ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಬೆಟಗೇರಿ ಭಾಗದಿಂದ ಗದಗ ನಗರಕ್ಕೆ ಸಂಪರ್ಕ ಕಲ್ಪಿಸುವಲ್ಲಿ ಪ್ರಮುಖ ರಸ್ತೆಯಾದ ಜೆಟಿ ಕಾಲೇಜು ಬಳಿ ಇರುವ ಬಳ್ಳಾರಿ ಅಂಡರ ಬ್ರಿಡ್ಜ್ ಕಳೆದ ವಾರ ಸುರಿದ ಮಳೆಗೆ ತುಂಬಿ ಹೋಗಿದೆ ನಂತರ ನಗರ ಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಮಳೆ ನೀರಿನಿಂದ ತುಂಬಿದ ನೀರನ್ನು ಸರಾಗವಾಗಿ ಸರಿದು ಹೋಗುವಹಾಗೆ ಮಾಡಿ ಸಂಚಾರಕ್ಕೆ ವ್ಯವಸ್ಥೆ ಮಾಡಿದರು ಆದರೆ ಮತ್ತೆ ಕಳೆದ ಒಂದು ವಾರದಿಂದ ಇದೇ ಬಳ್ಳಾರಿ ಅಂಡರ ಬ್ರಿಡ್ಜ್ ಅಲ್ಲಿ ಸುತ್ತ ಮುತ್ತಲಿನ ಚರಂಡಿ ನೀರು ಶೇಖರಣೆಯಾಗಿ ರಸ್ತೆ ತುಂಬೆಲ್ಲ ನೀರು ನಿಂತು ಗಬ್ಬೆದು ನಾರುತ್ತಿದೆ.
ಇದೇ ಗಬ್ಬೆದ್ದ ನೀರಿನಲ್ಲಿ ವಾಸನೆ ತಾಳಲಾರದೆ ಮೂಗು ಮುಚ್ಚಿಕೊಂಡು ಬೈಕ್ ಸವಾರರು ಚಿ ತೂ ಎಂದು ನಗರಸಭೆ ಉಗಿದು ಸಂಚಾರ ಮಾಡುತ್ತಿದ್ದಾರೆ.
ಶಾಲಾ ಕಾಲೇಜ, ಆಸ್ಪತ್ರೆ, ಎಪಿಎಂಸಿ ಗೆ ಇದೇ ದಾರಿ:
ಇದೇ ಬಳ್ಳಾರಿ ಅಂಡರ್ ಬ್ರಿಡ್ಜ ಮಾರ್ಗವಾಗಿ ಜೆಟಿ ಕಾಲೇಜು, ಕೆವಿಎಸ್ ಆರ್ ಕಾಲೇಜ ಮಾಡೇಲ್ ಹೈಸ್ಕೂಲ್, ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರತಿಷ್ಠಿತ ಆಸ್ಪತ್ರೆಗಳಿಗೆ ತೆರಳಲು ಇದೇ ಮಾರ್ಗವನ್ನು ಸಾರ್ವಜನಿಕರು ಪ್ರತಿ ನಿತ್ಯ ಸಂಚರಿಸುತ್ತಾರೆ.ಆದರೆ ಇದೇ ಬ್ರಿಡ್ಜ್ ಅಲ್ಲಿ ಚರಂಡಿ ನೀರು ನಿಂತ ಪರಿಣಾಮವಾಗಿ ಶಾಲೆ ಕಾಲೇಜ ವಿದ್ಯಾರ್ಥಿಗಳು, ಆಸ್ಪತ್ರೆಗೆ ತೆರಳೋ ರೋಗಿಗಳು, ರೈತರು,ಸಾರ್ವಜನಿಕರು ಪಾದಚಾರಿಗಳು ಬೇರೆ ಅನ್ಯಮಾರ್ಗ ಹಿಡುದು ಸಂಚರಿಸುತ್ತಿದ್ದಾರೆ ಕೆಲವರು ಧೈರ್ಯ ಮಾಡಿ ಗಬ್ಬು ವಾಸನೆಗೆ ಪಡೆಯುತ್ತಾ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ.
15+ ಅಧಿಕ ಒಳಚರಂಡಿಯಲ್ಲಿ ಕಸ ತುಂಬಿದ ಪರಿಣಾಮ ನೀರು ಬ್ಲಾಕ್:
ಕಳೆದ ವಾರ ಸುರಿದ ಮಳೆಗೆ ಬಳ್ಳಾರಿ ಅಂಡರ ಬ್ರಿಡ್ಜ್ ನಲ್ಲಿ ಸಂಗ್ರಹವಾದ ನೀರು ಹರಿಯಲು ಬ್ರಿಡ್ಜ್ ಇಂದ ಸುಮಾರು 15 ಕ್ಕೂ ಹೆಚ್ಚಿನ ಕಡೆಗೆ ಇರುವ ಒಳಚರಂಡಿಗಳಲ್ಲಿ ಕಸ ತುಂಬಿದ ಪರಿಣಾಮವಾಗಿ ಬಳ್ಳಾರಿ ಅಂಡರ ಬ್ರಿಡ್ಜ್ ಅಲ್ಲಿ ನೀರು ಮುಂದಕ್ಕೆ ಹರಿಯದೆ ಬ್ಲಾಕ್ ಆಗಿದೆ ಕಳೆದ ಒಂದು ವಾರದಿಂದ ಕಸ ಸ್ವಚ್ಛ ಗೊಳಿಸಲಾಗುತ್ತಿದೆ. ನಂತರ ನೀರು ಸರಾಗವಾಗಿ ಹರಿಯುತ್ತದೆ ಎಂದು ನಗರ ಸಭೆ ಅಧಿಕಾರಿ ಮಕಾಂದರ “ಸಮಗ್ರ ಪ್ರಭ” ಪತ್ರಿಕೆಗೆ ಪ್ರತಿಕ್ರಿಯೆ ನೀಡಿರು.
ಪರ್ಯಾಯ ಮಾರ್ಗವಾಗಿ ಮೋಟರ್ ಮೂಲಕ ನೀರು ಹೊರ ತೆಗೆಯಿರಿ:
ಸದ್ಯಕ್ಕೆನೋ ಒಳಚಂಡಿಯಲ್ಲಿ ಕಸ ತುಂಬಿ ಸುತ್ತಮುತ್ತಲಿನ ಚರಂಡಿ ನೀರು ನಿಂತಿದೆ ಆದರೆ ಕಸ ಸಂಪೂರ್ಣ ತೆಗೆಯೂವರೆಗೂ ನೀರು ರಸ್ತೆಯಿಂದ ಹೋಗುವುದಿಲ್ಲ ದಿನೆ ದಿನೆ ನೀರಿನ ಮಟ್ಟ ಹೆಚ್ಚಾಗುತ್ತಾ ಸಾಗುತ್ತದೆ ಇದಕ್ಕೆ ನಗರಸಭೆ ಅಧಿಕಾರಿಗಳು ಪರ್ಯಾಯ ಮಾರ್ಗವಾಗಿ ಮೋಟರ್ ಮೂಲಕ ನೀರು ಹೊರ ತೆಗೆದು ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಅನೂಕುಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.