ಮಗನ ತಪ್ಪಿಗೆ ತಾಯಿಯನ್ನ ಕಂಬಕ್ಕೆ ಕಟ್ಟಿ ಥಳಿತ! ತಡವಾಗಿ ಬೆಳಕಗೆ ಬಂಧ ಘಟನೆ

graochandan1@gmail.com
1 Min Read

ಹಾವೇರಿ : ಕಳೆದ ಕೆಲ ತಿಂಗಳುಗಳಿಂದೆ ಬೆಳಗಾವಿಯ ವಂಟಮೂರಿ ಗ್ರಾಮದ ಮಹಿಳೆ‌‌ಯನ್ನ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ನಡೆದಿದ್ದು ಯುವತಿಯನ್ನ ಪ್ರೀತಿಸಿ ಕರೆದುಕೊಂಡು ಹೋಗಿದ್ದಕ್ಕೆ ಯುವತಿಯ ಸಂಬಂಧಿಕರು ಯುವಕನ ತಾಯಿಯನ್ನ ಗ್ರಾಮದ ಬೀದಿ ಬದಿಯ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ ಘಟನೆ ನಡೆದಿದೆ.

ಹನುಮವ್ವಳ ಮಗ ಮಂಜುನಾಥ, ಮತ್ತು ಯುವತಿ ಪೂಜಾ ಇಬ್ಬರು ಪ್ರೀತಿಯಲ್ಲಿದ್ದರು ಕಳೆದ ನಾಲ್ಕು ದಿನಗಳ ಹಿಂದೆ ಯುವಕನೊಂದಿಗೆ ಮನೆ ಬಿಟ್ಟು ಹೋಗಿರುವ ಯುವಕ. ಇದರಿಂದ ಯುವತಿಯ ಮನೆಯವರು ಕುಪಿತಗೊಂಡು ಮಗಳನ್ನ ಪ್ರೀತಿಯ ನೆಪದಲ್ಲಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆಂದು ಆರೋಪಿಸಿ ಯುವಕನ ಮನೆಗೆ ನುಗ್ಗಿ ಹನುಮವ್ವಳ ಮೇಲೆ ಹಲ್ಲೆ ನಡೆಸಿದ್ದಾರೆ. ವಿದ್ಯುತ್ ಕಂಬಕ್ಕೆ ಕಟ್ಟಿ ವೃದ್ಧ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಕಳೆದ ನಾಲ್ಕು ದಿನಗಳ ಹಿಂದೆಯೇ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಘಟನೆ ಸಂಬಂಧ ರಾಣೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Article