ಗದಗ: ನಾಳೆ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಗದಗ ನಗರದಲ್ಲೂ ಕೂಡಾ ನಾಳೆ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು ನಗರದ ಟ್ಯಾಗೋರ್ ರಸ್ತೆಯ ಮಹಾಂತೇಶ್ವರ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ ಭರದಿಂದ ಸಾಗಿದೆ. ಓಣಿಯ ಮಹಾಂತ ಯುವಕ ಬಳಗದಿಂದ ಬೆಳಿಗ್ಗೆಯಿಂದಲೇ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಗಿದ್ದು ನಾಳಿನ ಸಂಭ್ರಮಕ್ಕೆ ಸಿಧ್ಧತೆ ನಡೆಸಿದ್ದಾರೆ. ಮಹಾಂತೇಶ್ವರ ದೇವಸ್ಥಾನದಲ್ಲಿ ನಾಳೆ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದ್ದು ಸಂಜೆ ಓಣಿಯ ಮಹಾಂತ ಮಹಿಳಾ ಬಳಗದಿಂದ ದೀಪೋತ್ಸವ ಜರುಗಲಿದೆ.
ಸ್ವಚ್ಛತಾ ಕಾರ್ಯದಲ್ಲಿ ಮಹಾಂತ ಯುವಕ ಬಳಗದ ಹಿರಿಯರಾದ ಪಂಡಿತಯ್ಯ ಬಣ್ಣದನೂಲಮಠ, ದೇವಪ್ಪ ಮುಗಳಿ, ಸುರೇಶ ಬಳಿಗಾರ, ಅಶೋಕ ಕಡಿವಾಳ ಸೇರಿದಂತೆ ಉತ್ಸಾಹಿ ಯುವಕರಾದ ಬಾಹುಬಲಿ ಜೈನರ್, ಪ್ರದೀಪ್ ಕಡಿವಾಲ್, ರವಿ ಹೊಸೂರ, ಮಂಜು ದೇಸಾಯಿ, ಸಿದ್ದು ಪ್ರಚಾರ್ಣವರ, ಪ್ರಕಾಶ ಲಮಾಣಿ ಅವರಿಗೆ ಸ್ವಚ್ಛತೆ ಮಾಡಿದ್ರು.