ಶಿವಮೊಗ್ಗ : ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ತನ್ನ ಪ್ರೇಯಸಿಯನ್ನು ಪ್ರಿಯಕರನೇ ಕೊಲೆ ಮಾಡಿ ಟ್ರಂಚ್ ನಲ್ಲಿ ಹೂತು ಹಾಕಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸುಜನ್ ಕೊಲೆ ಮಾಡಿದ ಆರೋಪಿಯಾಗಿದ್ದು, ಸೌಮ್ಯ(24) ಕೊಲೆಯಾದ ಯುವತಿಯಾಗಿದ್ದಾಳೆ.
ಘಟನೆ ಹಿನ್ನೆಲೆ:
ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಅರಂದೂರು ಸಮೀಪದ ಯುವತಿ ವಿವಾಹಿತ ಕೊಲೆಯಾದ ಸೌಮ್ಯ ತಂದೆ ಇಲ್ಲದ ಸೌಮ್ಯ ತಾಯಿ ಮತ್ತು ಸಹೋದರಿಯ ಜತೆ ವಾಸವಾಗಿದ್ದಳ್ಳು.
ಇವಳಿಗೆ ಕೊಲೆ ಮಾಡಿದ ಆರೋಪಿಯಾದ ಪ್ರೇಮಿ ಸುಜನ್ ಕೊಪ್ಪದಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ ಕೆಲಸ ಮಾಡುತ್ತಿದ್ದ ಸೌಮ್ಯ ತಾಯಿ ಕೂಡ ಮೈಕ್ರೋ ಫೈನಾನ್ಸನಲ್ಲಿ ವ್ಯವಹರಿಸಿದ್ದರು ಸಹಜವಾಗಿಯೇ ಸೌಮ್ಯ ಸುಜನಗೆ ಪರಿಚಯವಾಗಿದ್ದಾಳೆ. ಪರಿಚಯ ಸ್ನೇಹಕ್ಕೆ ತಿರುಗಿತೋ ಅಥವಾ ಪ್ರೇಮಕ್ಕೆ ತಿರುಗಿತೋ..ಗೊತ್ತಿಲ್ಲ. ಒಟ್ಟಿನಲ್ಲಿ ಇಬ್ಬರು ಒಪ್ಪಿತ ಸಂಬಂಧದಲ್ಲಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.
ಆದರೆ ಸೌಮ್ಯಳಿಗೆ ಈ ಹಿಂದೆ ಬೇರೊಬ್ಬ ಪುರುಷನೊಂದಿಗೆ ವಿವಾಹವಾಗಿತ್ತು ಎಂದು ಹೇಳಲಾಗುತ್ತಿದೆ. ಇದು ಪೊಲೀಸ್ ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ.
ದಿನ ಕಳೆದಂತೆ ಸೌಮ್ಯ ಪದೇ ಪದೇ ಸುಜನ್ ಗೆ ಫೋನ್ ಮಾಡಿ ಮನೆಗೆ ಕರೆದುಕೊಂಡು ಹೋಗು ಎಂದು ಒತ್ತಾಯ ಮಾಡುತ್ತಿದ್ದಳು. ಸುಜನ್ ಸೌಮ್ಯಳೊಂದಿಗೆ ಸಂಬಂಧ ಹೊಂದಿದ್ದರೂ, ಮದವೆಯಾಗಲು ಹಿಂದೇಟು ಹಾಕಿದ್ದನು.,ನಾನು ಬೇರೆಯವರನ್ನು ಪ್ರೀತಿಸುತ್ತಿದ್ದೇನೆ ಎಂದು ಸೌಮ್ಯಳ ಬಳಿ ಅವಲೊತ್ತುಕೊಂಡರೂ, ಸೌಮ್ಯ ಒಂದು ದಿನ ರಾತ್ರೋ ರಾತ್ರಿ ಸುಜನ್ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದಳು ಈ ಗಲಾಟೆಯು ಜನವರಿ ತಿಂಗಳಲ್ಲಿ ಕೊಪ್ಪ ಪೊಲೀಸ್ ಠಾಣೆ ಮೆಟ್ಟಲೇರಿ ರಾಜಿ ಸಂಧಾನದಲ್ಲಿ ಮುಕ್ತಾಯಗೊಂಡಿತ್ತು.
ಕೆಲ ತಿಂಗಳ ನಂತರ ಸಾಗರದಲ್ಲಿ ಸುಮನ್ ಕೆಲಸ ಮಾಡುವ ವಿಷಯ ತಿಳಿದು ಸಾಗರಕ್ಕೂ ಹೋಗಿ ಸುಜನ್ ಮನೆಯ ಮುಂದೆ ರಾತ್ರೋ ರಾತ್ರಿ ಗಲಾಟೆ ಮಾಡಿದ್ದಳು. ಈ ಸಂದರ್ಭದಲ್ಲಿ ಸುಜನ್ ತಾಯಿ ಬುದ್ದಿ ವಾದ ಹೇಳಿ ಕಳಿಸಿದ್ದರು.
ಟ್ಂಚನಲ್ಲಿ ಹೂತು ಹಾಕಿದ ಸುಜನ್:
ಜುಲೈ 2 ಎರಡನೇ ತಾರೀಖು ಕೊಪ್ಪದಿಂದ ಸಾಗರಕ್ಕೆ ಸೌಮ್ಯ ಬಂದಾಗ, ಸುಜನ್ ಇಲ್ಲಿಗೆ ಯಾಕೆ ಬಂದೆ ಎಂದು ಬುದ್ದಿ ಹೇಳಿ ಬೈಕ್ ನಲ್ಲಿ ಕೂರಿಸಿಕೊಂಡು ಹೆದ್ದಾರಿಪುರದ ಬಳಿ ಡ್ರಾಪ್ ಮಾಡಿದ್ದಾನೆ. ಸುಜನ್ ಮರಳಿ ಬರುವಾಗ ಸೌಮ್ಯ ಮತ್ತೆ ಫೋನ್ ಮಾಡಿ, ಸುಜನ್ ನನ್ನು ಕರೆಸಿಕೊಂಡಿದ್ದಾಳೆ. ವಾಪಸ್ಸು ಬಂದ ಸುಜನ್ ಮತ್ತು ಸೌಮ್ಯ ನಡುವೆ ಮಾತಿನ ಚಕಮಕಿ ನಡಿದಿದೆ. ಹೆದ್ದಾರಿ ಪುರ ಬಸ್ ಸ್ಟ್ಯಾಂಡ್ ನಿಂದ ಕೂಗಳತೆ ದೂರದಲ್ಲಿ ಬೈಕ್ ನಲ್ಲಿ ಕಾಡಿನ ಒಳಗೆ ಹೋದ ಸುಜನ್ ಮತ್ತು ಸೌಮ್ಯರ ಮತ್ತೆ ಜಗಳವಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸುಜನ್ ಸಿಟ್ಟು ತಾಳಲಾರದೆ ಸೌಮ್ಯಳ ಕೆನ್ನೆಗೆ ಬಲವಾಗಿ ಹೊಡೆದಿದ್ದಾನೆ. ಆಗ ಸೌಮ್ಯ ಪ್ರಜ್ಞಾಹೀನ ಸ್ಥಿತಿಗೆ ಜಾರಿ ಸಾವನ್ನಪ್ಪಿದ್ದಾಳೆ. ನಂತರ ಸೀದಾ ಸಾಗರಕ್ಕೆ ಬಂದ ಸುಜನ್ ಕಾರು ತೆಗೆದುಕೊಂಡು ಪುನಃ ಸೌಮ್ಯಳನ್ನು ಕೊಲೆ ಮಾಡಿದ ಸ್ಥಳಕ್ಕೆ ಬಂದಿದ್ದಾನೆ.
ಕಾರಿನಲ್ಲಿ ಸೌಮ್ಯ ಳ ಬಾಡಿಯನ್ನು ಹಾಕಿಕೊಂಡು ಸುಜನ್ ಆನಂದಪುರ ಮದಲೆಸರ ರಸ್ತೆಯಲ್ಲಿ ಸಾಗುತ್ತಾನೆ. ನಿರ್ಜನ ಪ್ರದೇಶವಾಗಿದ್ದ ಈ ರಸ್ತೆಯಲ್ಲಿ ಜಲಜೀವನ್ ಮಿಷಯ್ ಯೋಜನೆಯ ಕಾಮಗಾರಿ ನಡೆಯುತ್ತಿದ್ದು ಟ್ರಂಚ್ ಹೊಡೆಯಲಾಗಿದೆ. ಸೌಮ್ಯಳನ್ನು ಹೂತು ಹಾಕಲು ರೈಲ್ವೆ ಗೇಟ್ ನಿಂದ ಕೂಗಳತೆ ದೂರದ್ಲಿದ್ದ ಟ್ರಂಚ್ ಸ್ಥಳವನ್ನು ಸುಜನ್ ಆಯ್ಕೆ ಮಾಡಿಕೊಂಡು ಟ್ರಂಚ್ ನಲ್ಲಿ ಸೌಮ್ಯಳ ಮೃತದೇಹವನ್ನು ಎತ್ತಿ ಹಾಕಿ ಬದಿಯಲ್ಲಿದ್ದ ಮಣ್ಣಿನಿಂದ ಮುಚ್ಚಿ, ಮೇಲೆ ಕಲ್ಲು ಹಾಕಿ ಮುಚ್ಚಿದ್ದಾನೆ.ಮಳೆಯ ಕಾರಣದಿಂದ ಬಾಡಿ ಡಿಕಾಂಪೋಸ್ ಆದರೂ ಹಲವು ದಿನಗಳಾದರು ಹೊರಗಡೆ ವಾಸನೆ ಹರಡಿಲ್ಲ.
ಸೌಮ್ಯ ಮಿಸ್ಸಿಂಗ್ ಕೇಸ್ ದಾಖಲು:
ಜುಲೈ 2 ಕ್ಕೆ ಮನೆ ತೊರೆದು ಹೋಗಿದ್ದ ಸೌಮ್ಯ ಮಾರನೇ ದಿನವಾದರೂ ಮನೆಗೆ ವಾಪಸ್ಸಾಗದ ಹಿನ್ನಲೆಯಲ್ಲಿ ಸೌಮ್ಯ ಕುಟುಂಬಸ್ಥರು ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸೌಮ್ಯಳ ಮೊಬೈಲ್ ಸಿಡಿಆರ್ ಅನಾಲಿಸಿಸ್ ಮಾಡಿದ ಕೊಪ್ಪ ಪೊಲೀಸರಿಗೆ ಸುಜನ್ ಮೇಲೆ ಬಲವಾದ ಅನುಮಾನ ಮೂಡಿತ್ತು. ತನಿಖೆಯ ಆಳಕ್ಕೆ ಇಳಿದ ಪೊಲೀಸರಿಗೆ ಸುಜನ್ ನ್ನೇ ಕೊಲೆಗಾರ ಅಂತಾ ಗೊತ್ತಾಯಿತು ಕೂಡಲೇ ಸುಜನ್ ಸ್ಥಳೀಯ ಪರಿಚಯಸ್ಥರಾದ ತಾರಾಮೂರ್ತಿ ಅವರನ್ನು ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಾನೆ ಪೋಲಿಸ್ ರೊಂದಿಗೆ ಮಾತನಾಡಿದ ತಾರಾಮೂರ್ತಿ ಘಟನೆ ಕುರಿತು ಮಾಹಿತಿ ತೆಗೆದುಕೊಂಡು ಸತ್ಯಾಸತ್ಯೆಯ ಬಗ್ಗೆ ಸುಜನ್ ಗೆ ತಾರಮೂರ್ತಿ ಪ್ರಶ್ನಿಸಿದಾಗ 21 ದಿನಗಳ ಕೊಲೆಯ ರಹಸ್ಯವನ್ನು ಬಾಯಿಬಿಟ್ಟು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ.
ತಕ್ಷಣ ಅಲರ್ಟ್ ಆದ ತಾರಮೂರ್ತಿಯವರು ಸುಜನ್ ತಪ್ಪಿಸಿಕೊಳ್ಳದಂತೆ ತಮ್ಮ ಬಳಿಯೇ ಇರಿಸಿಕೊಂಡು ನಂತರ ಕೊಪ್ಪ ಪೊಲೀಸರಿಗೆ ಒಪ್ಪಿಸಿದ್ದಾರೆ.