ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ, ಪ್ಯಾನ್ ವರ್ಲ್ಡ್ ಸಿನಿಮಾ ಮಾರ್ಟಿನ್ ಅಕ್ಟೋಬರ್ 11 ರಂದು ಭಾರತದಾದ್ಯಂತ 3 ಸಾವಿರ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದೆ. ರಿಲೀಸ್ ಗೂ ಮೊದಲೆ ಉತ್ತರ ಕರ್ನಾಟಕ ನೇರೆಯ ರಾಜ್ಯದಲ್ಲಿ ಸಿನಿಮಾದ ಹಾಡು ರಿಲೀಸ್ ಮಾಡಲು ಚಿತ್ರ ತಂಡ ಸಿದ್ಧತೆ ನಡೆಸಿದೆ ಧ್ರುವ ಸರ್ಜಾ ಅಭಿನಯದ 4ನೇ ಚಿತ್ರ ಇದಾಗಿದ್ದು ಚಿತ್ರ ರಿಲೀಸ್ ಗೆ ಅಭಿಮಾನಿಗಳು ಹಾಗೂ ಸಿನಿ ಪ್ರೀಯರು ಕಾಯುತ್ತಿದ್ದಾರೆ.