ಟಿಪ್ಪರ್-ಬೈಕ್ ಡಿಕ್ಕಿ: ತುಂಡಾಗಿ ಬಿದ್ದ ಬೈಕ ಸವಾರನ ಕಾಲು!

ಸಮಗ್ರ ಪ್ರಭ ಸುದ್ದಿ
0 Min Read

ಗದಗ : ಟಿಪ್ಪರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ಟಿಪ್ಪರ ಚಕ್ರಕ್ಕೆ ಸಿಲುಕಿದ ಓರ್ವ ಬೈಕ್ ಸವಾರನ ಕಾಲು ತುಂಡಾಗಿ ಬಿದ್ದ ಘಟನೆ ನಗರದ ಲಕ್ಷ್ಮೇಶ್ವರ ರಸ್ತೆಯ ಅಂಜುಮನ ಕಾಲೇಜು ಬಳಿ ಇಂದು ನಡೆದಿದೆ.

ಬೈಕ ನಲ್ಲಿದ್ದ ಇನ್ನೋರ್ವ ಬೈಕ ಸವಾರನಿಗೆ ಗಾಯಗಳಾಗಿದ್ದು ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.

ಟಿಪ್ಪರ್ ಚಕ್ರದಡಿ ಸಿಲುಕಿ ಬೈಕ್ ಸವಾರನಿಗೆ ಕಾಲು ತುಂಡಾಗಿದೆ ಎಂದು ತಿಳಿದುಬಂದಿದೆ.

ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

Share this Article