಶಹರ ಪೋಲಿಸ ಸಿಪಿಐ ಡಿ ಬಿ ಪಾಟೀಲ, ಪಿಎಸ್ ಐ ಮುಂಡೆವಾಡಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

