ಗದಗ: ನಗರದ ಸೌಖ್ಯದಾ ಆಸ್ಪತ್ರೆಯಲ್ಲಿ ಇಂದು ತ್ರಿವಳಿ ಮಕ್ಕಳಿಗೆ ಜನಿಸಿದ್ದು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾll ತೇಜಸ್ವಿನಿ ಹಿರೇಮಠ ಅವರು ಅವಧಿಪೂರ್ವ ಹಾಗೂ ಕಡಿಮೆ ತೂಕ ಹೊಂದಿದ (1127, 1473, 1451, ಗ್ರಾಂ) ತ್ರಿವಳಿ ಮಕ್ಕಳ ಹೆರಿಗೆಯನ್ನು ಸುರಕ್ಷಿತವಾಗಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಯೀಶಾ ಎಂಬ ತಾಯಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದು ಸದ್ಯ ಮೂರು ಹಸುಗೂಸು ಸಹ ಸಂಪೂರ್ಣವಾಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು.
ತಜ್ಞ ವೈದ್ಯರ ಈ ಸಾಧನೆಗೆ ಸೌಖ್ಯದಾ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ ನ ಪರವಾಗಿ ಡಾ|| ತೇಜಸ್ವಿನಿ ಹಿರೇಮಠ ಹಾಗೂ ಡಾll ಶಿವನಗೌಡ ಜೋಳದ ರಾಶಿಯ ಅವರೊಂದಿಗೆ ನಿರಂತರ ಶ್ರಮಿಸಿದ ಶುಶ್ರೂಷಕರ ತಂಡ ಮತ್ತು ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.