ಲವ ಜಿಹಾದಗೆ ಬಲಿಯಾಗದಂತೆ ಹಿಂದೂ ಯುವತಿಯರಿಂದ ಪ್ರಮಾಣ ವಚನ

ಸಮಗ್ರ ಪ್ರಭ ಸುದ್ದಿ
1 Min Read

ಗದಗ: ನಗರದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆಯ ಕಾರ್ಯಕ್ರವೊಂದರಲ್ಲಿ ಹಿಂದೂ ಸಮಾಜದ ಯುವತಿಯರಿಂದ “ಲವ್ ಜಿಹಾದಗೆ” ಬಲಿಯಾಗದಂತೆ ಶ್ರೀರಾಮಚಂದ್ರನ ಮೇಲೆ ಮತ್ತು ಗಣಪತಿ ದೇವರ ಮೇಲೆ ಸಾಮೂಹಿಕವಾಗಿ ಪ್ರಮಾಣವಚನ ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಕ್ರಾಂತಿ ಸೇನಾ ಗದಗ್ ಜಿಲ್ಲಾ ಅಧ್ಯಕ್ಷ ಬಾಬು ಬಾಾಕಳೆ ಮಾತನಾಡಿ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಶಾಲಾ ಕಾಲೇಜಿನ ಹಿಂದೂ ಸಮಾಜದ ಸಾಕಷ್ಟು ಹಿಂದೂ ಯುವತಿಯರು ಲವ್ ಜಿಹಾದಗೆ ಬಲಿಯಾಗಿ ಅವರ ಜೀವನವನ್ನು ಹಾಳು ಮಾಡಿಕೊಂಡ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ ಅದಕ್ಕೋಸ್ಕರ ಲವ್ ಜಿಹಾದ್ ಕಡಿವಾಣ ಹಾಕಬೇಕು ಅದನ್ನು ತಡೆಯುವಂತ ಪ್ರಯತ್ನ ಮಾಡಬೇಕು ಎಂದು ಯುವತಿಯರಿಗೆ ಹಾಗೂ ಪೋಷಕರಿಗೆ ದೇವರ ಮೇಲೆ ಪ್ರಮಾಣ ವಚನ ಮಾಡಿಸುವ ಮುಖಾಂತರ ಲವ್ ಜಿಹಾದ್ ವಿರುದ್ಧ ಜಾಗೃತಿ ಮೂಡಿಸಿದ್ದಾರೆ.

ಈ ಸಂದರ್ಭದಲ್ಲಿ ಭಾಷಣಗಾರತಿ ಕು. ಹರಿಕಾ ಮಂಜನಾಥ ಮಾತನಾಡಿ ಹಿಂದೂ ಸಮಾಜ ಜಾಗೃತವಾಗಬೇಕು ಸನಾತನ ಹಿಂದೂ ಧರ್ಮದ ಸಂಸ್ಕೃತಿ ಸಂಸ್ಕಾರವನ್ನು ಮಕ್ಕಳಿಗೆ ಕಲಿಸಬೇಕು ಎಂದು ಭಾಷಣದಲ್ಲಿ ಹೇಳಿದರು.

Share this Article