ಗದಗ:ಕೇಂದ್ರದ ಬಿಜೆಪಿ ಸರ್ಕಾರವು ಉತ್ತರ ಕರ್ನಾಟಕಕ್ಕೆ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಅನ್ಯಾಯವನ್ನು ಮಾಡುತ್ತಿದ್ದಾರೆ ಅಂದರೆ ಬಜೆಟ್ ವಿಚಾರದಲ್ಲಿ ಅನುದಾನ ಕೊಡುವ ವಿಚಾರದಲ್ಲಿ ಮೂಲಭೂತ ಸೌಲಭ್ಯಗಳನ್ನು ಘೋಷಣೆ ಮಾಡುವ ವಿಚಾರದಲ್ಲಿ ಸಂಪೂರ್ಣವಾಗಿ ಕೇಂದ್ರ ಬಿಜೆಪಿ ಸರ್ಕಾರವು ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಇದನ್ನು ತೀವ್ರವಾಗಿ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಖಂಡಿಸುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಸಂಜಯ್ ದೊಡ್ಡಮನಿ ಹೇಳಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಕೇಂದ್ರದ ಬಿಜೆಪಿ ಸರ್ಕಾರ ಕಳೆದ 5 ವರ್ಷಗಳಿಂದ ಕರ್ನಾಟಕಕ್ಕೆ ನೀಡಬೇಕಾದ ಅನುದಾನ ವಿಚಾರದಲ್ಲಿ ಸುಮಾರು 62 ಕೋಟಿ ರೂಪಾಯಿ ನಷ್ಟವಾಗಿದೆ ಕೇಂದ್ರದ ಬಿಜೆಪಿ ಸರ್ಕಾರವು ಕರ್ನಾಟಕಕ್ಕೆ ಮಲತಾಯಿ ಧೋರಣೆಯನ್ನು ತೋರುತ್ತಿದ್ದಾರೆ ಕರ್ನಾಟಕದಿಂದ ಆಯ್ಕೆಯಾದ 25 ಸಂಸದರು ತಮ್ಮದೇ ಸರ್ಕಾರಕ್ಕೆ ಮತ್ತು ಮೋದಿಯವರಿಗೆ ನಮ್ಮ ಅನುದಾನದ ಬಗ್ಗೆ ರಾಜ್ಯದ ಜನರ ಪರವಾಗಿ ಧ್ವನಿ ಎತ್ತದೆ ನರ ಸತ್ತವರಾಗಿದ್ದಾರೆ 25 ಸಂಸದರು ರಾಜ್ಯದ ಜನರ ದೃಷ್ಟಿಯಲ್ಲಿ ದುರ್ಬಲರಾಗಿದ್ದಾರೆ ರಾಜ್ಯದ ಜನ ತೀವ್ರವಾಗಿ ಖಂಡಿಸುತ್ತಾ ಮತ್ತು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರವನ್ನು ಹಾಕಬೇಕಾಗಿದೆ.
ಫೆಬ್ರುವರಿ 7ರಂದು ಕಾಂಗ್ರೆಸ್ ಪಕ್ಷದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಸಂಸತ್ ಭವನ ಮುಂದೆ ಧರಣಿ ಮಾಡುತ್ತಿದ್ದಾರೆ ಕರ್ನಾಟಕದ ಎಲ್ಲಾ ಸಂಸದರು ಮತ್ತು ಜಾತ್ಯಾತೀತವಾದ ಎಲ್ಲಾ ಪಕ್ಷದ ನಾಯಕರುಗಳು ಈ ಧರಣಿಯಲ್ಲಿ ರಾಜ್ಯದ ಪರವಾಗಿ ಭಾಗವಹಿಸಬೇಕಾಗಿದೆ ಮತ್ತು ಧರಣಿ ಮಾಡಬೇಕಾಗಿದೆ ಎಲ್ಲಾ ನಾಯಕರು ಪಕ್ಷಭೇದವನ್ನು ಬಿಟ್ಟು ಅಂದು ರಾಜ್ಯದ ಜನರ ಪರವಾಗಿ ಮತ್ತು ನಮ್ಮ ಅನುದಾನದ ಬಗ್ಗೆ ಕೇಂದ್ರ ಸರ್ಕಾರದ ಮುಂದೆ ಹೋರಾಟ ಮಾಡಿ ಅನುದಾನವನ್ನು ಪಡೆದು ನಮ್ಮ ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದ್ದಾರೆ.