ಭಾರತದ ಹೆಮ್ಮೆಯ ಉದ್ಯಮಿ ರತನ್‌ ಟಾಟಾ(86) ಇನ್ನಿಲ್ಲ

ಸಮಗ್ರ ಪ್ರಭ ಸುದ್ದಿ
1 Min Read

ಮುಂಬೈ: ಭಾರತದ ಹೆಮ್ಮೆಯ ಹಾಗೂ ಮಧ್ಯಮ ವರ್ಗದ ಪ್ರೀತಿಯ ರತನ್‌ ಟಾಟಾ ಅವರು ಇನ್ನಿಲ್ಲ. ರತನ್‌ಟಾಟಾ ಅವರು ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದೆ ಎಂದು ಬುಧವಾರ ಸಂಜೆಯಷ್ಟೇ ಸುದ್ದಿಯಾಗಿತ್ತು. ರಾತ್ರಿ ವೇಳೆಗೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ದೇಶದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿರುವ ಹಾಗೂ ಭಾರತೀಯರೊಂದಿಗೆ ಆತ್ಮೀಯ ಒಡನಾಟವನ್ನು ಹೊಂದಿದ್ದರು.

ರತನ್‌ಟಾಟಾ ಅವರನ್ನು ಸೋಮವಾರ ಮಹಾರಾಷ್ಟ್ರದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾರಂಭದಲ್ಲಿ ಅವರು ಸಾಮಾನ್ಯ ಆರೋಗ್ಯ ಪರೀಕ್ಷೆ ಒಳಪಟ್ಟಿದ್ದಾರೆ ಎಂದೇ ಹೇಳಲಾಗಿತ್ತು. ಅಲ್ಲದೇ ಅವರು ಸಹ ನಾನು ಆರೋಗ್ಯವಾಗಿಯೇ ಇದ್ದೇನೆ. ಚಿಂತಿಸಬೇಡಿ ಎಂದೇ ಹೇಳಿದ್ದರು. ಆದರೆ, ಅವರ ಆರೋಗ್ಯದ ಬಗ್ಗೆ ಅನುಮಾನಗಳು ಮೂಡಿದ್ದವು. ಅದರಂತೆ ಬುಧವಾರ ಸಂಜೆಯ ವೇಳೆಗೆ ಅವರ ಆರೋಗ್ಯ ಕ್ಷೀಣಿಸುತ್ತಿದೆ ಎನ್ನುವ ವರದಿಗಳು ಬರಲು ಪ್ರಾರಂಭಿಸಿತ್ತು. ಬುಧವಾರ ತಡರಾತ್ರಿ ಅವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ. ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಅವರಿಗೆ 86 ವರ್ಷವಾಗಿತ್ತು.

 

Share this Article