ಗದಗ: ಸಾರಿಗೆ ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ ನಡೆದು ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸಾವನಪ್ಪಿದ ಘಟನೆ ಇಂದು ಮುಂಜಾನೆ ಜಿಲ್ಲೆಯ ನರಗುಂದ ತಾ. ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಹಾವೇರಿ ಮೂಲದ ರುದ್ರಪ್ಪ ಅಂಗಡಿ(55),ಪತ್ನಿ ರಾಜೇಶ್ವರಿ (45),ಮಗಳು ಐಶ್ವರ್ಯ (16),ಮಗ ವಿಜಯ(12) ಮೃತ ದುರ್ದೈವಿಗಳಾಗಿದ್ದು ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ನರಗುಂದ ತಾ. ಕಲ್ಲಾಪೂರ ಗ್ರಾಮದಲ್ಲಿರುವ ಕಲ್ಲಾಪೂರ ಬಸವೇಶ್ವರ ದೇವಸ್ಥಾನಕ್ಕೆ ಹೊರಟ್ಟಿದ್ದರು
ಇಳಕಲ್ ನಿಂದ ಹುಬ್ಬಳ್ಳಿ ಕಡೆಗೆ ಹೊರಟ್ಟಿದ್ದ ಸಾರಿಗೆ ಬಸ್.
ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಈ ಕುರಿತು ನರಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

