ನವದೆಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಎನ್‌ಡಿಎ ಮಿತ್ರ ಇದೀಗ ಹೊಸ ಸರ್ಕಾರ ರಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈಶ್ವರನ ಹೆಸರಿನಲ್ಲಿ ಮೋದಿ ಪ್ರಮಾಣವಚನ ತೆಗೆದುಕೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಮೋದಿ ಜೊತೆ ಪ್ರಮಾಣವಚನ ಸ್ವೀಕರಿಸಿದ ಸಚಿವರ ಪಟ್ಟಿ:
ರಾಜನಾಥ್ ಸಿಂಗ್
ಅಮಿತ್ ಶಾ
ನಿತಿನ್ ಗಡ್ಕರಿ
ಜೆಪಿ ನಡ್ಡಾ
ಶಿವರಾಜ್ ಸಿಂಗ್ ಚೌಹ್ಹಾಣ್
ನಿರ್ಮಲಾ ಸೀತಾರಾಮನ್
ಎಸ್ ಜೈಶಂಕರ್
ಮನೋಹರ್ ಲಾಲ್ ಕಟ್ಟರ್
ಹೆಚ್ ಡಿ ಕುಮಾರಸ್ವಾಮಿ
ಪಿಯೂಷ್ ಗೊಯೆಲ್
ಧಮೇಂದ್ರ ಪ್ರಧಾನ್
ಜಿತನ್ ರಾಮ್ ಮಾಂಜಿ
ರಾಜೀವ್ ರಂಜನ್ ಸಿಂಗ್
ಸರ್ಬಾನಂದ್ ಸೊನ್ವಾಲ್
ವಿರೇಂದ್ರ ಕುಮಾರ್
ಕೆ ರಾಮ್ ಮೋಹನ್ ನಾಯ್ಡು
ಪ್ರಹ್ಲಾದ್ ಜೋಶಿ.