ಗದಗ : ಗದಗ-ಬೆಟಗೇರಿ ಅವಳಿ ನಗರದಲ್ಲಿ ಇಂದು ರಾತ್ರಿ ಕಳೆದ ಒಂದು ಗಂಟೆಯಿಂದ ಸುರಿಯುತ್ತಿರುವ ಮಳೆಗೆ ಬೆಟಗೇರಿ ಭಾಗದಲ್ಲಿ ಗಟಾರು ಮೂಲಕ ಮಳೆ ನೀರು ಇಡೀ ಮನೆಗಳಿಗೆ ನುಗ್ಗಿದ್ದೆ ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಗದಗ-ರೋಣ ರಸ್ತೆ ತಡೆ ನಡೆಸಿ ಗದಗ-ಬೆಟಗೇರಿ ನಗರಸಭೆ ಅಧಿಕಾರಿಗಳ ಹಾಗೂ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಟಗೇರಿಯ ಟರ್ನಲ್ ಪೇಟೆಯಲ್ಲಿ ರಸ್ತೆಗಳೆಲ್ಲಾ ಕೆರೆಯಂತಾಗಿ
ನೀರಿನಲ್ಲಿ ನಡೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ ಜೊತೆಗೆ
ಬಾರಿ ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ಪರಿಣಾಮವಾಗಿ ಟರ್ನಲ್ ಪೇಟೆಯ ಕೆಲವು ಕುಟುಂಬಸ್ಥರ ಜೀವನ ಅಸ್ತವ್ಯಸ್ತವಾಗಿದೆ.
ಪ್ರತಿ ಭಾರಿ ಮಳೆ ಬಂದಾಗ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುವ ನೀರಿಗೆ ಶಾಶ್ವತ ಪರಿಹಾರ ನಿರ್ಮಾಣ ಮಾಡವಲ್ಲಿ ಯಾವವೊಬ್ಬ ನಗರ ಸಭೆ ಅಧಿಕಾರಿ ಹಾಗೂ ಸದಸ್ಯರು ಮುಂದಾಗದಿದ್ದ ಪರಿಣಾಮವಾಗಿ ಇಂದು ಗದಗ-ರೋಣ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.
