ರೋಣ : ಕೂಸಿನ ಮನೆ ಕಾರ್ಯಕ್ರಮವು ನರೇಗಾ ಯೋಜನೆಯ ಒಂದು ಭಾಗವಾಗಿದ್ದು ಗ್ರಾಮೀಣ ಪ್ರದೇಶದ ಸಾಮಾನ್ಯ ವರ್ಗದ ಮಕ್ಕಳ ಲಾಲನೆ-ಪಾಲನೆಗೆ ರಾಜ್ಯ ಸರ್ಕಾರದ ಕೂಸಿನ ಮನೆ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ನೀವು ಗ್ರಾಮದ ಮಕ್ಕಳ ಲಾಲನೆ, ಪಾಲನೆ ಮಾಡುವ ಮೂಲಕ ಗ್ರಾಮದ ಮಕ್ಕಳಿಗೆ ತಾಯಿಯಾಗಿ ಕೆಲಸ ಮಾಡೋ ಸೌಭಾಗ್ಯ ನಿಮಗೆ ಸಿಕ್ಕಿದೆ ದೊರಕಿದೆ ಅಂತಾ ರೋಣ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ರವಿ ಎ.ಎನ್ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಗುರು ಭವನದಲ್ಲಿ ತಾಲೂಕ ಪಂಚಾಯತ ವತಿಯಿಂದ ಆಯೋಜಿಸಿದ್ದ ಕೂಸಿನ ಮನೆ ಆರೈಕೆದಾರರ ಮೂರು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕೂಸಿನ ಮನೆ ಯೋಜನೆಯು ಸಹ ಮಹಿಳಾ ಸಭಲಿಕರಣ ಮಾಡುವ ದೃಷ್ಟಿಯಿಂದ ಆರಂಭವಾಗಿದ್ದು ನಿಮ್ಮ ಗ್ರಾಮದ ಬಂಧುಗಳು, ನೆರೆಹೊರೆಯವರು, ಗ್ರಾಮಸ್ಥರು ಗ್ರಾಮದಲ್ಲಿ ದುಡಿಯಲಿಕ್ಕೆ ಹೋಗುತ್ತಾರೆ ಆ ಸಂದರ್ಭದಲ್ಲಿ ತಾವು ಅವರ ಮಕ್ಕಳನ್ನು ಆರೈಕೆ ಮಾಡುವ ಕೆಲಸ ಮಾಡಬೇಕಾಗುತ್ತದೆ, ಅವರಿಗೂ ಸಹ ಅಷ್ಟೇ ಹಣ ತಮಗೂ ಸಹ ಅಷ್ಟೇ ಹಣ ನರೇಗಾ ಯೋಜನೆಯಡಿ ತಮಗೆ ಬರುತ್ತದೆ ಎಂದರು..
ತಾವು ಲಾಲನೆ-ಪಾಲನೆ ಮಾಡುವ ಜೊತೆಗೆ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರವನ್ನು ಕೊಟ್ಟು ಅವರನ್ನು ಆರೈಕೆ ಮಾಡಬೇಕು ಇದರಿಂದಾಗಿ ಮಕ್ಕಳ ಪೌಷ್ಟಿಕಾಂಶದ ಕೊರತೆಯೂ ನೀಗುತ್ತದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶದ ಮಕ್ಕಳ ಹಾಗೂ ಮಹಿಳೆಯರ ಶ್ರಯೋಭಿವೃದ್ಧಿಯ ಉದ್ದೇಶದಿಂದ ರಾಜ್ಯ ಸರ್ಕಾರ ಕೂಸಿನ ಮನೆ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಪ್ರಾರಂಭದಲ್ಲಿ ತಾಲೂಕಿನಲ್ಲಿ 10 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೂಸಿನ ಮನೆ ಆರಂಭಿಸಿ ಅದರ ಕೇರ್ ಟೇರ್ಸ್ ಗಳಿಗೆ(ಆರೈಕೆದಾರರು) ಮೂರು ದಿನಗಳ ತರಬೇತಿಯನ್ನು ನೀಡುತ್ತಿರುವುದು ಸಂತೋಷದ ವಿಚಾರವೆಂದರು.
ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಐಇಸಿ ಸಂಯೋಜಕರಾದ ವೀರಭದ್ರಪ್ಪ ಸಜ್ಜನ ಮಾತನಾಡಿ, ಗದಗ ಜಿಲ್ಲೆಯಲ್ಲಿ ಒಟ್ಟು ೧೦೯ ಕೂಸಿನ ಮನೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಅದರಂತೆ ಮೊದಲ ಹಂತದಲ್ಲಿ ೬೯ ಕೂಸಿನ ಮನೆಗಳನ್ನು ಜಿಲ್ಲೆಯಾದ್ಯಂತ ಆರಂಭಿಸಲಾಗುತ್ತಿದ್ದು, ರೋಣ ತಾಲೂಕಿನಲ್ಲಿ ಒಟ್ಟು 10 ಕೂಸಿನ ಮನೆಗಳನ್ನು ಅರಂಭಿಸಲಾಗುತ್ತಿದೆ ಎಂದರು. ಸರ್ಕಾರ ಜಾರಿಗೆ ತಂದಿರುವ ಕೂಸಿನ ಮನೆ ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವದ ಬಗ್ಗೆ ಆರೈಕೆದಾರರಿಗೆ ಮಾಹಿತಿ ನೀಡಿದರು.
ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಸಸಿಗೆ ನೀರೂಣಿಸುವ ಮೂಲಕ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ರಿಯಾಜ ಖತೀಬ್ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ), ಶಿವಯೋಗಿ ರಿತ್ತಿ ಸಹಾಯಕ ನಿರ್ದೇಶಕರು (ಪಂಚಾಯತ ರಾಜ್), ಶ್ರೀಮತಿ ಮಂಜುಳಾ ಗುರಾಣಿ ಹಿರಿಯ ಮೇಲ್ವಿಚಾರಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೋಣ, , ಅಬ್ಬಿಗೇರಿ, ಹೊಸಳ್ಳಿ, ಕುರಹಟ್ಟಿ, ಕೌಜಗೇರಿ, ಬೆಳವಣಿಕಿ, ಹೊಳೆ ಆಲೂರು, ಹೊಳೆಮಣ್ಣೂರು ಗ್ರಾಮ ಪಂಚಾಯತಿಯ ಕೂಸಿನ ಮನೆ ಆರೈಕೆದಾರರು ಭಾಗವಹಿದ್ದರು. ತಾಲೂಕು ಪಂಚಾಯತ ಐಇಸಿ ಕೊ ಅರ್ಡಿನೇಟರ್ ಮಂಜುನಾಥ ಅವರು ನಿರೂಪಿಸಿ ವಂದಿಸಿದರು.