ಬೆಳಂ ಬೆಳಿಗ್ಗೆ ಗದಗ-ಬೆಟಗೇರಿ ಅವಳಿ ನಗರಗಳ ದೊಡ್ಡ ನಾಲಾಗಳ ಸ್ವಚ್ಚತಾ ಕಾರ್ಯ ವೀಕ್ಷಿಸಿದ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್

ಸಮಗ್ರ ಪ್ರಭ ಸುದ್ದಿ
1 Min Read

ಗದಗ : ಮುಂಗಾರು ಮಳೆ ಪೂರ್ವ ಸಿದ್ಧತೆ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ದೊಡ್ಡ ಮಳೆ ನೀರು ಚರಂಡಿಗಳ ಮತ್ತು ರಾಜನಾಲ ಗಳಲ್ಲಿರುವ ಹೂಳು ತುಂಬಿರುವದನ್ನು ಹೂಳು ತೆಗೆಯಲಿಕ್ಕೆ ಮತ್ತು ಮುಳ್ಳು ಕಂಟಿಗಳನ್ನು ತೆಗೆದು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ.

ಸ್ವಚ್ಚತಾ ಕಾಮಗಾರಿಯನ್ನು ಶನಿವಾರ ಬೆಳಿಗ್ಗೆ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಹಿಟಾಚಿ ಮತ್ತು ಜಿಸಿಬಿ ವಾಹನಗಳ ಮುಖಾಂತರ ಶೀಘ್ರವಾಗಿ ರಾಜನಾಲ ಸ್ವಚ್ಛಗೊಳಿಸಲಿಕ್ಕೆ ಕ್ರಮ ಜರುಗಿಸಬೇಕು. ಮಳೆ ನೀರು ಸರಾಗವಾಗಿ ಚರಂಡಿ ಹಾಗೂ ರಾಜಕಾಲುವೆ ಮೂಲಕ ಸಾಗಲು ಅನುವು ಮಾಡಲು ತಿಳಿಸಿದರು.

ದೊಡ್ಡ ಮಳೆ ನೀರು ಚರಂಡಿಗಳಲ್ಲಿ ಸಾರ್ವಜನಿಕರು ಕಸ ಹಾಗೂ ಕಟ್ಟಡದ ಭಗ್ನಾವಶೇಷಗಳನ್ನು ಎಸೆಯದಂತೆ ನೋಡಿಕೊಳ್ಳುವುದು. ಮತ್ತು ಸಮರ್ಪಕ ತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡಲು ಸೂಚಿಸಿದರು.

ನಂತರ ಗದಗ-ಬೆಟಗೇರಿ ನಗರದಲ್ಲಿ ಸಂಚರಿಸಿ ಮಾನ್ವಿ ರಾಜನಾಲ ಹೊಸ ಕೋರ್ಟ್ ಹತ್ತಿರದ ರಾಜನಾಲಾ, ಬೆಟಗೇರಿ ಭಾಗದಲ್ಲಿ ಬರುವ ಜರ್ಮನ್ ಹಾಸ್ಪಿಟಲ್ ಹತ್ತಿರದ ರಾಜನಾಲ ಮತ್ತು ಹುಯಿಲಗೋಳ ಬ್ರಿಜ್ ಹತ್ತಿರದ ರಾಜನಾಲ ಸ್ಥಳ ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆಯ ಸಹಾಯಕ ಕಾರ್ಯ ಪಾಲಕ ಪರಿಸರ ಅಭಿಯಂತರ ಆನಂದ ಬದಿ, ನಗರಸಭೆಯ ಆರೋಗ್ಯ ನಿರೀಕ್ಷಕರು ದಫೇದಾರರು ಹಾಜರಿದ್ದರು.

Share this Article