ಗದಗ: ವೀರಪ್ಪಜ್ಜನ ರಥ ಹಾಗೂ ನರಸಾಪೂರ ದಿಂದ ಬಂದ ರಂಗಪ್ಪಜ್ಜನ ರಥ ಗುರು ಶಿಷ್ಯರ ಜೋಡು ರಥೋತ್ಸವವು ಇದೇ ತಿಂಗಳು ದಿನಾಂಕ 19 ರಂದು ನಡೆಯಲಿದೆ ಎಂದು ರಂಗಾವದೂತರ ಜೀರ್ಣೋದ್ಧಾರ ಸೇವಾ ಸಮಿತಿ ಕಾರ್ಯದರ್ಶಿ ಗಣೇಶಸಿಂಗ್ ಬ್ಯಾಳಿ ಹೇಳಿದರು ಇಂದು ನಗರದ ಪತ್ರಿಕಾ ಭವನದಲ್ಲಿ ಹೇಳಿದರು.
ಕಳೆದ 8-10 ವರ್ಷಗಳಲ್ಲಿ ಪೂಜ್ಯರಂಗಾವಧೂತರ ತಪೋಭೂಮಿಯಲ್ಲಿ ಸರಕಾರದ ಅನುದಾನ, ಶಾಸಕರ ಪ್ರದೇಶಾಭಿವೃದ್ಧಿ ಅನುದಾನ, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಹಾಗೂ ಭಕ್ತರ ದೇಣಿಗೆ ಮುಖಾಂತರ ರಂಗಪ್ಪಜ್ಜ ಸಮುದಾಯ ಭವನ, ದಾಸೋಹ ಭವನ, ಶ್ರೀ ರಂಗಾವಧುತರ ಧರ್ಮದ ಕಟ್ಟೆ ಮೇಲ್ಚಾವಣಿ ನಿರ್ಮಿಸಿ ಅಭಿವೃದ್ಧಿ ಪಡಿಸಲಾಗಿದೆ.
ಪ್ರಸ್ತುತ ಜಾತ್ರೆಯಿಂದ ರಂಗಪ್ಪಜ್ಜನ ಮಠದಲ್ಲಿ 25 ಲಕ್ಷ ರೂ.ಗಳ ಗಡ್ಡಿ ತೇರು ಬರಲಿದೆ ಎಂದು ಗಣೇಶಸಿಂಗ್ ಬ್ಯಾಳಿ ತಿಳಿಸಿದರು.
95ನೇ ಜಾತ್ರಾಮಹೋತ್ಸವ ಅಂಗವಾಗಿ 95 ಕುಂಬ,95 ಮಂಗಳಾರತಿಗಳು ಸುಮಂಗಲೆಯರು ಪಾಲ್ಗೊಳ್ಳವುದು ವಿಶೇಷ ಹೋಮ ಹವನಗಳು ಹೊಸದಾಗಿ ನಿರ್ಮಾಣಗೊಂಡ ಗಡ್ಡಿ ತೇರಿಗೆ ವಿಧಿ ವಿಧಾನಗಳಂತೆ 18-2-2024 ರವಿವಾರ ಸಂಜೆ ರಂಗಪ್ಪಜ್ಜನ ಮಠದ ಆವರಣದಲ್ಲಿ ಹೋಮಗಳೊಂದಿಗೆ ಗಣಪತಿ ಪೂಜೆ ನೆರವೇರುವುದು. 19-2-2024 ಸೋಮವಾರ ಬೆಳಗಿನ ಜಾವ ಬ್ರಾಜ್ಯ ಮೂಹೂರ್ತ 4- 30ಗಂಟೆಯಿಂದ 5.30 ಗಂಟೆಯೊಳಗೆ ಶಿಕ್ಷೆಗಳಾದ ಕಾಳಪ್ಪ ಆಚಾರ್ಯ ದೃಷ್ಟಿ ಮಿಲನ, ರಥದ ಪೂಜೆ ನೆರವೇರುವುದು ತದನಂತರ ಸಾಂಪ್ರದಾಯದಂತೆ ಗಡ್ಡಿ ತೇರಿಗೆ ಚಾಲನೆ ನೀಡುವ ಕಾರ್ಯಕ್ರಮವಿದ್ದು ಇವೆರಡು ದಿನ ನಡೆಯುವ ಪೂಜೆಗಳಿಗೆ ಸದ್ಭಕ್ತರು ಕುಟುಂಬ ಸಮೇತ ಪಾಲ್ಗೊಳ್ಳಬೇಕೆಂದು ಸಮಿತಿ ಪರವಾಗಿ ಗಣೇಶಸಿಂಗ್ ಬ್ಯಾಳಿ ಮನವಿ ಮಾಡಿಕೊಂಡರು.
ಸುದ್ದಿಗೋಷ್ಟಿಯಲ್ಲಿ ಸಮಿತಿ ಅಧ್ಯಕ್ಷ ಎಸ್. ಆರ್. ಬಸವಾ, ಅಮರೇಶ ಬ್ಯಾಗಿ, ಮೈಲಾರಪ್ಪ ಆರಣೆ, ನಿಂಗಪ್ಪ ಬೇಗೂರ, ವಿಜಯ ಕಬಾಡಿ, ರುದ್ರಪ್ಪ ಬಾದರದಿನ್ನಿ, ಅಶೋಕ ಮುಳಗುಂದ, ಭೋಜಪ್ಪ ಹೆಗ್ಗಡಿ, ರಾಜು ಕಟಗಿ, ರಂಗಪ್ಪ ದ್ಯಾವಣಗಿ, ಮರ್ಗಾಸಿಂಗ್ ಕಾವೇವಾಲ, ಎಂ.ಎನ್. ಐಲಿ. ಮಹದೇವಸಾ ಮೇರವಾಡೆ ಮುಂತಾದವರು ಉಪಸ್ಥಿತರಿದ್ದರು.