ಹಿರಿಯ-ಕಿರಿಯ ಶ್ರೀಗಳ ನಡುವೆ ಮೂಡದ ಒಮ್ಮತ: ಶಿವಾನಂದ ಬೃಹನ್ಮಠದ ಮಠದ ಜಾತ್ರೆ ರದ್ದುಗೊಳಿಸಿ ತಹಶೀಲ್ದಾರ ಆದೇಶ

ಸಮಗ್ರ ಪ್ರಭ ಸುದ್ದಿ
2 Min Read

ಗದಗ: ಉತ್ತರ ಕರ್ನಾಟಕದ ಐತಿಹಾಸಿಕ ಮಠದಲ್ಲಿ ಒಂದಾದ ಜಿಲ್ಲೆಯ ಶಿವಾನಂದ ಬೃಹನ್ಮಠದ ಐತಿಹಾಸಿಕ ಜಾತ್ರಾ ಮಹೋತ್ಸವ,ಪಲ್ಲಕ್ಕಿ ಉತ್ಸವ ಹಾಗೂ ಇತರೆ ಕಾರ್ಯಕ್ರಮಗಳನ್ನು ರದ್ದು ಗೊಳಿಸಿ ಸೆಕ್ಷೆನ್ 144 ಜಾರಿ ಮಾಡಿ ಭಕ್ತರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿ ಜಾತ್ರೆ ರದ್ದುಗೊಳಿಸಿ ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಆದೇಶ ಹೊರಡಿಸಿದ್ದಾರೆ.

ಶಿವಾನಂದ ಬೃಹನ್ಮಠವು ಕಳೆದ ನಾಲ್ಕು ವರ್ಷಗಳಿಂದ ಆಗಾಗ ಸದ್ದು ಮಾಡುತ್ತಿದ್ದ ಹಿರಿಯ ಅಭಿನವ ಶಿವಾನಂದ ಶ್ರೀ, ಕಿರಿಯ ಸದಾಶಿವಾನಂದ ಶ್ರೀಗಳ ಮುಸುಕಿನ ಗುದ್ದಾಟ ಕೋರ್ಟ ಕಛೇರಿ ತಲುಪಿ ಇಂದು ಐತಿಹಾಸಿಕ ಜಾತ್ರೆಯನ್ನೇ ಬಲಿ ತೆಗೆದುಕೊಂಡಿದೆ.

ಈ ಇಬ್ಬರು‌ ಸ್ವಾಮಿಜಿಗಳ ಗುದ್ದಾಟದಿಂದ ಜಾತ್ರೆಯೇ ಬಂದ ಆಗಿದ್ದು ಮಠದ ಸಾವಿರಾರು ಭಕ್ತರ ಮನಸ್ಸಿಗೆ ಘಾಸಿಯಾಗಿದೆ.

ಉಭಯ ಶ್ರೀಗಳ ಹಗ್ಗ ಜಗ್ಗಾಟದ ಮಧ್ಯೆ ದಿನಾಂಕ 8 ಮತ್ತು 9 ರಂದು ನಡೆಯ ಬೇಕಿದ್ದ ರಥೋತ್ಸವ,‌ಪಲ್ಲಕ್ಕಿ ಉತ್ಸವ,ಧಾರ್ಮಿಕ ಕಾರ್ಯ,ನಿರ್ಬಂಧ ಹೇರಿ ತಹಶೀಲ್ದಾರ್ ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಅವರು ಸೆಕ್ಷನ್ 144 ಜಾರಿಗೊಳಿಸಿ ಕೇವಲ ಭಕ್ತರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದಾರೆ.

ಏನಿದು ವಿವಾದ:

ಕಿರಿಯ ಶ್ರೀಗಳನ್ನ ಹೊರಗಿಟ್ಟು ಜಾತ್ರೆ ತಯಾರಿ ಮಾಡಿದ್ದಕ್ಕೆ ಹೊತ್ತಿಕೊಂಡಿದ್ದ ವಿವಾದ ಹಿರಿಯ-ಕಿರಿಯ ಶ್ರೀಗಳ ಭಕ್ತರ ಬೆಂಬಲಿಗರಿಂದ ಸರಣಿ ಸಭೆ ನಡೆಸಿ ಕೊನೆಗೆ ಪೋಲಿಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ ನಡೆಸಿ ಸಭೆಯ ಬಳಿಕ ಕಿರಿಯ ಶ್ರೀಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಜಾತ್ರೆ ನಡೆಸೋದಾಗಿ ಹೇಳಿದ್ದ ಹಿರಿಯ ಶ್ರೀಗಳು ತಡರಾತ್ರಿ ಅಂದರೆ ನಿನ್ನೆ ಶಿವರಾತ್ರಿ ದಿನ ನಡೆಯೋ ಶಿವಯೋಗ ಕಾರ್ಯಕ್ರಮ ವಿಚಾರವಾಗಿ ಮತ್ತೆ ಇಬ್ಬರಲ್ಲಿ ಒಮ್ಮತ ಮೂಡಲಿಲ್ಲ ಜೊತೆಗೆ ಶಿವಯೋಗ ಕಾರ್ಯಕ್ರಮದಲ್ಲಿ ಸಿಂಹಾಸನದ ಬೇಡಿಕೆ ಇಟ್ಟಿದ್ದ ಕಿರಿಯ ಶ್ರೀಗಳ ಭಕ್ತರು ಬ್ಯಾನರ್ ನಲ್ಲಿ ಕಿರಿಯ ಶ್ರೀಗಳ ಫೋಟೋ ಅಳವಡಿಸುವಂತೆ ಪಟ್ಟು ಹಿಡಿದ ಭಕ್ತರು ಕಿರಿಯ, ಹಿರಿಯ ಶ್ರೀಗಳ ಭಕ್ತರ ಮಧ್ಯೆ ಇದೇ ವಿಚಾರವಾಗಿ ವಾಗ್ವಾದ ನಡೆದಿದ್ದು ಹಿರಿಯ ಶ್ರೀಗಳ ಎದುರು ಧರಣಿ ಕೂರಲು ಮುಂದಾಗಿದ್ದ ಕಿರಿಯ ಶ್ರೀಗಳ ಭಕ್ತರು
ಇಬ್ಬರೂ ಸ್ವಾಮಿಜಿಗಳೂ ತಮ್ಮ ಹಠ ಬಿಡದ ಹಿನ್ನೆಲೆಯಲ್ಲಿ ಐತಿಹಾಸಿಕ ಜಾತ್ರೆ ಕೊನೆಗೂ ರದ್ದು ಮಾಡಲಾಯಿತು.

Share this Article