ರಾಜ್ಯ ಮಟ್ಟದ ಅಬ್ಯಾಕಸ್ ಸ್ಪರ್ಧೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಸಾಧನೆ

ಸಮಗ್ರ ಪ್ರಭ ಸುದ್ದಿ
1 Min Read

ಗದಗ: ಸ್ಮಾರ್ಟ್ ಕಿಡ್ಸ ಅಬ್ಯಾಕಸ್ ವಿದ್ಯಾರ್ಥಿಗಳಿಗೆ ರವಿವಾರ ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ರಾಜ್ಯಮಟ್ಟದ ಸ್ಪರ್ಧೆಯ ಏರ್ಪಡಿಸಲಾಗಿತ್ತು ಈ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯ ಶಿಕ್ಷಕಿ ಶ್ವೇತಾ ಕಲಾಲ ನೇತೃತ್ವದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದಿಕೊಂಡಿದ್ದು ಜಿಲ್ಲೆಗೆ ಹಾಗೂ ಅಬ್ಯಾಕಸ್ ಶಾಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಸಂತೋಷ್ ಕಲಾಲ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಮಕ್ಕಳಿಗೆ ಅಬ್ಯಾಕಸ್ ಶಿಕ್ಷಣ ನೀಡುವುದರಿಂದ ಮಕ್ಕಳಿಗೆ ಕಲಿಕೆಯ ಸಾಮರ್ಥ್ಯ‌ ಹೆಚ್ಚಳ, ಏಕಾಗ್ರತೆ, ಜ್ಞಾಪಕ ಶಕ್ತಿ ಹೆಚ್ಚಳ, ತಾರ್ಕಿಕ ಶಕ್ತಿ ಮತ್ತು ಕಲಾತ್ಮಕ ಗುಣಗಳು, ಭಯ, ಆತಂಕ ನಿವಾರಣೆಯಾಗಲಿದೆ ಮಕ್ಕಳ ಉಜ್ವಲ ಭವಿಷ್ಯಕ್ಕೆ ಅಬ್ಯಾಕಸ್ ಸಹಕಾರಿಯಾಗಲಿದೆ ಎಂದು ಹೇಳಿದರು.
ರಾಜ್ಯ ಮಟ್ಟದ ಅಬ್ಯಾಕಸ್ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯಿಂದ ಪಾಲ್ಗೊಂಡು ಸಾಧನೆ ಗೈದ ವಿದ್ಯಾರ್ಥಿಗಳಾದ ಫಕ್ಕೀರಡ್ಡಿ ಪ್ರವೀಣರಡ್ಡಿ ಹುಚ್ಚಣ್ಣವೆರ್ – ಪ್ರಥಮ ಬಹುಮಾನ, ಬಸವಪ್ರಭು ಹವಳದ್ – ಪ್ರಥಮ ಬಹುಮಾನ,ಪ್ರಣಿಕಾ ಸಂತೋಷ್ ಕಲಾಲ್ – ಪ್ರಥಮ ಬಹುಮಾನ, ಪ್ರತಿಭಾ ಮಂಜುನಾಥ ಡಂಬಳ – ದ್ವೀತಿಯ ಬಹುಮಾನ, ಫರ್ಹಾತ್ ಎಂ. ಹುಯಿಲಗೋಳ – ದ್ವೀತಿಯ ಬಹುಮಾನ, ಶ್ರೀನಿಧಿ ಸಂಕಪ್ಪ ನೈನಾಪುರ – ತೃತೀಯ ಬಹುಮಾನ, ವಿರಾಟ್ ಸಂತೋಷ್ ಕಲಾಲ್ – ತೃತೀಯ ಬಹುಮಾನ, ಶ್ರೇಯಾಂಕ್ ಎಸ್. ಬಳಿಗಾರ್ – ರನ್ನರ್ ಅಪ್ , ಸಿಂಚನಾ ಎಸ್.ಜವಾರಿ – ರನ್ನರ್ ಅಪ್ ಗಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಅನ್ವಿತಾ ಅರ್ಮಾನಿ, ಭರತ್ ಮಂಜುನಾಥ್ ಡಂಬಳ, ಭೂಷಣ ಮಂಜುನಾಥ್ ಡಂಬಳ, ಸಿದ್ದೇಶ್ವರಯ್ಯ ಶಿವಯೋಗಿ ಗುದ್ದಿಮಠ, ಝೈನಾ ಎಂ. ಹುಯಿಲಗೋಳ, ಅಮೀರ್ ಹಮ್ಜಾ ಎಂ.ಹುಯಿಲಗೋಳ, ಧರ್ಮಶ್ರೀ ಸಂಕಪ್ಪ ನೈನಾಪುರ, ಭೂಮಿಕಾ ವಿಜಯ್ ರೇವಂಕಿ, ಮೋಹಿತ್ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗ ಶಿಕ್ಷಕರು ಹಾಜರಿದ್ದರು. ಇದೇ ವೇಳೆ ಗದಗನ ಸ್ಮಾರ್ಟ್ ಕಿಡ್ಸ್ ಅಬ್ಯಾಕಸ್ – ಗದಗ (ಹುಡ್ಕೊ ಕಾಲನಿ) ಓಂ ಶಾಂತಿ ಭವನದ ಹಿಂದೆ ಇರುವ ಶಾಖೆಗೆ ಅತ್ಯುತ್ತಮ ಫ್ರಾಂಚೈಸಿ ಪ್ರಶಸ್ತಿಯನ್ನು ಶಾಖೆಯ ಮುಖ್ಯಸ್ಥೆ ಶ್ವೇತಾ ಕಲಾಲ ಅವರು ಸ್ವೀಕರಿಸಿದರು.

Share this Article