ಗದಗ: ಕ್ಷುಲ್ಲಕ ಕಾರಣಕ್ಕೆ ನಗರದ ಜಗನ್ನಾಥ ಕಿರಾಣಿ ಸ್ಟೋರ ಮಾಲೀಕನಿಗೆ ಚಾಕುವಿನಿಂದ ಇರಿದ ಘಟನೆ ಗದಗ ನಗರದ ಟಾಂಗಾಕೂಟದಲ್ಲಿ ನಡೆದಿದೆ.
ಗೋವಿಂದರಾಜ ಶಿರಹಟ್ಟಿ ಚಾಕು ಇರಿತಕ್ಕೊಳಗಾದ ವ್ಯಕ್ತಿಯಾಗಿದ್ದು ವಿನಾಯಕ ಕಬಾಡಿ ಚಾಕುವಿನಿಂದ ಹಲ್ಲೆ ಮಾಡಿದ ಕಿರಾತಕನಾಗಿದ್ದು.
ಆಧ್ಯಾತ್ಮಿಕ ವಿಚಾರಕ್ಕೆ ನಡೆದ ವಾಗ್ವಾದ ಗಲಾಟೆ ಹಂತಕ್ಕೆ ತಿರುಗೆ ನಂತರ ವಿಕೋಪಕ್ಕೆ ಹೋಗಿ ವಾಗ್ವಾದ ಅತಿರೇಕದ ಪರಿಣಾಮ ಚಾಕು ಇರಿತವಾಗಿದೆ.
ಗೋವಿಂದರಾಜ್ ನಡೆಸುತ್ತಿದ್ದ ಇಸ್ಕಾನ್ ಕೀರ್ತನೆ ಸಂಘದಿಂದ
2018 ರಿಂದ 2023 ವರೆಗೆ ಐದು ವರ್ಷ ಸಂಘದಲ್ಲಿದ್ದ ಹಲ್ಲೆ ಮಾಡಿದ ವಿನಾಯಕ ಕಬಾಡಿಯನ್ನು ಕಳೆದ ಒಂದು ವರ್ಷದಿಂದ ಕಾರಣ ಹೇಳದೆ ಭಜನಾ ಮಂಡಳಿಗೆ ಸೇರಿಸಿಕೊಳ್ಳದ್ದಕ್ಕೆ ಸಿಟ್ಟಿಗೆದ್ದ ವಿನಾಯಕ ಕಬಾಡಿ ಇಂದು ಗೋವಿಂದರಾಜ್ ಶಿರಹಟ್ಟಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಘಟನಾ ಸ್ಥಳದಲ್ಲೇ ವಿನಾಯಕ ನನ್ನು ವಶಕ್ಕೆ ಪಡೆದ ಪೋಲಿಸ್ ಸಿಬ್ಬಂದಿ ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

