ಗದಗ: ಇತ್ತೀಚೆಗೆ ರಾಜ್ಯ ಭವನ ಮೂಲಕ ರಾಜಕಾರಣ ಪ್ರವೃತ್ತಿ ಆರಂಭವಾಗಿದೆ ಆ ಹಿನ್ನೆಲೆಯಲ್ಲಿ ಎಚ್ಚರಿಕೆ ಹೆಜ್ಜೆಯಾಗಿ ಸಿಬಿಐಗಿದ್ದ ಬ್ಲ್ಯಾಂಕೆಟ್ ಪರ್ಮಿಷನ್ ತೆಗೆದಿದ್ದೇವೆ ಎಂದು ಸಚಿವ ಎಚ್ಕೆ ಪಾಟೀಲ ಹೇಳಿದರು.
ರಾಜ್ಯಪಾಲರ ಪತ್ರಗಳಿಗೆ ಸಚಿವ ಸಂಪುಟ ಅನುಮೋದನೆ ಪಡೆದು ಉತ್ತರ ನೀಡುವ ವಿಚಾರವಾಗಿ ಮಾತನಾಡಿದ ಅವರು ರಾಜ್ಯಪಾಲರು ಸಣ್ಣ ಸಣ್ಣ ವಿಷಯಗಳಿಗೂ ಪತ್ರ ಬರೆಯುವ ಮೂಲಕ ಗೊಂದಲ ಸೃಷ್ಟಿಮಾಡುವ ಪ್ರಯತ್ನದಲ್ಲಿದ್ದಾರೆ.
ಹೀಗಾಗಿ ಏನೇ ಉತ್ತರ ಕಳುಹಿಸಬೇಕಾದರೂ ಸಚಿವ ಸಂಪುಟ ಪರಿಗಣಿಸಿ ಕಳುಹಿಸಲು ನಿರ್ಣಯ ಕಳುಹಿಸಲು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
