ಬೆಂಗಳೂರು: ಲೋಕಸಭೆ ಚುನಾವಣೆ 2024ರ 2ನೇ ಹಂತದ ಮತದಾನ ಏಪ್ರಿಲ್ 26ರ ಶುಕ್ರವಾರ ಬಹುತೇಕ ಶಾಂತಿಯುತವಾಗಿ ನಡೆದಿದೆ.ಕರ್ನಾಟಕ ಸೇರಿದಂತೆ ರಾಜ್ಯದ 14 ಕ್ಷೇತ್ರಗಳು ಸೇರಿ 13 ರಾಜ್ಯ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 88 ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಸಂಜೆ 7 ಗಂಟೆ ವೇಳೆಗೆ ಶೇ.60.96ರಷ್ಟು ಮತದಾನವಾಗಿದೆ ಎಂದು ಭಾರತ ಚುನಾವಣಾ ಆಯೋಗ ತಿಳಿಸಿದೆ.
ಶುಕ್ರವಾರ ಕೇರಳ 20, ಕರ್ನಾಟಕ 14, ರಾಜಸ್ಥಾನದ 13, ಮಹಾರಾಷ್ಟ್ರ 8, ಉತ್ತರ ಪ್ರದೇಶ 8, ಮಧ್ಯ ಪ್ರದೇಶದ 7, ಅಸ್ಸಾಂ 5, ಬಿಹಾರ 5, ಛತ್ತೀಸ್ಗಢ 3, ಪಶ್ಚಿಮ ಬಂಗಾಳ 3, ಜಮ್ಮು ಮುತ್ತು ಕಾಶ್ಮೀರ, ಮಣಿಪುರ ಮತ್ತು ತ್ರಿಪುರ ರಾಜ್ಯದ ತಲಾ 1 ಸ್ಥಾನಗಳಿಗೆ ಮತದಾನ ನಡೆಯಿತು.
ಕರ್ನಾಟಕದಲ್ಲಿ 64.4% ಮತದಾನ ಶಾಂತಿಯುತ:
ಕರ್ನಾಟಕದಲ್ಲಿ ಮೊದಲನೇ ಹಂತಗಳಲ್ಲಿ ಒಟ್ಟು 14 ಜಿಲ್ಲೆಗಳಲ್ಲಿ ಮತದಾನ ನಡೆದಿದೆ ಒಟ್ಟಾರೆ 64.4% ರಷ್ಟು ಮತದಾನವಾಗಿದೆ. ಮಂಡ್ಯದಲ್ಲಿ 74.87%ರಷ್ಟು ಮತದಾನವಾಗಿದೆ. ಬೆಂಗಳೂರು ಕೇಂದ್ರ 49.21%, ಬೆಂಗಳೂರು ಉತ್ತರ 50.91%, ಬೆಂಗಳೂರು ದಕ್ಷಿಣ 49.37%, ಬೆಂಗಳೂರು ಗ್ರಾಮಾಂತರ 61.78% ರಷ್ಟು ಮತದಾನವಾಗಿದೆ. ಚಾಮರಾಜನಗರ 69.6%, ಚಿಕ್ಕಬಳ್ಳಾಪುರ 71.85%, ಚಿತ್ರದುರ್ಗ 67.52%, ದಕ್ಷಿಣ ಕನ್ನಡ 72.3%, ಹಾಸನ 72.13%, ಕೋಲಾರ 73.25%, ಮೈಸೂರು 66.96%, ತುಮಕೂರು 72.1, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 72.69% ರಷ್ಟು ಮತದಾನವಾಗಿದೆ.