ಗದಗ : ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಮುಂಡರಗಿ ನಗರದ ಅನ್ನಧಾನಿಶ್ವರ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಜರುಗಿದ ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಅಧಿಕ ಅಹವಾಲುಗಳ ಸುರಿಮಳೆ ಹರಿದವು.
ಮುಂಡವಾಡದ ಈರವ್ವ ಅವರು ತಮ್ಮ ಗಂಡನಿಗೆ ಕೊವಿಡ್ ಉಂಟಾಗಿ ನಂತರ ಬ್ಲಾಕ್ ಪಂಗಸ್ ನಿಂದಾಗಿ ಅವರು ತಂಬಾ ಕಷ್ಟದಲ್ಲಿದ್ದು, ಸರ್ಕಾರದ ಸಹಾಯದನ ಕೊಡಿಸುವಂತೆ ಕೋರಿದರು. ಪ್ರತಿಯಾಗಿ ಸಚಿವರು, ಆಶ್ರಯ ಮನೆ ನೀಡಬೇಕು, ಅವರ ಆರೋಗ್ಯ ಚಿಕಿತ್ಸೆ ಯನ್ನು ಜಿಮ್ಸ್ ಆಸ್ಪತ್ರೆಯಲ್ಲಿ ಉತ್ತಮವಾಗಿ ನೀಡಬೇಕು ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕ್ರಮ ವಹಿಸಲು ತಿಳಿಸಿದರು.
ನಗರದಲ್ಲಿ ಬಿಡಾಡಿ ನಾಯಿಗಳ ಹಾವಳಿ ಹೆಚ್ಚಾಗಿದೆ, ಇವುಗಳಿಂದ ಜನಸಾಮಾನ್ಯರ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಮನವಿ ಸಲ್ಲಿಸಿದರು, ಇದಕ್ಕೆ ಸಚಿವರು ಇನ್ನು ಒಂದು ತಿಂಗಳಲ್ಲಿ ಬಿಡಾಡಿ ಬೀದಿನಾಯಿಗಳ ನಿಯಂತ್ರಣ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂಡರಗಿ ನಗರದ ವಿಶ್ಚನಾಥ ಅವರು, ಬ್ಯಾಂಕ್ ಅಧಿಕಾರಿಗಳು ರೈತರಿಗೆ ಬರಗಾಲದಲ್ಲು ಸಾಲ ವಸೂಲಿ ಮಾಡಲು ಕಿರುಕುಳ ಮಾಡುತ್ತಿದ್ದಾರೆ ಎಂದರು. ಪ್ರತಿಯಾಗಿ ಸಚಿವ ಎಚ್. ಕೆ. ಪಾಟೀಲ ಮಾತನಾಡಿ, ಒತ್ತಾಯದ ಸಾಲ ವಸೂಲಾಯಿ ತಕ್ಷಣ ನಿಲ್ಲಿಸಬೇಕು. ಸರ್ಕಾರದ ಬರ ಪರಿಹಾರ ಸಹಾಯಧನವನ್ನು ರೈತರ ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳಬಾರದು. ಈ ಕುರಿತು ಜಿಲ್ಲಾಧಿಕಾರಿ ಗಳು ಕ್ರಮ ವಹಿಸಲು ತಿಳಿಸಿದರು.
ಕಿಸಾನ ಜಾಗೃತಿ ಸಂಘದ ಅಧ್ಯಕ್ಷರಾದ ಡಿ.ಎಫ್.ಹುಗಾರ ಅವರು, ವಾರ್ಡ ನಂಬರ್ ೧೭ ರ ಗಂಡು ಮಕ್ಕಳ ಶಾಸಕರ ಮಾದರಿ ಶಾಲೆಯ ಕಂಪೌಂಡ ವವ್ಯಸ್ಥೆ ಯಿಲ್ಲವೆಂದು ಸಚಿವರ ಗಮನಕ್ಕೆ ತಂದರು, ಅಹವಾಲು ಸ್ವೀಕರಿಸಿದ ಸಚಿವ ಎಚ್.ಕೆ.ಪಾಟೀಲ್ ರವರು 2 ತಿಂಗಳ ಒಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಂ.ಎ.ರೆಡ್ಡೇರ ರವರಿಗೆ ತಿಳಿಸಿದರು.
ಮುಂದಿನ ಅಹವಾಲುನ್ನು ಸ್ವೀಕರಿಸಿ ಮಾನಸಾ ಕೃಷ್ಣಪ್ಪ ರಾಮೇನಹಳ್ಳಿ ಯವರಿಗೆ ಶ್ರವಣ ಯಂತ್ರವನ್ನು ನೀಡಲು ಆರೋಗ್ಯಧಿಕಾರಿಗಳಿಗೆ ಸೂಚಿಸಿದರು.
ತಮ್ಮ ಉತಾರದಲ್ಲಿ ೪ ಗುಂಟೆಯನ್ನು ಖರಾಬ್ ಎಂದು ನಮೂದಿಸಿದ್ದು ಅದನ್ನು ತೆಗೆಯಲು ಶಿವನಗೌಡ ವೀರನಗೌಡ ಪಾಟೀಲ್ ಅಹವಾಲನ್ನು ನೀಡಿದಾಗ ಅದನ್ನು ಒಂದು ವಾರದೊಳಗೆ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವರು, ಬಗೆಹರಿಸದಿದ್ದರೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲು ತಿಳಿಸಿದರು.
ಸ್ವಾಮಿ ವಿವೇಕಾನಂದ ಉದ್ಯಾವನವನ್ನು ಒಬ್ಬ ವೈದ್ಯರು ಪಂಚವಟಿ ಔಷದಿ ವನಕ್ಕಾಗಿ ಬಳಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹನಮಪ್ಪ ಚನ್ನದಾಸರ ಅಹವಾಲನ್ನು ಸ್ವೀಕರಿಸಿ ಫೆಬ್ರವರಿ ೫ ರೊಳಗೆ ತೆರವು ಗೊಳಿಸಿ ಸಾರ್ವಜಿಕರಿಗೆ ಅವಕಾಶ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ತಿಳಿಸಿದರು.
ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂರ್ಪಕ ಕಲ್ಪಿಸಲು ಮುಂಡವಾಡದ ಸಂಗನಗೌಡ ಶೇಖರಗೌಡ ಪಾಟೀಲ ರ ಅಹವಾಲನ್ನು ಸ್ವೀಕರಿಸಿ ೧೫ ದಿನದೊಳಗೆ ಸಮಸ್ಯೆಯನ್ನು ಪರಿಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ದುರಗವ್ವ ಬಾಗೇವಾಡಿ ರವರಿಗೆ ಭೂ ಒಡೆತನದ ಕಾಯ್ದೆ ಪ್ರಕಾರ ಅಂಬೇಡ್ಕರ್ ನಿಗಮದಿಂದ ನೀಡಿದ ಭೂಮಿಯನ್ನು ಪುಸಲಾಯಿಸಿ ಸ್ಥಳೀಯರು ತೆಗೆದುಕೊಂಡಿದ್ದು ಅದನ್ನು ಮರಳಿ ಒದಗಿಸಿಕೊಡುವಂತೆ ಮನವಿ ಮಾಡಿದಾಗ ಸ್ಪಂದಿಸಿದ ಸಚಿವರು ಈ ಪ್ರಕರಣದಲ್ಲಿರುವ ತಪ್ಪಿಸ್ಥರ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಅಂಬೇಡ್ಕರ ನಿಗಮದ ವ್ಯವಸ್ಥಾಪಕರಾದ ರಾಯ್ಕರ ಅವರಿಗೆ ತಿಳಿಸಿದರು.
ಜನತಾ ದರ್ಶನ ಕಾರ್ಯಕ್ರಮದಲ್ಲಿ ರಾಜ್ಯ ಖನಿಜ ಮತ್ತು ಖನಿಜ ಸಂಪತ್ತು ನಿಗಮದ ಅಧ್ಯಕ್ಷರು ಹಾಗೂ ರೋಣ ಕ್ಷೇತ್ರದ ಶಾಸಕರಾದ ಜಿ.ಎಸ್. ಪಾಟೀಲ, ಶಿರಹಟ್ಟಿ ಶಾಸಕರಾದ ಡಾ. ಚಂದ್ರು ಲಮಾಣಿ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್, ತಹಶಿಲ್ದಾರರ ದನಂಜಯ ಸೇರಿದಂತೆ ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಇತರರು ಇದ್ದರು.
ಮಾಶಾಸನ ಮಂಜೂರು :
ಬೆಳಗ್ಗೆ ಜನತಾ ದರ್ಶನ ಆರಂಭದಲ್ಲೇ ಮಹಿಳೆಯೋಬ್ಬಳು ತನ್ನ ಮಗ ಮಂಜುನಾಥ ಶಾಂತಯ್ಯನಮಠ ಎಂಬ ವಿಕಲಾಂಗ ಮಗನೊಂದಿಗೆ ಆಗಮಿಸಿ, ಎರಡು ಸಾವಿರ ಮಾಸಾಸನ ನೀಡಿವಂತೆ ಕೋರಿದರು, ತಕ್ಷಣ ಸಚಿವರು ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ, ಅವರಿಗೆ ಮಾಸಾಸನ ಮಂಜೂರಾತಿ ಪತ್ರವನ್ನು ಸಚಿವರು ವಿತರಣೆ ಮಾಡಿದರು.
ಜನ್ಮ ದಿನಾಂಕತಿದ್ದುಪಡಿ ಪ್ರಮಾಣ ಪತ್ರ ವಿತರಣೆ :
ಬೆಳಿಗ್ಗೆ ವಿರುಪಾಕ್ಷ ಅವರು ತಮ್ಮ ಮಗಳ ಜನ್ಮ ದಿನಾಂಕ ತಪ್ಪಾಗಿದ್ದು, ಸರಿಪಡಿಸಿ ನಿಡುವಂತೆ ಎರಡು ವರ್ಷಗಳಿಂದ ಅಲೆದಾಡಿದ್ದೇನೆ. ಸಾಧ್ಯವಾಗಿಲ್ಲ ಎಂದು ಅಮ್ಮ ಅಳಲನ್ನು ಸಚಿವರಲ್ಲಿ ಹೇಳಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವರು, ಕೂಡಲೇ ಸರಿಪಡಿಸಲು ಸೂಚಿಸಿದ್ದರಿಂದ, ೯.೯.೨೦೦೦ ಎಂದು ತಪ್ಪಾದ ಜನ್ಮ ದಿನಾಂಕವನ್ನು ೯.೯.೨೦೦೨ ಎಂದು ತಿದ್ದುಪಡಿ ಮಾಡಿ ಶಿಕ್ಷಣ ಇಲಾಖೆ ಅವರು ನೀಡಿದ್ದಾರೆ. ಈ ಪ್ರಮಾಣ ಪತ್ರವನ್ನು ಇಲ್ಲಿಯೇ ಅವರಿಗೆ ವಿತರಿಸಲಾಯಿತು.