ಗದಗ : ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಲೋಯೋಲಾ ಪ್ರೌಢ ಶಾಲೆ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರದಂದು ಲೋಯೋಲಾ ಪ್ರೌಢಶಾಲೆಯಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು.
ಸಮಾರಂಭ ಉದ್ಘಾಟಿಸಿದ ಡಾ. ಅರುಂಧತಿ ಕೆ ಇವರು ಮಾತನಾಡಿ ಜಾಗತಿಕವಾಗಿ ಹದಿಹರೆಯದ ವಿಧ್ಯಾರ್ಥಿಗಳು ಅನೇಕ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾನಸಿಕ ದೈಹಿಕ ಸಾಮಾಜಿಕ ಆರೋಗ್ಯದ ಹಿತಕ್ಕಾಗಿ ಸಮಾಜದಲ್ಲಿ ಒಳ್ಳೆಯ ಸಂಪನ್ಮೂಲ ವೈಕ್ತಿಗಳಾಗಿ ಬೆಳೆಯಬೇಕೆಂದು ಕರೆ ನೀಡಿದರು.
ಇಂದಿನ ಯುವಕರು ಸಧೃಢ ಆರೋಗ್ಯವನ್ನು ಹೊಂದಿ, ದೇಶದ ಭವಿಷ್ಯ ರೂಪಿಸುವಲ್ಲಿ ಕೈಜೋಡಿಸಬೇಕೆಂದು ತಿಳಿ ಹೇಳಿದರು. ಹೆಚ್.ಐ.ವಿ. ಏಡ್ಸ್ ಕುರಿತು ಮಾತನಾಡಿ ಹೆಚ್.ಐ.ವಿ. ನಾಲ್ಕು ಮಾರ್ಗದಿಂದ ಹರಡುತ್ತಿದ್ದು, ಆ ನಾಲ್ಕು ಮಾರ್ಗಗಳನ್ನು ಸುರಕ್ಷಿತ ಉಪಕರಣಗಳನ್ನು ಬಳಸುವ ಮೂಲಕ ಹೆಚ್.ಐ.ವಿ. ಇಂದ ದೂರ ಇರಬೇಕೆಂದು ವಿವರಿಸಿದರು. ಹೆಚ್.ಐ.ವಿ. ಸೋಂಕಿತರಿಗೆ ಶೇ. 10 ರಷ್ಟು ತೂಕ ಕಡಿಮೆಯಾಗುವುದು ಹಾಗೂ ನಿರಂತರ ಬೇಧಿಯಾಗುವುದು, ಚರ್ಮದ ಖಾಯಿಲೆಗಳು ಕಾಣಿಸಿಕೊಳ್ಳುವುದು ಹಾಗೂ ಅವಕಾಶವಾದಿ ಸೋಂಕುಗಳು ನಿರಂತರ ಜ್ವರ ಇದ್ದರೆ ಹೆಚ್.ಐ.ವಿ. ಸೋಂಕು ಇರಬಹುದೆಂದು ಶಂಕಿಸಿ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ ಚಿಕಿತ್ಸೆ ಪಡೆದುಕೊಳ್ಳಲು ತಿಳಿಸಿದರು.
ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರಾದ ಬಿ.ಬಿ. ಲಾಳಗಟ್ಟಿ ಅವರು ಮಾತನಾಡಿ ರಾಷ್ಟ್ರೀಯ ಯುವ ದಿನಾಚರಣೆಯ ಮಹತ್ವವನ್ನು ತಿಳಿಸುತ್ತಾ ಇಂದಿನ ಯುಗದಲ್ಲಿ ಯುವಕರು ಆರೋಗ್ಯ ಅರಿವವನ್ನು ಮೂಡಿಸಿ, ಶಿಕ್ಷಣವನ್ನು ಪರಿವರ್ತಿಸುವುದು ಎನ್ನುವ ಘೋಷ ವಾಕ್ಯದೊಂದಿಗೆ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಶಿಕ್ಷಣವನ್ನು ಹೆಚ್ಚು ಪ್ರಸ್ತುತವೆಂದರು. ಯುವಕರು ಸನ್ನಡತೆಯನ್ನು ಅಳವಡಿಸಿಕೊಳ್ಳಬೆಂದು ತಿಳಿಸಿದರು. ವಿಶ್ವದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರು ಯುವಕರ ಕಣ್ಮಣಿಯಾಗಿದ್ದು ಅವರು ಹೇಳುವಂತೆ ಪ್ರಯತ್ನವೆಂಬ ಚಂದ್ರನ್ನನ್ನು ಬೆಳಗಿಸಿದಂತೆ ಯಶಸ್ಸೆಂಬ ಬೆಳದಿಂಗಳು ಸಿಗುತ್ತದೆ ಎಂದರು.
ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ಯ ಹೆಚ್.ಐ.ವಿ. ಏಡ್ಸ್ ಕುರಿತು ಬಿತ್ತಿಚಿತ್ರ ಸ್ಪರ್ಧೇಯಲ್ಲಿ ವಿಜೇತರಾದ ಸgಕಾರಿ ಪ್ರೌಢಶಾಲೆ ಹರ್ಲಾಪೂರದ ಕುಮಾರ ಕೊಟ್ರೇಶ ಮುಂಡರಗಿ ಹಾಗೂ ಸಿ.ಡಿ.ಓ. ಜೈನ ಪ್ರೌಢಶಾಲೆಯ ತನುಶ್ರೀ ಹುಚ್ಚಣ್ಣವರ ಪ್ರಥಮ, ಲೋಯೋಲಾ ಪ್ರೌಢಶಾಲೆಯ ಕುಮಾರ ಚಿನ್ಮಯ ಬಂಡಿ ಹಾಗೂ ಜೆ.ಸಿ. ಪ್ರೌಢಶಾಲೆಯ ಜೈಲಾ ಖಾಜಿ ದ್ವಿತೀಯ, ನಗರಸಭೆ ಪ್ರೌಢಶಾಲೆಯ ಕುಮಾರಿ ಐಶ್ವರ್ಯ ಆಲೂರ ತ್ರಿತೀಯ ಸ್ಥಾನಗಳಿಸಿದ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ನಂತರ ಪ್ರೌಢಶಾಲೆಯ ಪ್ರಾಚಾರ್ಯರಾದ ಶ್ರೀಮತಿ ರೇನಿತಾ ರವರು ಅಧ್ಯಕ್ಷೀಯ ನುಡಿಗಳಲ್ಲಿ ಮಾತನಾಡಿ ಇಂದಿನ ಯುವಕರು ದುಶ್ಚಟಗಳಿಂದ ದೂರವಿರಬೇಕೆಂದು ಹಾಗೂ ಸನ್ನಡತೆಯನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಸಮಾರಂಭದಲ್ಲಿ ಲೋಯೋಲಾ ಪ್ರೌಢಶಾಲೆಯ ಶಿಕ್ಷಕರಾದ ಶ್ರೀಮತಿ ಜಯಶ್ರೀ, ಹರ್ಲಾಪೂರ, ನಗರ¸ಭೆ ಹಾಗೂ ಸಿ.ಟಿ.ಓ. ಜೈನ ಪ್ರೌಢಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
ಕುಮಾರಿ ಜೋತ್ಸ್ನಾ ಪಾರ್ಥಿಸಿದರು. ಪ್ರೌಢಶಾಲೆಯ ಶ್ರೀಮತಿ ಜಯಶ್ರೀ ಸ್ವಾಗತಿಸಿದರು. ಕುಮಾರಿ. ಶಫೀಕಾ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ಪೂಜಾ ವಂದಿಸಿದರು.