ಮುಂಡರಗಿ : ಲಾರಿಯೊಂದು ರಸ್ತೆ ಬದಿ ಮಲಗಿದ್ದ ಕುರಿಗಳ ಮೇಲೆ ಹರಿದು ಎದುರು ಬರುವ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಟೋಲ್ ಗೇಟ್ ಬಳಿ ತಡ ರಾತ್ರಿ ಘಟನೆ ನಡೆದಿದೆ.
ಶುಗರ್ ಫ್ಯಾಕ್ಟರಿ ಕಡೆಯಿಂದ ಮುಂಡರಗಿ ಕಡೆಗೆ ಬರುತ್ತಿದ್ದ ಲಾರಿ
ಕುರಿಗಳ ಮೇಲೆ ಹರಿದು ನಂತರ ಎದುರಿನ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಹತ್ತಾರು ಕುರಿಗಳು ಸಾವನಪ್ಪಿದ್ದು 20 ಕ್ಕೂ ಹೆಚ್ಚು ಕುರಿಗಳಿಗೆ ಗಾಯಗಳಾಗಿವೆ ಕಕ್ಕೂರು ಗ್ರಾಮದ ಮಂಜುನಾಥ್ ದಳವಾಯಿ ಎಂಬುವರಿಗೆ ಸೇರಿದ ಕುರಿಗಳಾಗಿದ್ದು
ತಮಿಳನಾಡು ಮೂಲದ ಲಾರಿ ಹಾಗೂ ಚಾಲಕನನ್ನು ಪೊಲೀಸ್ ವಶಕ್ಕೆ ಪಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.