ಮುಂಡರಗಿ- ಇತ್ತೀಚಿಗೆ ತಿರುಪತಿ ದೇವಸ್ಥಾನದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಕೆ ಮಾಡಿದ ಹಿನ್ನೆಲೆ ನಮ್ಮ ರಾಜ್ಯದಲ್ಲಿ ಎಲ್ಲಾ ಧಾರ್ಮಿಕ ಕೇಂದ್ರಗಳು ಮತ್ತು ಅನ್ನದಾಸೋ ಗಳಲ್ಲಿ ಕಡ್ಡಾಯವಾಗಿ ಗುಣಮಟ್ಟದ ತುಪ್ಪವನ್ನು ಬಳಸಬೇಕು ಎಂದು ವರ್ತಕ ಪವನ್ ಚೋಪ್ರಾ ಆಗ್ರಹಿಸಿದ್ದಾರೆ.
ಗುಣಮಟ್ಟದ ತುಪ್ಪವನ್ನು ಪರಿಶೀಲಿಸಿ ಬಳಕೆ ಮಾಡಬೇಕು ಏಕೆಂದರೆ ನಮ್ಮ ರಾಜ್ಯದಲ್ಲಿ ಸುಮಾರು 34 ಸಾವಿರಕ್ಕೂ ಅಧಿಕ ದೇವಾಲಯಗಳು ಇವೆ ಕೆಲವು ಪ್ರತಿಷ್ಠಿತ ದೇವಾಲಯಗಳಲ್ಲಿ ಭಕ್ತರಿಗೆ ನಿತ್ಯವೂ ಅನ್ನದಾಸೋಹ ನಡಿಯುತ್ತದೆ ಇದರಿಂದ ಗುಣಮಟ್ಟದ ತುಪ್ಪ ಬಳಸಬೇಕು ಒಂದು ವೇಳೆ ಶುದ್ದ ವಿಲ್ಲದ ತುಪ್ಪ ಕಂಡುಬಂದರೆ ಅಂಥವರ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈವೇಳೆ ಆಗ್ರಹಿಸಿದ್ದಾರೆ.