ಸೋಮವಾರ ಫೆ. 19ರಂದು ನಗರದಲ್ಲಿ ಅದ್ದೂರಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ

ಸಮಗ್ರ ಪ್ರಭ ಸುದ್ದಿ
2 Min Read

ಗದಗ: ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಒಂದು ಜಾತಿ-ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಅವರೊಬ್ಬ ಅಖಂಡ ಹಿಂದೂಗಳ ಆರಾಧ್ಯ ದೈವರಾಗಿದ್ದಾರೆ. ಇಂತಹ ಮಹಾನ್ ಪರಾಕ್ರಮಿಯ ಜಯಂತ್ಯೋತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವು ಅದ್ದೂರಿಯಾಗಿ ಆಚರಿಸಲು ತಿರ್ಮಾನಿಸಲಾಗಿದೆ ಎಂದು 2024ರ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವದ ಅಧ್ಯಕ್ಷ ಜಗದೀಶ್ ಎಸ್. ಪಿ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತಿಚಿನ ದಿನಗಳಲ್ಲಿ ಭಕ್ತ ಕನಕದಾಸ, ಜಗಜ್ಯೋತಿ ಬಸವೇಶ್ವರರು, ಸಂಗೋಳ್ಳಿ ರಾಯಣ್ಣನವರನ್ನು ಒಂದು ಜಾತಿಗೆ ಸೀಮಿತಗೋಳಿಸಲಾಗುತ್ತದೆ. ಆದರೆ, ಅವರೆಲ್ಲರೂ ಜಾತಿ ಬೇದವನ್ನು ಹೋಗಲಾಡಿಸಲು ಹೋರಾಡಿದವರು. ಹಾಗೇ ಛತ್ರಪತಿ ಶಿವಾಜಿ ಮಹಾರಾಜರನ್ನು ನಾವು ಒಂದು ಜಾತಿಗೆ ಸೀಮಿತ ಮಾಡದೇ ಅಖಂಡ ಹಿಂದೂಗಳ ದೊರೆ ಎಂದು ಪರಿಗಣಿಸಿ ಅವರನ್ನು ಆರಾಧನೆ ಮಾಡಬೇಕು. ದಲಿತರನ್ನು ಹಿಂದೂ ಸಂಘಟನೆಗಳು ಕಡೆಗಣಿಸುತ್ತವೆ ಎನ್ನುವ ಮಾತು ಇಷ್ಟು ದಿನ ಕೇಳಿ ಬರುತ್ತಿತ್ತು. ಆದರೆ, ನನ್ನನ್ನು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಅಧ್ಯಕ್ಷನನ್ನಾಗಿ ಮಾಡುವ ಮೂಲಕ ಅಂತವರ ಬಾಯಿಗೆ ಬೀಗ ಜಡಿದಂತೆ ಆಗಿದೆ ಎಂದರು.

2024ರ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವದ ಉಪಾಧ್ಯಕ್ಷ ಅನಿಲ ಅಬ್ಬಿಗೇರಿ ಅವರು ಮಾತನಾಡಿ, ಕಳೆದ 8-10ವರ್ಷದಿಂದ ಶಿವಾಜಿ ಜಯಂತಿ ಅದ್ದೂರಿಯಾಗಿ ನಡೆದುಕೊಂಡು ಬಂದಿದೆ. ಅದೇ ರೀತಿ ಈ ವರ್ಷವು ಅಷ್ಟೆ ಅದ್ದೂರಿಯಾಗಿ ಮಾಡಲು ಜಗದೀಶ ಪೂಜಾರ ಅವರ ಅಧ್ಯಕ್ಷತೆಯಲ್ಲಿ ನಡೆಸಲು ತಿರ್ಮಾನಿಲಸಾಗಿದೆ. ನೂತನ ಅಧ್ಯಕ್ಷರು ಹಿರಿಯ ಮಾರ್ಗದರ್ಶನದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. “ಚಿತ್ರದಲ್ಲಿ ಛತ್ರಪತಿ” ಸ್ಪರ್ಧೆ ನಡೆಸಲು ತಿರ್ಮಾನಿಸಲಾಗಿದೆ. ಜೊತೆಗೆ, ರಕ್ತಧಾನ ಕಾರ್ಯಕ್ರಮ ಆಯೊಜಿಸಲಾಗಿದ್ದು, ಆಟೋ ಜಾಥಾ ಕಾರ್ಯಕ್ರಮ ನಡೆಯಲಿದೆ ಎಂದರು.

ರಾಚೋಟೇಶ್ವರ ದೇವಸ್ಥಾನದಿಂದ ಫೆ. 19ಸೋಮವಾರ ರಂದು ಶಿವಾಜಿ ಮೇರವಣಿಗೆ ನಡೆಯಲಿದ್ದು, ಬಸವೇಶ್ವರ ಸರ್ಕಲ್, ಟಾಂಗಾ ಕೂಟ್, ಮಹೇಂದ್ರಕರ್ ಸರ್ಕಲ್, ಗಾಂಧಿ ಸರ್ಕಲ್ ಮಾರ್ಗವಾಗಿ ನಂತರ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬಹಿರಂಗ ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು.

25ಸಾವಿರ ಜನರಿಗೆ ಊಟದ ವ್ಯವಸ್ಥೆ:

ಶಿವಾಜಿ ಮಹಾರಾಜರ ಜಯಂತಿಗೆ ಆಗಮಿಸುವರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಹತ್ತಿಕಾಳ ಕೂಟ, ಟಾಂಗಾ ಕೂಟ, ಮುನ್ಸಿಪನ್ ನಲ್ಲಿ ಸುಮಾರು 25ಸಾವಿರ ಜನರಿಗೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ, 8ವರ್ಷದಿಂದ ಶಿವಾಜಿ ಜಯಂತಿ ಆಯೋಜಿಸಿದ್ದು, ಜಯಂತಿಗೆ ನೀಡಿದ್ದ ದೇಣಿಗೆ ಹಣದಲ್ಲಿ ಒಂದು ಎಕರೆ ಜಾಗ ಖರಿದಿ ಮಾಡಲಾಗಿದೆ. ಆ ಜಾಗದಲ್ಲಿ ಗೋಶಾಲೆ, ದೇವಸ್ಥಾನ, ವಿಧ್ಯಾರ್ಥಿಗಳಿಗೆ ವಸತಿ ಶಾಲೆ ನಿರ್ಮಿಸಲು ತಿರ್ಮಾನಿಸಲಾಗಿದೆ. ಹಾಗಾಗಿ ಎಲ್ಲ ಹಿಂದೂ ಬಾಂಧವರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೋಳಿಸಬೇಕು ಎಂದು ಶ್ರೀರಾಮ ಸೇನಾ ರಾಜ್ಯ ಕಾರ್ಯದರ್ಶಿ ರಾಜು ಖಾನಪ್ಪನವರ ಹೇಳಿದರು.

ಈ ಸಂದರ್ಭದಲ್ಲಿ ರಾಜಣ್ಣ ಮಲ್ಲಾಡದ, ಅಜ್ಜಣ್ಣ ಮಲ್ಲಾಡದ, ಸಹದೇವ ಗಣಾಚಾರಿ, ಮಲ್ಲಿಕಾರ್ಜುನ ಚಿಂಚಲಿ, ಕಿಸನ್ ಮೇರವಾಡೆ, ಸುನೀಲ ಕಬಾಡಿ, ಮಹೇಶ ರೋಖಡೆ, ಶಿವಯೋಗಿ ಹಿರೇಮಠ, ಸೋಮು ಗುಡಿ, ರಾಜು ಗದ್ದಿ ಸೇರಿದಂತೆ ಅನೇಕ ಹಿಂದೂಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Share this Article