ಶಿರಹಟ್ಟಿ : ಕಡಿಮೆ ಹಣಕ್ಕೆ ಬಂಗಾರ ಗೋಲ್ಡ ಕ್ವಾಯಿನ್ ಕೊಡಿಸುತ್ತೇವೆ ಎಂದು ನಂಬಸಿ ಲಕ್ಷಾಂತರ ರೂ.ಪಂಗನಾಮ ಹಾಕಿರೋ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನಲ್ಲಿ ನಡೆದಿದೆ.
ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ ಗ್ರಾಮದ ಬಳಿ ಡಿ 13 ರಂದು ,ಇಬ್ಬರು ವಂಚಕರು ಬಂಗಾರದ ವ್ಯಾಪಾರಿಗಳಂತೆ ವರ್ತಿಸಿ, ವೆಂಕಟೇಶ ಅನ್ನುವ ವ್ಯಕ್ತಿಗೆ ಕಡಿಮೆ ದರದಲ್ಲಿ ಬಂಗಾರದ ನಾಣ್ಯಗಳನ್ನ ಕೊಡಿಸುತ್ತೇವೆ ಅಂತ ನಂಬಿಸಿ ಮೋಸ ಮಾಡಿ ಪರಾರಿಯಾಗಿದ್ದಾರೆ.
ವಂಚಕರು ಮೊದಲು ಒಂದು ಗ್ರಾಮ ತೂಕದ ಎರಡು ಅಸಲಿ ನಾಣ್ಯಗಳನ್ನು ಕೊಟ್ಟು ವೆಂಕಟೇಶನಿಗೆ ನಂಬಿಸಿದ್ದಾರೆ. ಹೀಗೆ ಅಸಲಿ ಬಂಗಾರದ ನಾಣ್ಯಗಳನ್ನ ನೋಡಿದ ವೆಂಕಟೇಶ, ವಂಚರಿಗೆ ಹೋಗಿ, ಬರೊಬ್ಬರಿ 6,50,000/- ರೂಗಳನ್ನು ವಂಚಕರಿಗೆ ಕೊಟ್ಟಿದ್ದಾನೆ. ಇದಕ್ಕೆ ಪ್ರತಿಯಾಗಿ ವಂಚಕರು ವೆಂಕಟೇಶನಿಗೆ 170 ಗ್ರಾಂ ಬಂಗಾರದ ನಾಣ್ಯಗಳನ್ನು ಕೊಟ್ಟಿದ್ದಾರೆ.
ನಂತರ ಬಂಗಾರದ ನಾಣ್ಯಗಳೆನ್ನೆಲ್ಲ ವೆಂಕಟೇಶ್ ಪರೀಕ್ಷೆ ಮಾಡಿಸಿದ್ದಾನೆ. ಎಲ್ಲ ನಾಣ್ಯಗಳೂ ನಕಲಿ ಎನ್ನುವದು ಗೊತ್ತಾಗಿದೆ. ಬಳಿಕ ಗೋಲ್ಡ್ ಕ್ವಾಯಿನ್ಸ್ ಕೊಟ್ಟವರನ್ನ ಸಂಪರ್ಕಿಸಲು ಹೋದರೂ ಸಂಪರ್ಕಕ್ಕೆ ಸಿಗದೇ ಪರಾರಿಯಾಗಿದ್ದಾರೆ.
ವೆಂಕಟೇಶ್ ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಂಚಕರಿಗಾಗಿ ಬಲೆ ಬೀಸಿದ್ದಾರೆ.