ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ 226 ಒಣಮೆಣಸಿನಕಾಯಿ ಚೀಲಗಳನ್ನು ಪತ್ತೆಮಾಡಿದ ಪೋಲಿಸರು

graochandan1@gmail.com
1 Min Read

ಗದಗ: ಇದೇ ವರ್ಷ ಮೇ ತಿಂಗಳಲ್ಲಿ ಬೆಟಗೇರಿ ಬಡಾವಣೆ ಠಾಣೆಗೆ ಎಪಿಎಂಸಿ ವರ್ತಕರಿಂದ 6 ಲಕ್ಷ ರೂ. ಮೌಲ್ಯದ 226 ಒಣಮೆಣಸಿನಕಾಯಿ ಚೀಲಗಳನ್ನು ಖರೀದಿಸಿ ಮೆಣಸಿನಕಾಯಿ ಚೀಲಗಳನ್ನು ತೆಗೆದುಕೊಂಡು ಹೋಗಿ ಹಣ ಕೊಡದೇ ಮೋಸ ಮಾಡಿದ್ದಾನೆ ಎಂಬ ಪ್ರಕರಣ ಮೇಲೆ ಎಫ್ಐಆರ್ ದಾಖಲಿಸಿ ತನಿಖೆಗೆ ಇಳಿದ ಪೋಲಿಸರು ಇಂದು ಸೂರತ್ ನಲ್ಲಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ರೂ. ಮೌಲ್ಯದ 226 ಒಣಮೆಣಸಿನಕಾಯಿ ಚೀಲಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದು ಮರಳಿ ಗದಗ ನಗರದ ಮೆಣಸಿನ ಕಾಯಿ ಗೋದಾಮಿನಲ್ಲಿ ಸಂಗ್ರಹಿಸಿಟ್ಟು ವಂಚರ ಪತ್ತೆಗೆ ಮುಂದಾಗಿದ್ದಾರೆ.

ಮೋಸ ಮಾಡಿ ತೆಗೆದುಕೊಂಡು ಹೋದ ಒಣಮೆಣಸಿನಕಾಯಿ ಚೀಲಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಬಿ.ಎಸ್. ನೇಮಗೌಡ ಅವರು ಹೆಚ್ವುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಡಿವೈಎಸ್ಪಿ ಜಿ.ಎಚ್.‌ ಇನಾಮದಾರ ಅವರ ಮಾರ್ಗದರ್ಶನದಲ್ಲಿ ಸಿಪಿಐ ಧೀರಜ್.ಬಿ. ಸಿಂಧೆ, ಪಿಎಸ್ಐ ಮಾರುತಿ ಜೋಗದಂಡಕರ ನೇತೃತ್ವದಲ್ಲಿ ತಂಡ ರಚನೆ ಮಾಡಿ ರೈತರ ಬೆಳೆದ ಬೆಲೆಯನ್ನು ವಮಚನೆ ಮಾಡಿ ತೆಗೆದುಕೊಂಡ ಹೋದ ಒಣ ಮೆಣಸಿನಕಾಯಿ ಚೀಲ ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ.

ಗುಜರಾತ ರಾಜ್ಯದ ಸೂರತ್‌ನ ಉಮಾ ಕೋಲ್ಡ್ ಸ್ಟೋರೆಜ್ ದಲ್ಲಿ ಸಂಗ್ರಹಿಸಿಟ್ಟಿದ್ದ ₹6 ಲಕ್ಷ ಮೌಲ್ಯದ 226 ಒಣಮೆಣಸಿನಕಾಯಿ ಚೀಲಗಳನ್ನು ವಶಪಡಿಸಿಕೊಂಡು ತನಿಖಾ ಕಾರ್ಯ ಮುಂದುವರಿಸಿದ್ದಾರೆ.

Share this Article