ಗದಗ: ರಥೋತ್ಸವ ನಡೆಯುವ ವೇಳೆಯಲ್ಲಿ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸಾವಿಗೀಡಾಗಿಡ ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ಇಂದು ಸಂಜೆ ನಡೆದಿದೆ ಈ ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು ಓರ್ವ ಗಾಯಗೊಂಡಿದ್ದಾರೆ.
ಶನಿವಾರ ರೋಣ ಪಟ್ಟಣದ ವೀರಭದ್ರೇಶ್ವರ ಜಾತ್ರೆ ಅಂಗವಾಗಿ ಮಹಾರಥೋತ್ಸವ ನಡೆಯಿತು ಈ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯವಾಗಿವೆ.
ಮಲ್ಲಪ್ಪ ಲಿಂಗನ ಗೌಡ್ರ(55),ಹಾಗೂ ಮತ್ತೋರ್ವ ವ್ಯಕ್ತಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಮುಖದ ಮೇಲೆ ರಥದ ಗಾಲಿ ಹರಿದಿರುವುದರಿಂದ ಮುಖ ನುಜ್ಜುಗುಜ್ಜಾಗಿ ವ್ಯಕ್ತಿಯ ಗುರುತು ಪತ್ತೆ ಸಿಗದಂತಾಗಿ ಇನ್ನೋರ್ವನ ಹೆಸರು ತಿಳಿದು ಬಂದಿಲ್ಲ ಮೃತರು ರೋಣ ಮೂಲದ ನಿವಾಸಿಗಳಾಗಿದ್ದು.
ರಥೋತ್ಸವ ವೇಳೆಯಲ್ಲಿ ರಥ ಎಳೆಯುವ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿದೆ ರಥಕ್ಕೆ ಎಸೆಯುವ ಬಾಳೆ ಹಣ್ಣು ಹಾಗೂ ಉತ್ತತ್ತಿ ಆಯ್ದುಕೊಳ್ಳುವ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿ ರಥದ ಗಾಲಿಗೆ ಸಿಲುಕಿದ್ದಾರೆ. ಘಟನೆಯಲ್ಲಿ ಸಾವಿಗೀಡಾದ ಇಬ್ಬರು ಪೈಕಿ ಓರ್ವನ ಮುಖದ ಮೇಲೆ ಹಾಗೂ ಮತ್ತೋರ್ವನ ಮರ್ಮಾಂಗದ ಮೇಲೆ ರಥದ ಗಾಲಿ ಹರಿದು ಇಬ್ಬರು ಭಕ್ತರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ಇನ್ನೋರ್ವ ಮೃತನ ಗುರುತು ಪತ್ತೆಗೆಗಾಗಿ ಪೊಲೀಸರು ಮುಂದಾಗಿದ್ದಾರೆ ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.