ಗದಗ: ಜನವರಿ 2024 ರಿಂದ ಹಿಡಿದು ಈವರೆಗೂ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಕಳ್ಳತನ ಪ್ರಕರಣಗಳನ್ನು ಭೇದಿಸಿದ ಜಿಲ್ಲಾ ಪೊಲೀಸರು 30 ವಾಹನ, 48 ಮನೆ ಕಳ್ಳತನ ಪ್ರಕರಣ, 7 ಇತರೆ ಕಳ್ಳತನ ಪ್ರಕರಣ, 6 ಮೋಸ ವಂಚನೆ ಪ್ರಕರಣ ಹಾಗೂ ಮೊಬೈಲ್ ಕಳ್ಳತನ ಪ್ರಕರಣ ಸೇರಿ ಒಟ್ಟಾರೆ 91 ಪ್ರಕರಣಗಳನ್ನು ಭೇದಿಸಿ ಸರಿ ಸುಮಾರು 2 ಕೋಟಿ 43 ಲಕ್ಷ ಮೌಲ್ಯದ ಚಿನ್ನ,ಬೆಳ್ಳಿ,ಮೊಬೈಲ್,ದ್ವಿಚಕ್ರವಾಹನ,ಟ್ರಾಕ್ಟರ್, ಟೈರಲ್ ,ರೋಟವೆಟ್,ಬೂಲೆರೋ ವಾಹನ ಸೇರಿದಂತೆ ವಿವಿಧ ಕಳ್ಳತನವಾದ ವಸ್ತುಗಳನ್ನು ಪತ್ತೆಮಾಡಿ ಕಳೆದುಕೊಂಡ ಸಾರ್ವಜನಿಕರಿಗೆ ಮರಳಿಸಿದ್ದಾರೆ.
ಈ ಕುರಿತು ಇಂದು ನಗರದ ಪೋಲಿಸ್ ಭವನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
91 ಪ್ರಕರಣಗಳ ಪೈಕಿ 112 ಜನ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಅವರಿಂದ
90 ಲಕ್ಷ ರೂ. ಮೌಲ್ಯದ 2.16 ಕೆಜಿ ಚಿನ್ನ, 5.5 ಲಕ್ಷ ರೂ. ಮೌಲ್ಯದ 8 ಕೆಜಿ ಬೆಳ್ಳಿ, 87 ಸಾವಿರ ರೂ. ನಗದು,
7.60 ಲಕ್ಷ ರೂ. ಮೌಲ್ಯದ 21 ದ್ವಿಚಕ್ರ ವಾಹನ, 16 ಲಕ್ಷ ರೂ. ಮೌಲ್ಯದ 3 ಟ್ರ್ಯಾಕ್ಟರ್, 7.35 ಲಕ್ಷ ರೂ. ಮೌಲ್ಯದ 5 ಟ್ರ್ಯಾಕ್ಟರ್ ಟ್ರೈಲರ್, 4.5 ಲಕ್ಷ ರೂ. ಮೌಲ್ಯದ ಬೊಲೆರೊ ಗೂಡ್ಸ್ ವಾಹನ ಪತ್ತೆ ಮಾಡಲಾಗಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದ ವೇಳೆ ಪ್ರಕರಣವನ್ನು ಭೇದಿಸುವಲ್ಲಿ ಕಾರ್ಯ ನಿರ್ವಹಿಸಿದ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವಿಶೇಷ ಬಹುಮಾನ ಘೋಷಣೆ ಮಾಡಲಾಯಿತು.
ಪೋಲಿಸರ ಈ ಕಾರ್ಯಕ್ಕೆ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡ ಸಾರ್ವಜನಿಕರು ಹಿಂತಿರುಗಿಸಿದಕ್ಕೆ ಪೋಲಿಸ ಕಾರ್ಯಕ್ಕೆ ಪ್ರಶಂಸೆ ಮಾತುಗಳನ್ನಾಡಿ ಕೃತಜ್ಞತೆ ಸಲ್ಲಿಸಿದರು.