ಗದಗ: ಗ್ರಾಮೀಣಾಭಿವೃದ್ಧಿ ಪಂಚಾಯತರಾಜ ಇಲಾಖೆಯ ಸಂಜೀವಿನಿ ಘಟಕದಿಂದ ಕಡಲೆ ಖರೀದಿ ಪ್ರಕರಣ ಕಳೆದ ಮೂರು ತಿಂಗಳಿಂದ ಸುದ್ದಿಯಾಗಿದ್ದು ಈ ಕುರಿತು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದೇ ಪ್ರಕರಣದಲ್ಲಿ ಜಿಲ್ಲಾ ಎನ್ ಆರ್ ಎಲ್ ಎಂ ಘಟಕದ ಮುಖ್ಯ ಸಂಯೋಜಕರಾದ ಚಂದ್ರಶೇಖರ ಅವರ ಮೇಲೂ ಪ್ರಕರಣ ದಾಖಲಾಗಿತ್ತು ಆದರೆ ದಿನ ಕಳದಂತೆ ಕಡಲೆ ಹಣ ವಸೂಲಾತಿ ವಿಚಾರವಾಗಿ ಹಣ ವಸೂಲಾತಿಗೆ ಹೆಚ್ಚಾದ ಒತ್ತಡದಿಂದ ಇಂದು ಸಂಜೆ ಚಂದ್ರಶೇಖರ ಕಛೇರಿಯಲ್ಲಿ ಇಂದು ಮನನೊಂದು(ಗುಡ್ ನೈಟ್ ಲಿಕ್ವಿಡ್) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ,ಆತ್ಮಹತ್ಯೆಗೆ ಬೇರೆ ಕಾರಣ ಇದೆಯಾ…? ಕೂಡಲೇ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಸದ್ಯ ಚಂದ್ರಶೇಖರ ಜಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟಿನಲ್ಲಿ ಚಂದ್ರಶೇಖರ ಆತ್ಮಹತ್ಯೆಗೆ ನಿಕರವಾದ ಕಾರಣ ದೊರೆತಿಲ್ಲ ಕಡಲೆ ಖರೀದಿ ಹಣ ವಸೂಲಾತಿಯೋ…?ಅಥವಾ ಬೇರೆ ಇನ್ನಾವುದೇ ಕಾರಣನಾ ಎಂಬುದೆ ನಿಗೂಢವಾಗಿದೆ.
