ನೂತನ ಗದಗ-ಬೆಟಗೇರಿ ನಗರ ಸಭೆ ಪೌರಾಯುಕ್ತರಾಗಿ ಬಿ.ಕೆ ರುದ್ರಮುನಿ ನೇಮಿಸಿ ಸರ್ಕಾರ ಆದೇಶ

ಸಮಗ್ರ ಪ್ರಭ ಸುದ್ದಿ
0 Min Read

ಗದಗ : ಕಳೆದ ಸೆಪ್ಟೆಂಬರ್ ತಿಂಗಳಿಂದ ಗದಗ-ಬೆಟಗೇರಿ ನಗರ ಸಭೆಗೆ ಖಾಯಂ ಪೌರಾಯುಕ್ತರಿಲ್ಲದೇ ಪ್ರಭಾರಿಗಳ ಉಸ್ತುವಾರಿಯಲ್ಲಿ ಇದ್ದ ನಗರ ಸಭೆಗೆ ಕೊನೆಗೂ ಸರ್ಕಾರ ನೂತನವಾಗಿ ಪೌರಾಯುಕ್ತರನ್ನು ನೇಮಕ ಮಾಡಿ ಬುಧವಾರ ಸಂಜೆ ಆದೇಶ ಹೊರಡಿಸಿದೆ.

ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕರಾಗಿದ್ದ (ಅಭಿವೃದ್ಧಿ)
ಬಿ.ಕೆ ರುದ್ರಮುನಿ ಅವರನ್ನು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರನ್ನಾಗಿ ನೇಮಿಸಿ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ.

Share this Article